ಕೊಚ್ಚಿ:ಯುವಕನೊಬ್ಬ ಡೆಂಟಲ್​ ಕಾಲೇಜಿನ ವಿದ್ಯಾರ್ಥಿನಿಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಚ್ಚಿಯಿಂದ ಸುಮಾರು 35 ಕಿಮೀ ದೂರದಲ್ಲಿರುವ ಕೋತಮಂಗಲಂ ಬಳಿಯ ನೆಲ್ಲಿಕುಳಿಯಲ್ಲಿ ನಡೆದಿದೆ. ಈ ಘಟನೆ ಕೇರಳದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಕ್ಲಬ್​ ಹೌಸ್​ನಂತಹ ಜಾಲತಾಣದಲ್ಲಿ ಯುವಕರು ಈ ಘಟನೆಯ ಬಗ್ಗೆ ತುಂಬಾ ಚರ್ಚೆ ನಡೆಸುತ್ತಿದ್ದಾರೆ.
ಮೃತಳನ್ನು ಮಾನಸ ಪಿ.ವಿ (24) ಎಂದು ಹಾಗೂ ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ರಾಖಿಲ್​ (32) ಎಂದು ಗುರುತಿಸಲಾಗಿದೆ. ಮಾನಸ ಕಣ್ಣೂರು ಮೂಲದವಳು. ಕೋತಮಂಗಲಂದ ಇಂದಿರಾ ಗಾಂಧಿ ಕಾಲೇಜಿನಲ್ಲಿ ಅಂತಿಮ ವರ್ಷದ ಡೆಂಟಲ್​ ಕೋರ್ಸ್​ ಮಾಡುತ್ತಿದ್ದಳು. ತನ್ನ ಫ್ರೆಂಡ್ಸ್​ ಜತೆ ಕೋತಮಂಗಲಂದ ನೆಲ್ಲಿಕುಳಿಯಲ್ಲಿ ರೂಮ್​ನಲ್ಲಿ ಉಳಿದುಕೊಂಡಿದ್ದಳು.
ರಾಖಿಲ್​ ಕೂಡ ಕಣ್ಣೂರು ಮೂಲದವನೆ. ಇಬ್ಬರು ಕೂಡ ಸಾಮಾಜಿಕ ಜಾಲತಾಣ ಮೂಲಕ ವರ್ಷದ ಹಿಂದೆ ಪರಿಚಿತರಾಗಿದ್ದರು. ಇದಾದ ಬಳಿಕ ಇಬ್ಬರ ಸ್ನೇಹಿ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಆದರೆ, ಒಂದು ತಿಂಗಳ ಹಿಂದೆ ಮಾನಸ, ಲವ್​ ಬ್ರೇಕಪ್​ ಮಾಡಿಕೊಳ್ಳುವುದಾಗಿ ರಾಖಿಲ್​ ಬಳಿ ಹೇಳಿದ್ದಳಂತೆ. ಇದು ಆತನ ಕೋಪಕ್ಕೆ ಕಾರಣವಾಗಿ ಕಿರುಕುಳ ನೀಡಲು ಆರಂಭಿಸಿದ್ದ ಎಂದು ತಿಳಿದುಬಂದಿದೆ. ನನ್ನ ಪಾಡಿಗೆ ಬಿಟ್ಟುಬಿಡು ಎಂದು ಮಾನಸ, ರಾಖಿಲ್​ ಬಳಿ ಕೇಳಿಕೊಂಡಿದ್ದಳು.
ಕೊನೆಗೆ ಆತನ ಕಿರುಕುಳ ತಾಳದೇ ಮಾನಸ, ಕಣ್ಣೂರು ಪೊಲೀಸ್​ ಠಾಣೆಗೆ ದೂರು ಸಹ ನೀಡಿದ್ದಳು. ಇದಾದ ಬಳಿಕ ರಾಖಿಲ್​ನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪಾಲಕರ ಮನವಿ ಮೇರೆಗೆ ಆತನಿಗೆ ಎಚ್ಚರಿಕೆಯನ್ನು ನೀಡಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ರಾಖಿಲ್​, ಮಾನಸಳನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ.
ರಾಖಿಲ್​ ತನ್ನ ಪ್ಲಾನ್​ನಂತೆ ಶುಕ್ರವಾರ ಮಧ್ಯಾಹ್ನ ಮಾನಸ ರೂಮ್​ಗೆ ತೆರಳಿ, ಮಾನಸಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಆಕೆಯ ರೂಮ್​ಮೇಟ್​ಗಳು ಮಧ್ಯ ಪ್ರವೇಶಿಸಿದಾಗ ಗನ್​ ತೋರಿಸಿ, ಬೆದರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದಾದ ನಂತರ ಮಾನಸಳನ್ನು ಮತ್ತೊಂದು ಕೊಠಡಿಯಲ್ಲಿ ಲಾಕ್​ ಮಾಡಿಕೊಂಡಿದ್ದಾನೆ. ಬಳಿಕ ಮಾನಸಳ ಮೇಲೆ ಗುಂಡಿನ ದಾಳಿ ನಡೆಸಿ, ತಾನೂ ಗುಂಡು ಹಾರಿಕೊಂಡು ರಾಖಿಲ್​ ಪ್ರಾಣ ಬಿಟ್ಟಿದ್ದಾನೆ.(ಏಜೆನ್ಸೀಸ್​)
ಸಮಂತಾ-ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿತಾ? ಜಾಲತಾಣದಲ್ಲಿ ದಿಢೀರ್​ ಶಾಕ್​ ಕೊಟ್ಟ ನಟಿ

ಫೇಸ್​ಬುಕ್​ ಪರಿಚಯ; ಉದ್ಯಮಿಯನ್ನು ಮನೆಗೆ ಆಹ್ವಾನಿಸಿದ ಮಹಿಳೆಯಿಂದ ನಡೆದಿತ್ತು ಭಾರೀ ಸಂಚು

ಯಾರಾಗಲಿದ್ದಾರೆ ಬಿಗ್​ಬಾಸ್​ ಸೀಸನ್​ 8ರ ವಿನ್ನರ್​? ಸಣ್ಣ ಸುಳಿವು ಕೊಟ್ರಾ ಕಾರ್ಯಕ್ರಮದ ನಿರ್ದೇಶಕರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 9 =
Remember me
