ಕೊಲ್ಲಂ:ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಕಳ್ಳರ ಭಯದಿಂದ ತನ್ನ ಬಳಿ ಇದ್ದ 20 ಸವರನ್​ ಚಿನ್ನಾಭರಣಗಳನ್ನು ಮನೆಯ ಮುಂದಿನ ಆವರಣದಲ್ಲಿ ಹೂತಿಟ್ಟಿದ್ದ ಮಹಿಳೆ, ನಂತರದ ದಿನಗಳಲ್ಲಿ ಹೂತಿಟ್ಟ ಜಾಗವನ್ನು ಮರೆತು ಕಂಗಾಲಾಗಿ, ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪ್ರಕರಣ ಬೆಳಕಿಗೆ ಬಂದಿದೆ.
ಕೇರಳದ ಕೊಲ್ಲಂ ಜಿಲ್ಲೆಯ ಓಚಿರ ಚಂಗನಕುಲಂಗರದ ನಿವಾಸಿ 65 ವರ್ಷದ ಅಜಿತಾ ಕುಮಾರಿ ಅವರು ಕಳ್ಳರ ಭಯದಿಂದ ಕಳೆದ ಅಕ್ಟೋಬರ್‌ನಲ್ಲಿ 20 ಸವರನ್​ ಚಿನ್ನಾಭರಣ, 15 ಸಾವಿರ ರೂ. ನಗದು, ದಾಖಲೆ ಪತ್ರಗಳು ಹಾಗೂ ಗುರುತಿನ ಚೀಟಿಗಳನ್ನು ಹೂತಿಟ್ಟಿದ್ದರು. ತನ್ನ ಸಂಬಂಧಿಕರ ಊರಿಗೆ ಹೋಗುವ ಮುನ್ನ ಮನೆಯ ಆವರಣದಲ್ಲಿ ಹಳ್ಳ ತೋಡಿ ಹೂತಿಟ್ಟಿದ್ದರು. ಇದಾದ ಬಳಿಕ ಅಜಿತಾ ಕುಮಾರಿ ಮತ್ತು ಅವರ ಪತಿ ರಾಮವರ್ಮ ತಂಪುರನ್ ಸಂಬಂಧಿಕರ ಮನೆಯಿಂದ ಹಿಂತಿರುಗಿದರು. ಊರಿನಿಂದ ಮನೆಗೆ ಬಂದ ದಂಪತಿಗೆ ಕೋವಿಡ್ -19 ಸೋಂಕು ತಗುಲಿತು. ಅದರ ಆರೈಕೆಯಲ್ಲಿದ್ದ ಅಜಿತಾ ಅವರು ಚಿನ್ನಾಭರಣ ಹೂತಿಟ್ಟ ಸಂಗತಿಯನ್ನೇ ಮರೆತು ಬಿಟ್ಟಿದ್ದರು. ಕೊನೆಗೆ ಹೂತಿಟ್ಟ ವಿಚಾರ ನೆನಪಾದಾಗ ಇನ್ನೊಂದು ಟ್ವಿಸ್ಟ್​ ಎದುರಾಗಿತ್ತು. ಅದೇನೆಂದರೆ ಯಾವ ಜಾಗದಲ್ಲಿ ಊತಿಟ್ಟಿದ್ದೆ ಎಂಬುದೇ ಅಜಿತಾರಿಗೆ ತಿಳಿಯಲಿಲ್ಲ.
ಈ ವಿಚಾರವನ್ನು ಪೊಲೀಸರಿಗೆ ತಿಳಿಸುವ ಮೊದಲು, ದಂಪತಿ ತಮ್ಮ ಮನೆಯ ಆವರಣದಲ್ಲಿ ವಿವಿಧ ಸ್ಥಳಗಳನ್ನು ಅಗೆದು ನೋಡಿದರೂ ಯಾವುದೇ ವಸ್ತುಗಳು ಪತ್ತೆಯಾಗಲಿಲ್ಲ. ನೆರೆ ಮನೆಯವರಿಗೆ ಗೊತ್ತಾದರೆ ಅವಮಾನ ಆಗಬಹುದು ಅಂತಾ ಸುಮ್ಮನಾಗಿದ್ದರು. ಆದರೆ, ಒಮ್ಮೆ ವಾರ್ಡ್ ಸದಸ್ಯರಿಗೆ ಈ ವಿಷಯ ತಿಳಿಸಿದ್ದಾರೆ. ಅವರು ದಂಪತಿ ಜತೆ ಪೊಲೀಸ್ ಠಾಣೆ ತೆರಳಿ ದೂರು ದಾಖಲಿಸಿದರು ಮತ್ತು ಪೊಲೀಸರು ಅಂತಿಮವಾಗಿ ಮನೆಯ ಆವರಣದಲ್ಲಿ ಹೂತಿಟ್ಟ ವಸ್ತುಗಳನ್ನು ಪತ್ತೆ ಮಾಡಿ ಹೊರತೆಗೆದಿದ್ದಾರೆ.(ಏಜೆನ್ಸೀಸ್​)
ಹುಡ್ಗೀರಿಗೆ ಪೋನಿ ಹೇರ್​ಸ್ಟೈಲ್​​​ ಬ್ಯಾನ್​, ಬಿಳಿ ಬಣ್ಣದ ಒಳಉಡುಪಿಗೆ ಮಾತ್ರ ಅನುಮತಿ: ಇಲ್ಲಿದೆ ಶಾಕಿಂಗ್​ ಕಾರಣ

ಅವನು ನನ್ನ ಮಗನಲ್ಲ, ಮೋದಿ ಮಗ: ಯೂಕ್ರೇನ್​ನಿಂದ ಬಂದ ಪುತ್ರನನ್ನು ನೋಡಿ ತಂದೆಯ ಭಾವುಕ ಮಾತು

2009ರಲ್ಲಿ ಕಂಗನಾ ಹೇಳಿದ್ದ ಗುಟ್ಟನ್ನು ರಟ್ಟು ಮಾಡಿದ ಪ್ರಭಾಸ್​: ರಾಧೆಶ್ಯಾಮ್​ ಚಿತ್ರಕ್ಕೂ ಆ ಗುಟ್ಟಿಗೂ ಇದೆ ಲಿಂಕ್!​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 8 =
Remember me
