ಕೋಯಿಕ್ಕೋಡ್:ಮೊನ್ನೆ ದಿನಗೂಲಿ ನೌಕರನೊಬ್ಬ ಪಂಚಾಯತ್ ಕಚೇರಿ ಮಹಿಳಾ ಉದ್ಯೋಗಿಯೊಬ್ಬರಿಗೆ ಬೆಂಕಿಯಿಟ್ಟು, ತಾನೂ ಬೆಂಕಿ ಹಚ್ಚಿಕೊಂಡು ದಾರುಣವಾಗಿ ಮೃತಪಟ್ಟಿರುವ ಘಟನೆ ಕೇರಳದ ಕೋಯಿಕ್ಕೋಡ್​ ಜಿಲ್ಲೆಯ ಕೊಯಿಲ್ಯಾಂಡಿ ಬಳಿಯ ಥಿಕ್ಕೋಡಿ ಪಂಚಾಯಿತಿ ಮುಂದೆ ನಡಿದಿದೆ. ಬೆಂಕಿ ಹಚ್ಚುವ ಮುನ್ನ ಮಹಿಳೆಯ ಮೇಲೆ ದಾಳಿಯಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಸಿಂಧೂರಿ ಅಲಿಯಾಸ್​ ಕೃಷ್ಣಪ್ರಿಯಾ (22) ಕೊಲೆಯಾದ ದುರ್ದೈವಿ. ಥಿಕ್ಕೋಡಿ ನಿವಾಸಿ ನಂದನ್​ಕುಮಾರ್​ (30) ಎಂಬಾತ ಕೃಷ್ಣಪ್ರಿಯಾಗೆ ಬೆಂಕಿಯಿಟ್ಟು ತಾನೂ ಬೆಂಕಿ ಹಚ್ಚಿಕೊಂಡಿದ್ದ. ಗಂಭೀರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಆತನನ್ನು ಕೋಯಿಕ್ಕೋಡ್​ ಮೆಡಿಕಲ್​ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಕೃಷ್ಣಪ್ರಿಯಾ ಕೂಡ ಶುಕ್ರವಾರ ರಾತ್ರಿ ಮೃತಪಟ್ಟರು.
ಸ್ನಾತಕೋತ್ತರ ಪದವಿಯಲ್ಲಿ ಕಂಪ್ಯೂಟರ್​ ಸೈನ್ಸ್​ ಮುಗಿಸಿದ್ದ ಕೃಷ್ಣಪ್ರಿಯಾ, ಪಂಚಾಯತ್​ ಕಚೇರಿಯಲ್ಲಿ ಯೋಜನಾ ಸಹಾಯಕಿ ಹುದ್ದೆಗೆ ಕೇವಲ 8 ದಿನಗಳ ಹಿಂದಷ್ಟೇ ಸೇರಿದ್ದರು. ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದಳು. ನಂದನ್​ಕುಮಾರ್​ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ.
ಮಾತನಾಡಬೇಕೆಂದು ಕರೆಸಿಕೊಂಡ ನಂದನ್​ ಕುಮಾರ್​, ಕೃಷ್ಣಪ್ರಿಯಾ ಜತೆ ಪಂಚಾಯತ್​ ಕಚೇರಿ ಮುಂದೆ ಶುಕ್ರವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಮಾತನಾಡುತ್ತಾ ನಿಂತಿದ್ದಾಗ ದಿಢೀರನೇ ಪೆಟ್ರೋಲ್​ ಬಾಟಲ್​ ತೆಗೆದುಕೊಂಡು ಕೃಷ್ಣಪ್ರಿಯಾ ಮೇಲೆ ಸುರಿದು ಬೆಂಕಿ ಹಚ್ಚಿದ್ದ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆಕೆ ಬದುಕುಳಿಯಲಿಲ್ಲ. ಪ್ರೀತಿಯನ್ನೇ ತಿರಸ್ಕರಿಸಿದ್ದೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಫ್ರೆಂಡ್ಸ್​ ಆಗಿದ್ದರು. ಆದರೆ, ಕೆಲವು ದಿನಗಳಿಂದ ದೂರಾಗಿದ್ದರು. ಇದರ ನಡುವೆ ಕೃಷ್ಣಪ್ರಿಯಾ ಪಂಚಾಯಿತಿ ಕೆಲಸಕ್ಕೆ ಸೇರಿದ್ದರು.
ಸಾವಿನ ಕೊನೆಯ ಕ್ಷಣದಲ್ಲಿ ಕೃಷ್ಣಪ್ರಿಯಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ನಂದನ್​ ಕುಮಾರ್​ ಬೆಂಕಿ ಹಚ್ಚುವ ಮುನ್ನ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದ ಎಂದು ಹೇಳಿಕೆ ನೀಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಆಕೆಯ ಹೊಟ್ಟೆಯಲ್ಲಿ ಚಾಕುವಿನಿಂದ ತಿವಿದಿದ್ದ ಗುರುತು ಸಹ ಇತ್ತು. ಶೇ. 90 ರಷ್ಟು ಸುಟ್ಟ ಗಾಯಗಳಿಂದ ಕೃಷ್ಣಪ್ರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆ ಆಕೆ ಮಾತನಾಡುತ್ತಿದ್ದಳು. ಆಕೆ ಸಂಪೂರ್ಣ ಪ್ರಜ್ಞೆ ತಪ್ಪಿರಲಿಲ್ಲ. ಆದರೆ, ಕೆಲವೇ ಸಮಯದಲ್ಲಿ ಕೃಷ್ಣಪ್ರಿಯಾ ಕೊನೆಯುಸಿರೆಳೆದರು.(ಏಜೆನ್ಸೀಸ್​)
ಹೆಂಗಸರ ಒಳಉಡುಪನ್ನು ಮಾಸ್ಕ್​ ರೀತಿ ಧರಿಸಿ ವಿಮಾನವೇರಿದ ವ್ಯಕ್ತಿ: ಆತನ ಉತ್ತರ ಕೇಳಿ ಸಿಬ್ಬಂದಿ ಶಾಕ್​!

ನಾನ್ಯಾರು? ನನ್ನನ್ನು ನಿಕ್‌ ಜೋನಸ್‌ ಪತ್ನಿ ಎನ್ನಲು ಎಷ್ಟು ಧೈರ್ಯ? ಪತ್ರಕರ್ತರ ಮೇಲೆ ಹರಿಹಾಯ್ದ ಪ್ರಿಯಾಂಕಾ!

ಅಪಘಾತದ ಸಂತ್ರಸ್ತರಿಗೆ ಮೊದಲ 48 ಗಂಟೆಗಳ ಗೋಲ್ಡನ್​ ಅವರ್​ನಲ್ಲಿ ಉಚಿತ ಚಿಕಿತ್ಸೆ: ಸಿಎಂ ಸ್ಟಾಲಿನ್​ ಘೋಷಣೆ

ಬಾಲಕಿಯನ್ನು ಅಪಹರಿಸಿ ಕೂಡಿಟ್ಟಿದ್ದ ಮಹಿಳೆ: ವಾರಗಟ್ಟಲೆ ಅತ್ಯಾಚಾರ ಮಾಡಿದ 13 ಮಂದಿ ಕಾಮುಕರಿಗೆ 20 ವರ್ಷ ಜೈಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 1 =
Remember me
