ತಿರುವನಂತಪುರಂ:ಯೂಟ್ಯೂಬ್​ ವಿಡಿಯೋ ನೆರವಿನಿಂದ ಪಿಯು ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಆತಂಕಕಾರಿ ಘಟನೆ ಕೇರಳದ ಮಲಪ್ಪುರಂನಲ್ಲಿ ಇದೇ ತಿಂಗಳ 20ರಂದು ನಡೆದಿದೆ.
ಮಗಳ ಕೋಣೆಯಲ್ಲಿ ಮಗು ಅಳುವ ಶಬ್ದ ಕೇಳಿದ ಪಾಲಕರು ಬಾಗಿಲು ತೆರೆದು ನೋಡಿದಾಗ ಶಾಕ್​ ಆಗಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಾಗಿರುವುದಾಗಿ ತಿಳಿದುಬಂದಿದೆ.
ಹುಡುಗಿಯ ಕುಟುಂಬ ಮಲಪ್ಪುರಂನಲ್ಲಿ ನೆಲೆಸಿದೆ. 17 ವರ್ಷದ ಹುಡುಗಿ ಕೊಟ್ಟಕಲ್​​ ರಥದಲ್ಲಿ ಪಿಯುಸಿ ಓದುತ್ತಿದ್ದಾಳೆ. ಆಕೆ 21 ವರ್ಷದ ಸ್ಥಳೀಯ ಯುವಕನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಪ್ರೀತಿಯ ವಿಚಾರ ಎರಡು ಕುಟುಂಬಕ್ಕೂ ತಿಳಿದಿತ್ತು. ಮದುವೆಗೂ ಸಹ ಒಪ್ಪಿದ್ದರು. ಹುಡುಗಿಗೆ 18 ವರ್ಷ ತುಂಬಿದ ಮೇಲೆ ಮದುವೆ ಮಾಡಲು ಮುಂದಾಗಿದ್ದರು. ಇದರ ನಡುವೆ ಹುಡುಗಿ ಮೂರು ತಿಂಗಳ ಗರ್ಭಿಣಿ ಆಗಿದ್ದಳು. ಆದರೆ, ಈ ವಿಚಾರ ಎರಡು ಮನೆಯವರಿಗೂ ತಿಳಿದಿರಲಿಲ್ಲ.
ಗರ್ಭಿಣಿ ಆಗಿದ್ದ ಹುಡುಗಿಗೆ 20ನೇ ತಾರೀಖಿನಂದು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಯಾರ ನೆರವನ್ನು ಪಡೆಯದ ಹುಡುಗಿ ಒಬ್ಬಳೇ ಕೊಣೆಯೊಳಗೆ ಹೋಗಿ ಯೂಟ್ಯೂಬ್​ ವಿಡಿಯೋ ಸಹಾಯದಿಂದ ಮಗುವಿಗೆ ಜನ್ಮ ನೀಡಿದ್ದಾಳೆ. ಅಲ್ಲದೆ, ಕರುಳಬಳ್ಳಿಯನ್ನು ಸಹ ಕತ್ತಿರಿಸಿದ್ದಾಳೆ. ಈ ವೇಳೆ ಮಗು ಅಳುವ ಶಬ್ದವನ್ನು ಕೇಳಿದ ಪಾಲಕರು ಬಾಗಿಲು ತೆರೆದು ನೋಡಿದಾಗ ಶಾಕ್​ ಆಗಿದ್ದಾರೆ.
ಇದಾದ ತಕ್ಷಣ ತಾಯಿ ಮತ್ತು ಮಗು ಇಬ್ಬರನ್ನು ಕುಟುಂಬಸ್ಥರು ಮಂಜೇರಿಯ ಸರ್ಕಾರಿ ಮಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಈ ವಿಚಾರ ಸ್ಥಳೀಯವಾಗಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಆದಾಗ್ಯೂ ಹುಡುಗಿಯ ಈ ಸ್ಥಿತಿಗೆ ಆಕೆಯ ಬಾಯ್​ಫ್ರೆಂಡ್​ ಕಾರಣವಾಗಿದ್ದು, ಪೊಕ್ಸೊ ಕಾಯ್ದೆ ಅಡಿಯಲ್ಲಿ ಆತನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.(ಏಜೆನ್ಸೀಸ್​)
ಮದ್ವೆಯಾಗಲು ತೋರಿದ ಉತ್ಸಾಹ ಜೀವನದಲ್ಲಿ ತೋರದ ನವದಂಪತಿಯ ಬದುಕು ದುರಂತ ಅಂತ್ಯ!

ಒಂದೆಡೆ ಪಾಕ್​ ವಿಜಯೋತ್ಸವದಲ್ಲಿದ್ರೆ ತಂಡದ ನಾಯಕ ಬಾಬರ್​ಗೆ ಬಿಸಿ ತುಪ್ಪವಾದ ಈ ಯುವತಿ ಯಾರು?

https://www.vijayavani.net/r-chethan-kumar-bahaddur-chethan-appu-fan-puneeth-rajkumar-fan-death-note-social-media/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
