ನವದೆಹಲಿ:ಕಾಡಿನ ರಾಜ ಯಾರು ಅಂತಾ ಕೇಳಿದ್ರೆ ಥಟ್ಟನೇ ಹೇಳ್ತಾರೆ ಅದು ಸಿಂಹ ಅಂತಾ. ತನ್ನ ಗತ್ತು, ಗಾಂಭೀರ್ಯ ಹಾಗೂ ಸಾಮರ್ಥ್ಯದಿಂದ ಸಿಂಹ ಪ್ರಾಣಿಗಳಲ್ಲೇ ತುಂಬಾ ಬಲಿಷ್ಟವಾಗಿದೆ. ಯಾವ ಪ್ರಾಣಿಯಾದರೂ ಸರಿಯೇ ಸಿಂಹವನ್ನು ನೋಡಿದ ಮೇಲೆ ಹೆದರಿ ಓಡಲೇ ಬೇಕು. ಹೀಗಿರುವಾಗ ಸಿಂಹವೇ ಹೆದರಿ ಮೇರವೇರಿದ ವಿಚಿತ್ರ ಘಟನೆಗೆ ಸಂಬಂಧಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?ಸಿಂಹವೊಂದು ಮರದ ಮೇಲೆ ಹತ್ತುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು ಮತ್ತು ಕಾಡೆಮ್ಮೆಗಳ ಗುಂಪೊಂದು ಸಿಂಹ ಕೆಳಗೆ ಇಳಿಯುವುದನ್ನು ಕಾಯುತ್ತಿದೆ. ಕಾಡಿನ ರಾಜ ಗಾಬರಿಗೊಂಡು ತನ್ನ ಪ್ರಾಣ ಉಳಿಸಿಕೊಳ್ಳಲು ಮರಕ್ಕೆ ಅಂಟಿಕೊಂಡಿರುವಂತೆ ಕಾಣುತ್ತದೆ.
ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲೇ ಶೇರ್​ ಆಗಿದ್ದು, ಈಗಾಗಲೇ 18 ಸಾವಿರಕ್ಕೂ ಅಧಿಕ ವೀಕ್ಷಣೆಯೊಂದಿಗೆ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋ ಅಚ್ಚರಿ ವ್ಯಕ್ತಪಡಿಸಿರುವ ನೆಟ್ಟಿಗರು ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಕೆಲವೊಮ್ಮೆ ಬೇಟೆಗಾರ ಬೇಟೆಯಾಗುತ್ತಾ ಎಂದು ನೆಟ್ಟಿಗನೊಬ್ಬ ಕಾಮೆಂಟ್​ ಮಾಡಿದ್ದಾರೆ. ಗಂಡು ಸಿಂಹವು ಎಮ್ಮೆಗಳಗಿಂತ ವೇಗವಾಗಿ ಓಡಬಲ್ಲದು ಅಲ್ಲವೇ? ಹಾಗಾದರೆ ಮರವನ್ನು ಹತ್ತುವ ಬದಲು ಏಕೆ ಓಡಬಾರದು? ಏಕೆಂದರೆ, ಸಿಂಹದ ಬಳಿಗೆ ಹೋಗಲು ಕಾಡೆಮ್ಮೆಗಳು ಮರದ ಮೇಲೆ ದಾಳಿ ಮಾಡಬಹುದಲ್ಲವೆ? ಕರ್ಮಕ್ಕೆ ಯಾವುದೇ ಮೆನು ಇಲ್ಲ, ನೀವು ಅರ್ಹವಾದದ್ದಕ್ಕಾಗಿ ಸೇವೆಯನ್ನು ಪಡೆಯುತ್ತೀರಿ ಎಂದು ಮತ್ತೊಬ್ಬ ನೆಟ್ಟಗ ಕಮೆಂಟಿಸಿದ್ದಾರೆ.(ಏಜೆನ್ಸೀಸ್​)
A post shared by wild animal shorts (@wild_animal_shorts_)

ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

ಪತಿಯ ಮರ್ಮಾಂಗಕ್ಕೆ ಒದ್ದು ಕೊಲೆಗೈದ ಪತ್ನಿ: ಪ್ರಕರಣದಿಂದ ತಪ್ಪಿಸಿಕೊಳ್ಳಲು ಕಟ್ಟು ಕತೆ ಕಟ್ಟಿ ಸಿಕ್ಕಿಬಿದ್ದಳು!

ರಾಜ್ಯದ ಮೂರೂ ಪಕ್ಷಕ್ಕೆ ಎಚ್ಚರಿಕೆ ಗಂಟೆ; ಬಿಜೆಪಿಗೆ ನಾಯಕತ್ವ ಸವಾಲು, ಕಾಂಗ್ರೆಸ್​ಗೆ ಒಗ್ಗಟ್ಟಿನ ಅನಿವಾರ್ಯತೆ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:eighteen − 14 =
Remember me
