ಕೊಲ್ಲಂ:ಕೇರಳದ ಕೊಲ್ಲಂನ ಮೀನುಗಾರರ ಗುಂಪೊಂದು “ಪದಥಿಕೋರ” ಹೆಸರಿನ ವಿರಾಳತಿ ವಿರಳ ಮೀನೊಂದನ್ನು ಬಲೆ ಬೀಳಿಸಿದ್ದಾರೆ. “ಪೊನ್ನುಥಾಂಬುರನ್​” ಹೆಸರಿನ ಮೀನುಗಾರರ ದೋಣಿಗೆ ಈ ಅಪರೂಪದ ಮೀನು ಸಿಕ್ಕಿದೆ. ಈ ದೋಣಿಯ ಮಾಲೀಕರಾಗಿರುವ ಅರಟ್ಟುಪುಳ ನಿವಾಸಿ ವಿನೋದ್ ಅವರು ದುಬಾರಿ ಮೀನು ಸಿಕ್ಕಿರುವುದನ್ನು ಕಂಡು ತುಂಬಾ ಖುಷಿಯಾಗಿದ್ದಾರೆ.
ಮಾರುಕಟ್ಟೆಯಲ್ಲಿ ಪದಥಿಕೋರ ಮೀನಿಗೆ ಭಾರೀ ಬೇಡಿಕೆ ಇದ್ದು, ಇದರ ಬೆಲೆಯು ಕೂಡ ದುಬಾರಿಯಾಗಿದೆ. ಮೀನುಗಾರರು ಕಾಯಂಕುಲಂ ಬಂದರು ಕಡೆ ಹೋಗುತ್ತಿರುವಾಗ ಈ ಮೀನು ಸಮುದ್ರದ ಮೇಲ್ಮೈ ಭಾಗದಲ್ಲಿ ಮಲಗಿರುವುದನ್ನು ನೋಡಿದ್ದಾರೆ. ತಕ್ಷಣ ಕೆಳಕ್ಕೆ ಜಿಗಿದು ಸಾಕಷ್ಟು ಶ್ರಮ ಪಟ್ಟು ಈ ಮೀನನ್ನು ಹಿಡಿದುಕೊಂಡು ದೋಣಿಯ ಒಳಗೆ ಹಾಕಿಕೊಂಡಿದ್ದಾರೆ.
ಅಪರೂಪದ ಮೀನು ಸುಮಾರು 20 ಕೆ.ಜಿ ತೂಕವಿದೆ. ಆಸಕ್ತಿದಾಯಕ ವಿಚಾರವೆಂದರೆ ಮೀನುಗಾರರಿಗೂ ಸಹ ಈ ಮೀನಿನ ವಿಶೇಷತೆ ತಿಳಿದಿರಲಿಲ್ಲ. ಈ ಮೀನಿನ ಫೋಟೋವನ್ನು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಪೋಸ್ಟ್​ ಮಾಡಿದ್ದರು. ಆ ಬಳಿಕವಷ್ಟೇ ತಾವು ಹಿಡಿದಿರುವುದು ಸಾಮಾನ್ಯವಾದ ಮೀನಲ್ಲ, ಅದು ದುಬಾರಿ ಬೆಲೆಯ ಮೀನು ಎಂಬುದು. ಇದನ್ನು ಪದಥಿಕೋರ ಅಥವಾ ಮೆಡಿಸಿನಲ್​ ಕೊರಾ ಎಂದು ಕರೆಯುತ್ತಾರೆ. ಶುಕ್ರವಾರ ಬೆಳಗ್ಗೆ ಆ ಮೀನನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಬರೋಬ್ಬರಿ 59 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಹರಾಜಿನಲ್ಲಿ ಪುಥಂಥುರಾ ನಿವಾಸಿ ಕೆ ಜಾಯ್​ ಎಂಬುವರು ಈ ಮೀನನ್ನು ಖರೀದಿಸಿದ್ದಾರೆ.
ಈ ವಿಶೇಷ ಮೀನಿನ ಬಗ್ಗೆ ಅಖಿಲ ಕೇರಳ ಮೀನುಗಾರಿಕ ದೋಣಿ ಕಾರ್ಯಾಚರಣೆ ಸಂಘದ ಅಧ್ಯಕ್ಷ ಪೀಟರ್​ ಮ್ಯಾಥೀವ್ಸ್​ ಮಾತನಾಡಿ, ಇದು ವಿಶೇಷ ಔಷಧೀಯ ಅಂಶಗಳನ್ನು ಹೊಂದಿರುವುದರಿಂದ ಭಾರೀ ಬೇಡಿಕೆ ಇದೆ. ಅಲ್ಲದೆ, ಇದರ ಮಾಂಸವು ಕೂಡ ತುಂಬಾ ಸ್ವಾಧಿಷ್ಟವಾಗಿರುತ್ತದೆ. ಮೀನಿನ ದೇಹದಿಂದ ಪಡೆದ ಸ್ಪಾಂಜ್ ರೀತಿಯ ವಸ್ತುವನ್ನು ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಎಳೆಗಳನ್ನು ತಯಾರಿಸಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಏಜೆಂಟರು ಸ್ಪಾಂಜ್​ ರೀತಿಯ ವಸ್ತುವನ್ನು ಹರಾಜಿನ ಮೂಲಕ ಸಂಗ್ರಹಿಸಿ ಗ್ರಾಹಕರಿಗೆ ಪೂರೈಸುತ್ತಾರೆ. 10 ಕೆಜಿಗಿಂತ ಹೆಚ್ಚು ತೂಕವಿರುವ ‘ಪದಥಿಕೋರ’ದಲ್ಲಿ ಅತ್ಯುತ್ತಮ ರೀತಿಯ ಹರಳು ಕಂಡುಬರುತ್ತದೆ. ಈ ಮೀನುಗಳು ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ ಮತ್ತು ಬಹಳ ವಿರಳವಾಗಿ ಬಲೆ ಬೀಳುತ್ತವೆ ಎಂದುಪೀಟರ್ ಹೇಳಿದರು.(ಏಜೆನ್ಸೀಸ್​)
ಸಮಂತಾ ಶಾಕುಂತಲಂ: ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಆ್ಯಂಕರ್​ ಅನುಶ್ರೀ ಸೈತಾನ್ ಸಹವಾಸ

ಅಧಿವೇಶನ ಆಪೋಶನ: ನಿಲ್ಲದ ರಾಜಕೀಯ ಮೇಲಾಟ, ಕಲಾಪಕ್ಕೆ ಇಂದೇ ತೆರೆ; ಚರ್ಚೆ ಇಲ್ಲದೆ 4 ವಿಧೇಯಕಗಳಿಗೆ ಅನುಮೋದನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 11 =
Remember me
