ಮನ್ನಾರ್​ಕಾಡ್​:ಕ್ಷುಲ್ಲಕ ವಿಚಾರಕ್ಕೆ ಪತಿ-ಪತ್ನಿಯ ನಡುವೆ ನಡೆದ ಜಗಳವು ತಾರಕಕ್ಕೇರಿ ಗಂಡ, ಪತ್ನಿಯನ್ನು ಕೊಲೆ ಮಾಡಿರುವ ಆತಂಕಕಾರಿ ಘಟನೆ ಕೇರಳದ ಮನ್ನಾರ್​ಕಾಡ್​ನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ದೀಪಿಕಾ (28) ಎಂದು ಗುರುತಿಸಲಾಗಿದೆ. ಗಂಡ ಅವಿನಾಶ್​ನನ್ನು ಬಂಧಿಸಲಾಗಿದೆ. ಹಲ್ಲು ಉಜ್ಜದೇ ಮಗನಿಗೆ ಮುತ್ತು ಕೊಡಬೇಡಿ ಎಂದು ದೀಪಿಕಾ ಹೇಳಿದ ಮಾತಿಗೆ ಆಕೆಯೊಂದಿಗೆ ಅವಿನಾಶ್​ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿ ದೀಪಿಕಾ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಅವರ ಏಕೈಕ ಪುತ್ರ ಐವಿನ್ ಎದುರೇ ಕೊಲೆ ನಡೆದಿದೆ. ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಿಕಾ ಅವರನ್ನು ನೆರೆಹೊರೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನೆರೆ ಮನೆಯವರು ನೋಡಿದಾಗ ಆಕೆಯ ಮಗ ಐವಿನ್ ತಾಯಿಯ ಮೃತದೇಹವನ್ನು ಅಪ್ಪಿಕೊಂಡು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಆರೋಪಿ ಅವಿನಾಶ್​ ಮಚ್ಚು ಹಿಡಿದು ದೀಪಿಕಾ ಪಕ್ಕದಲ್ಲಿ ನಿಂತಿದ್ದನ್ನು ಸ್ಥಳೀಯರು ನೋಡಿದ್ದಾರೆ. ಘಟನೆಯ ಬಳಿಕ ತಕ್ಷಣ ದೀಪಿಕಾ ಅವರನ್ನು ಪೆರಿಂತಲ್ಮನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ಉಳಿಸಲಾಗಲಿಲ್ಲ. ದೀಪಿಕಾ ಅವರ ಕುತ್ತಿಗೆ, ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸ್ಥಳೀಯರು ಅವಿನಾಶ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.(ಏಜೆನ್ಸೀಸ್​)
ಸರಿಯಾಗಿ ಬೈಕ್ ಓಡಿಸಿ ಎಂದಿದ್ದೇ ತಪ್ಪಾಯ್ತಾ? ವೃದ್ಧ ಎನ್ನೋದನ್ನೂ ನೋಡದೇ ಯುವಕರಿಬ್ಬರಿಂದ ಹಲ್ಲೆ

ಖ್ಯಾತ ನಟಿ ಮೀನಾ ಬಾಳಲ್ಲಿ ಬಡಿದ ಬರಸಿಡಿಲು: ಚೆನ್ನೈನಲ್ಲಿ ಕೊನೆಯುಸಿರೆಳೆದ ಪತಿ ವಿದ್ಯಾಸಾಗರ್​

ಜಾಕ್​ಲೀನ್​ಗೆ ಇಡಿ ಇಕ್ಕಟ್ಟು!; ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಎಫೆಕ್ಟ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + fifteen =
Remember me
