ಇಡುಕ್ಕಿ:ಆತಂಕಕಾರಿ ಘಟನೆಯೊಂದರಲ್ಲಿ ಪ್ರೇಯಸಿ ನಡೆಸಿದ ಆಸಿಡ್​ ದಾಳಿಯಿಂದಾಗಿ ಕೇರಳದ ಪೂಜಾಪ್ಪುರ ಮೂಲದ ಯುವಕನೊಬ್ಬ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.
ಆಸಿಡ್​ ದಾಳಿ ನಡೆಸಿದ ಆದಿಮಲಿ ಮೂಲಕ ಶೀಬಾ (35) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಮಂಗಳವಾರ ಇರುಂಪುಪಳಂ ಚರ್ಚ್​ ಬಳಿ ನಡೆದಿದೆ. ತಕ್ಷಣ ಅರುಣ್​ನನ್ನು ಜನತೆಯಲ್ಲೇ ಇದ್ದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ, ಅರಣ್​ ದೃಷ್ಟಿ ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಸದ್ಯ ತಿರುವನಂತಪುರಂನ ಮೆಡಿಕಲ್​ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೂಜಾಪ್ಪುರ ಮೂಲದ ಅರುಣ್​ ಕುಮಾರ್​ ಹಾಗೂ ಶೀಬಾ ಇಬ್ಬರನ್ನು ಫೇಸ್​ಬುಕ್ ಪರಿಚಯ ಮಾಡಿಕೊಟ್ಟಿತು. ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ಚಾಟಿಂಗ್​ ನಡೆಸುತ್ತಾ ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಆದರೆ, ಶೀಬಾ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳಿರುವುದು ತಿಳಿದ ಬಳಿಕ ಅರುಣ್​, ಪ್ರೀತಿಗೆ ಗುಡ್​ ಬೈ ಹೇಳಿದ್ದ. ಆದರೆ, ಶೀಬಾ ಮಾತ್ರ ಮದುವೆ ಆಗುವಂತೆ ದುಂಬಾಲು ಬಿದ್ದಿದ್ದಳು.
ಇದಾದ ಬಳಿಕ ಶೀಬಾ ಎರಡು ಲಕ್ಷ ರೂ. ಹಣಕ್ಕೆ ಬೇಡಿ ಇಟ್ಟಿದ್ದಳು. ಯಾವುದೋ ಒಂದು ವಿಚಾರವಾಗಿ ಮಾತನಾಡಬೇಕೆಂದು ಹೇಳಿ ಆದಿಮಲಿಗೆ ಬರುವಂತೆ ಶೀಬಾ ಕೇಳಿದಳು. ಅಲ್ಲಿದ ಹೋದ ಬೆನ್ನಲ್ಲೇ ಶೀಬಾ ಆಸಿಡ್​ ದಾಳಿ ಮಾಡಿದ್ದಾಳೆ ಎಂದು ಅರುಣ್​ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಆರೋಪಿ ಶೀಬಾಳನ್ನು ಪೊಲೀಸರು ಗಂಡನ ಮನೆಯಲ್ಲೇ ಬಂಧಿಸಿದ್ದಾರೆ. ದಾಳಿಯ ವೇಳೆ ಆಕೆಯ ಕೈಗಳಿಗೂ ಆಸಿಡ್​ ಬಿದ್ದು ಸುಟ್ಟ ಗಾಯಗಳಾಗಿವೆ. ರಬ್ಬರ್​ ಹೆಪ್ಪುಗಟ್ಟಿಸಲು ಬಳಸುತ್ತಿದ್ದ ಆಸಿಡ್​ನಿಂದ ಅರುಣ್​ಗೆ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​​ ಅವರ​ ಮುಂಬೈ ನಿವಾಸದಲ್ಲಿ ಅಗ್ನಿ ಅವಘಡ

ಪೇಜಾವರ ಶ್ರೀಗಳ ಪಾದದ ಧೂಳಿಗೂ ನೀವು ಸಮವಲ್ಲ: ಹಂಸಲೇಖ ವಿರುದ್ಧ ಶಿವರಾಣಿ ಆಕ್ರೋಶ

ಇದು ವಿಶ್ವದ ಅತ್ಯಂತ ಶ್ರೀಮಂತ ಶ್ವಾನ: ಇದರ ಹೆಸರಲ್ಲಿರೋ ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ಬೆರಗಾಗ್ತೀರಾ!

ಹಂಸಲೇಖ ವಿರುದ್ಧ ದಾಖಲಾಗಿದ್ದ ದೂರು ವಾಪಸ್​: ದೂರುದಾರ ಕೃಷ್ಣರಾಜ್​ ಕೊಟ್ಟ ಕಾರಣ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
