ಕೊಯಿಕ್ಕೋಡ್​:ರೈಲು ಡಿಕ್ಕಿ ಹೊಡೆದ ಬೆನ್ನಲ್ಲೇ ನದಿಗೆ ಬಿದ್ದು ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕೊಯಿಕ್ಕೋಡ್​ನಲ್ಲಿ ನಡೆದಿದೆ.
ಮೃತ ಯುವತಿಯನ್ನು ನಫಾತ್​ ಫತಾಹ್​ ಎಂದು ಗುರುತಿಸಲಾಗಿದೆ. ಈಕೆ ಕರುವಂತುರುತಿ ನಿವಾಸಿ. ಹಳಿಯ ಮೇಲೆ ನಡೆದು ಹೋಗುವಾಗ ಆಕಸ್ಮಿಕವಾಗಿ ರೈಲು ಡಿಕ್ಕಿ ಹೊಡೆದು, ನಂತರ ನದಿಗೆ ಬಿದ್ದು ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ.
ಈ ಘಟನೆ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ. ಕೊಯಮತ್ತೂರು-ಮಂಗಳೂರು ಪ್ಯಾಸೆಂಜರ್​ ರೈಲು ಯುವತಿಗೆ ಡಿಕ್ಕಿ ಹೊಡೆದಿದೆ. ನದಿಗೆ ಬಿದ್ದ ಆಕೆ ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮೃತದೇಹವನ್ನು ಬೇಪೋರ್​ನಲ್ಲಿ ವಶಕ್ಕೆ ಪಡೆಯಲಾಗಿದೆ. ಬಾಯ್​ಫ್ರೆಂಡ್​ ಜತೆ ವೀಕೆಂಡ್​ ಮೋಜಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಯುವತಿಯ ಜೊತೆಯಲ್ಲಿದ್ದ ಬಾಯ್​ಫ್ರೆಂಡ್​​ ಕೂಡ ಘಟನೆಯಲ್ಲಿ ಗಾಯಗೊಂಡಿದ್ದು, ಆತನನ್ನು ಕೊಯಿಕ್ಕೋಡ್​ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)
ರಥೋತ್ಸವದ ವೇಳೆ ಅವಘಡ: ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವು

VIDEO! ಶರದ್​ ಪವಾರ್​ ವಿರುದ್ಧ ಮಾತನಾಡಿದ ಬಿಜೆಪಿ ನಾಯಕನಿಗೆ ಎನ್​ಸಿಪಿ ಕಾರ್ಯಕರ್ತರಿಂದ ಕಪಾಳಮೋಕ್ಷ

ಅಪಘಾತದಲ್ಲಿ ಪ್ರಿಯಕರ ಮೃತಪಟ್ಟ ನೋವಿನಿಂದ ಪ್ರೇಯಸಿ ಆತ್ಮಹತ್ಯೆ: ಒಂದೇ ಸ್ಥಳದಲ್ಲಿ ಪ್ರೇಮಿಗಳ ಅಂತ್ಯಕ್ರಿಯೆ

VIDEO: ಆತ್ಮಹತ್ಯೆ ಮಾಡಿಕೊಳ್ಳಲು ಮೊಬೈಲ್‌ ಟವರ್‌ ಏರಿದವಳ ರಕ್ಷಿಸಿತು ಜೇನ್ನೊಣ! ಇದೆಂಥ ಅಚ್ಚರಿ ಅಂತೀರಾ?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:seven + 4 =
Remember me
