ಹೈದರಾಬಾದ್​:ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳಿಗೆ ಭೇಟಿ ನೀಡುವಾಗ ಅವರನ್ನು ಸ್ವಾಗತಿಸುವಲ್ಲಿ ಆಯಾ ರಾಜ್ಯದ ಮುಖ್ಯಮಂತ್ರಿಗಳು ಅನುಸರಿಸಬೇಕಾದ ಶಿಷ್ಟಾಚಾರವನ್ನು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​​ ಅವರು ಮತ್ತೊಮ್ಮೆ ಉಲ್ಲಂಘಿಸಿದ್ದಾರೆ.
ಎರಡು ದಿನಗಳ ಹೈದರಾಬಾದ್​ ಭೇಟಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು (ಜುಲೈ 2) ಹೈದರಾಬಾದ್​ಗೆ ಬಂದಿಳಿಯಲಿದ್ದಾರೆ. ಆದರೆ, ಪ್ರಧಾನಿ ಅವರನ್ನು ಸಿಎಂ ಕೆಸಿಆರ್​ ಸ್ವಾಗತಿಸುವುದಿಲ್ಲ. ತಮ್ಮ ಸಚಿವ ಸಂಪುಟದ ಪಶುಸಂಗೋಪನೆ, ಮೀನುಗಾರಿಕೆ, ಡೈರಿ ಅಭಿವೃದ್ಧಿ ಮತ್ತು ಸಿನಿಮಾಟೋಗ್ರಫಿ ರಾಜ್ಯ ಸಚಿವರಾದ ತಲಸನಿ ಶ್ರೀನಿವಾಸ್​ ಯಾದವ್​ ಅವರನ್ನು ಪ್ರಧಾನಿ ಸ್ವಾಗತಕ್ಕೆ ಕೆಸಿಆರ್​ ನಿಯೋಜಿಸಿದ್ದಾರೆ.
ಪ್ರಧಾನಿ ಮೋದಿ ಇಂದು ಮಧ್ಯಾಹ್ನ 2.55ಕ್ಕೆ ಹೈದರಾಬಾದ್​ನ ಬೆಗುಂಪೇಟ್​ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಇದಾದ ಬಳಿಕ ಹೆಲಿಕಾಪ್ಟರ್ ಮೂಲಕ ಹೈದರಾಬಾದ್​ನ ನೋವೊಟೆಲ್​ ಹೊಟೇಲ್‌ಗೆ ತೆರಳಲಿದ್ದಾರೆ. ಸಂಜೆ 4ರಿಂದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾನುವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ 360 ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ. ಎರಡು ದಿನಗಳ ಕಾಲ ಪ್ರಧಾನಿ ಮೋದಿ ಅವರು ಹೈದರಾಬಾದ್​ನಲ್ಲೇ ಇರಲಿದ್ದಾರೆ.
ಇಂದು ಮಧ್ಯಾಹ್ನ ಆಗಮಿಸಲಿರುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಸಿಎಂ ಕೆಸಿಆರ್​ ಬರುತ್ತಿಲ್ಲ. ಬದಲಾಗಿ ಅವರು ಪ್ರತಿಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್​ ಸಿನ್ಹಾ ಅವರನ್ನು ಅದೇ ಸಮಯದಲ್ಲಿ ಬರಮಾಡಿಕೊಳ್ಳಲಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಗೆ ಟಾಂಗ್​ ಕೊಡಲು ಕೆಸಿಆರ್​ ಪ್ಲಾನ್​ ಮಾಡಿಕೊಂಡಿರುವಂತೆ ಕಾಣುತ್ತಿದೆ.
ಕೆಸಿಆರ್​ ಶಿಷ್ಟಾಚಾರ ಉಲ್ಲಂಘಿಸಿರುವುದು ಇದೇ ಮೊದಲೇನಲ್ಲ. ಕಳೆದ ಫೆಬ್ರುವರಿಯಲ್ಲಿ ಪ್ರಧಾನಿ ಮೋದಿ ಹೈದರಾಬಾದ್‌ಗೆ ಭೇಟಿ ನೀಡಿದ್ದರು. 11ನೇ ಶತಮಾನದ ವೈಷ್ಣವ ಸಂತ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ವೇಳೆ ಕೆಸಿಆರ್ ಅವರು ಕೋವಿಡ್ ಕಾರಣ ಹೇಳಿ ಮೋದಿ ಸ್ವಾಗತ ಕಾರ್ಯಕ್ರಮದಿಂದ ದೂರ ಉಳಿದಿದ್ದರು.
ಮೇ 26 ರಂದು ಪ್ರಧಾನಿ ಮೋದಿ ಅವರು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ 20 ವರ್ಷಗಳ ಆಚರಣೆಗಾಗಿ ಹೈದರಾಬಾದ್‌ನಲ್ಲಿದ್ದರು. ಆ ಸಮಯದಲ್ಲಿ ಮುಖ್ಯಮಂತ್ರಿ ಕೆಸಿಆರ್ ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಸೂಚಿಯೊಂದಿಗೆ ಮಿಂಚಿನ ಪ್ರವಾಸಗಳನ್ನು ನಡೆಸುತ್ತಿದ್ದರು ಮತ್ತು ಅದೇ ದಿನ ದೇವೇಗೌಡರನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದರು.
ಈ ಬಾರಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಎರಡು ದಿನಗಳ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ, ಹೈದರಾಬಾದ್​ಗೆ ಭೇಟಿ ನೀಡುತ್ತಿದ್ದು, ಇದರಲ್ಲಿ ಬಿಜೆಪಿ ವರಿಷ್ಠರು, ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ನೊವೊಟೆಲ್ ಹೋಟೆಲ್‌ನಲ್ಲಿ ಪ್ರಧಾನಿ ವಾಸವಿರಲಿದ್ದಾರೆ.(ಏಜೆನ್ಸೀಸ್​)
ಅಮಿತ್​ ಷಾ, ಜೆ.ಪಿ. ನಡ್ಡಾ ಭೇಟಿಗೆ ಪ್ರಯತ್ನ: ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆ

ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದ ಮೋಸ್ಟ್​ ವಾಂಟೆಡ್ ವಂಚಕ ಮುಂಬೈನಲ್ಲಿ ಸೆರೆ

ಲಸಿಕೆ ಹಾಕಿದ್ರು ರೇಬೀಸ್​ನಿಂದ ಯುವತಿ ಗುಣವಾಗಲಿಲ್ಲ ಯಾಕೆ? ತನಿಖೆಯಲ್ಲಿ ಭಯಾನಕ ಸಂಗತಿ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 19 =
Remember me
