ಕೊಚ್ಚಿ:ಸುಮಾರು 70 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ಟಾಟಾ ಟಿಯಾಗೋ ಕಾರು 25 ಅಡಿ ಆಳದ ಕಂದಕಕ್ಕೆ ಬಿದ್ದರೂ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಯಾವುದೇ ಹಾನಿಯಾಗದೇ ಬದುಕುಳಿದಿದ್ದಾರೆ. ಅಪಘಾತಕ್ಕೀಡಾದ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾರಿನ ಗುಣಮಟ್ಟಕ್ಕೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ.
ಕಾರಿನ ಒಳಗೆ ಮುಂಭಾಗದಲ್ಲಿದ್ದ ಏರ್​ಬ್ಯಾಗ್​ ತೆರೆದುಕೊಂಡಿದ್ದರಿಂದ ಯಾರಿಗೂ ಯಾವುದೇ ಹಾನಿಯಾಗಿಲ್ಲ. ವೇಗವಾಗಿ ಬಂದು 25 ಅಡಿ ಆಳಕ್ಕೆ ಬಿದ್ದರೂ ಅಪಘಾತದ ಸಂತ್ರಸ್ತರಿಗೆ ಒಂದು ಬ್ಯಾಂಡೇಜ್​ ಹಾಕುವಷ್ಟೂ ಹಾನಿ ಆಗಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಟಾಟಾ ಟಿಯಾಗೋ ವಾಹನ ಖರೀದಿಸದಂತೆ ಎಲ್ಲರೂ ನನಗೆ ಎಚ್ಚರಿಕೆ ನೀಡಿದ್ದರು ಎಂದು ಮಾಲೀಕರು ಹೇಳಿಕೊಂಡಿದ್ದಾರೆ. ಆದಾಗ್ಯೂ ತಾನು ಕಾರು ಖರೀದಿಸಿದೆ. ನೀವು ಸುರಕ್ಷತೆಗೆ ಆದ್ಯತೆ ನೀಡುವುದಾದರೆ ಟಾಟಾ ಟಿಯಾಗೊವನ್ನು ಖರೀದಿಸಬೇಕು ಎಂದು ಮಾಲೀಕ ಮಾಧ್ಯಮದ ಜೊತೆ ಮಾತನಾಡುವಾಗ ಹೇಳಿದ್ದಾರೆ.
ಅಪಘಾತದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಗ್ರಾಹಕರ ಸುರಕ್ಷತೆಯುಳ್ಳ ಕಾರಿನ ವೈಶಿಷ್ಟ್ಯದಿಂದ ನೆಟ್ಟಿಗರು ಪ್ರಭಾವಿತಗೊಂಡಿದ್ದಾರೆ. ಟ್ವಿಟರ್ ಬಳಕೆದಾರರು “ಟಾಟಾ ಕಾ ಲೋಹಾ!” ಎಂದು ಬರೆದಿದ್ದಾರೆ. ಕೇರಳದ ಘಟನೆ ವೈರಲ್ ಆದ ನಂತರ ಜಾಲತಾಣದಲ್ಲಿ ನೆಟ್ಟಿಗರು ಟಾಟಾ ಮೋಟರ್ಸ್ ಅನ್ನು ಹೊಗಳಿದ್ದಾರೆ.(ಏಜೆನ್ಸೀಸ್​)
Buy only Tatapic.twitter.com/D3AdNf5irt
— Gaindaswamy (@Gaindaswamy)August 24, 2022

Speaks volumes about the build quality of Tata Tiago 👏😂https://t.co/wnrGe4JbJ2
— Bhautik Joshi (@KreativeGeek)August 24, 2022

This is the level of reliability and ruggedness you get from even a budget segment tata car. Tata ka Loha! Never disappoints!!@TataMotors@RNTata2000@TataCompanies#tatatiago#buildquality#strong#5starratingpic.twitter.com/idGJCB5QBh
— Shivam Dwivedi (@Ms_Shivam_7_)August 24, 2022

ದುರಂತ ಅಂತ್ಯ ಕಂಡ ಟೆಕ್ಕಿ: ಸುಂದರಿಯ ಡೈರಿ-ಮೊಬೈಲ್​ನಲ್ಲಿರೋ ಬಾಯ್​ಫ್ರೆಂಡ್​ ರಹಸ್ಯದ ಹಿಂದೆ ಬಿದ್ದ ಪೊಲೀಸರು!

ಕೆಂಪಣ್ಣ ಅಕ್ರಮಗಳಲ್ಲಿ ಅಕ್ರಮಗಳ ಸರದಾರ: ಮಂಡ್ಯ ಬಿಲ್ಡರ್ ಅಸೋಸಿಯೇಷನ್ ಅಧ್ಯಕ್ಷ ನೃಪತುಂಗ ವಾಗ್ದಾಳಿ

ಬಿಜೆಪಿ ಹೇಳುವಂತೆ ಸಾವರ್ಕರ್ ಸ್ವಾತಂತ್ರ್ಯ ಸೇನಾನಿಯಾಗಿದ್ದರೆ ಭಾರತಕ್ಕೆ ಬರಲು ನಿರಾಕರಿಸಿದ್ದೇಕೆ? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 15 =
Remember me
