ಅಹಮದಾಬಾದ್:ಇತ್ತೀಚೆಗೆ ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿ ಭಾರೀ ಸುದ್ದಿಯಾಗಿದ್ದ ಗುಜರಾತಿನ ವಡೋದರಾ ಮೂಲದ ಕ್ಷಮಾ ಬಿಂದು, ಗುರುವಾರ (ಜೂ.9) ತಾನು ಹೇಳಿದಂತೆಯೇ ಮದುವೆಯಾಗಿದ್ದಾಳೆ. ಗಮನಾರ್ಹ ಸಂಗತಿಯೆಂದರೆ ಏಕವ್ಯಕ್ತಿ ವಿವಾಹ ಸುದ್ದಿಯಾದಾಗಿನಿಂದ ಕ್ಷಮಾ ಅವರ ಸಾಮಾಜಿಕ ಜಾಲತಾಣ ಹಿಂಬಾಲಕರ ಸಂಖ್ಯೆಯು ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿದೆ.
ಶಾಸ್ತ್ರ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರುವ ಕ್ಷಮಾ, ಮದುವೆಯಲ್ಲಿ ಸ್ನೇಹಿತರು, ಅತಿಥಿಗಳು ಪಾಲ್ಗೊಂಡಿದ್ದರು. ಆಕೆ ಈ ಮುಂಚೆ ಹೇಳಿದಂತೆ ಈ ಮದುವೆಯಲ್ಲಿ ವರ ಮಾತ್ರ ಇರಲಿಲ್ಲ. ಜೂನ್​ 11 ಕ್ಕೆ ಮದುವೆಯಾಗುವುದಾಗಿ ಘೋಷಿಸಿಕೊಂಡಿದ್ದ ಕ್ಷಮಾ, ಹಲವು ವಿವಾದಗಳ ಕಾರಣದಿಂದ ಜೂನ್​ 9 ರಂದೇ ಮದುವೆಯಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಹನಿಮೂನ್​​ಗೂ ಸಹ ಹೋಗಲಿದ್ದೇನೆ. ನನ್ನ ನಂಬಿಕೆ ಹಾಗೂ ಭರವಸೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಕ್ಷಮಾ ಹೇಳಿದ್ದಾರೆ.
ಇನ್ನು ಕ್ಷಮಾ ತನ್ನ ವಿನೂತನ ನಡೆಯಿಂದಲೇ ದೇಶಾದ್ಯಂತ ಭಾರಿ ಸುದ್ದಿಯಾಗುವುದರ ಜತೆಗೆ ಖ್ಯಾತಿಯನ್ನು ಹೆಚ್ಚಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಬರೋಬ್ಬರಿ 10 ಸಾವಿರ ಫಾಲೋವರ್ಸ್​ ಅನ್ನು ಇನ್​ಸ್ಟಾಗ್ರಾಂನಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಜೂನ್​ 2ರಂದು ಕ್ಷಮಾ ಅವರ ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್​ ಸಂಖ್ಯೆ 17,900 ಇತ್ತು. ಇದೀಗ ಆ ಸಂಖ್ಯೆ 27,800ಕ್ಕೆ ಏರಿಕೆಯಾಗಿದೆ ಮತ್ತು ಏರಿಕೆಯಾಗುತ್ತಲೇ ಇದೆ. ಆದರೆ, ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕ್ಷಮಾ ಹಿಡಿದಿರುವ ದಾರಿ ಇದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಬಿಜೆಪಿಯ ವಡೋದರಾ ಘಟಕದ ಬಿಜೆಪಿ ಉಪಾಧ್ಯಕ್ಷೆ ಸುನಿತಾ ಶುಕ್ಲಾ ಅವರು ಯಾವುದೇ ದೇವಸ್ಥಾನದಲ್ಲಿ ಇಂತಹ ಮದುವೆಯನ್ನು ನಡೆಸಲು ಬಿಡುವುದಿಲ್ಲ ಎಂದಿದ್ದರು ಮತ್ತು ಪ್ರಚಾರದ ಹುಚ್ಚಿನಿಂದ ಕ್ಷಮಾ ಬಿಂದು ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. ತನ್ನ ವಿಚಿತ್ರ ನಿಲುವಿನ ಮೂಲಕ ಹಿಂದು ಯುವಕರ ಮನಸ್ಸನ್ನು ಕಲುಷಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್​)
ಲೈಂಗಿಕ ಸಂಪರ್ಕ ಸೇರಿದಂತೆ ಅನೇಕ ಪ್ರಶ್ನೆಗೆ ಮುಕ್ತವಾಗಿ ಉತ್ತರಿಸಿದ ತನ್ನನ್ನು ತಾನೇ ಮದ್ವೆ ಆಗುತ್ತಿರೋ ಯುವತಿ!

ವರನಿಲ್ಲದ ಮದುವೆ ಸಂಪ್ರದಾಯದಂತೆ ನೆರವೇರಿತು: ಕೊನೆಗೂ ತನಗೆ ತಾನೇ ಮದುವೆಯಾದ ಕ್ಷಮಾ ಬಿಂದು!

ವಿಮಾನ ಸಿಬ್ಬಂದಿಯೊಬ್ಬರಿಂದ ಅಸಭ್ಯ ವರ್ತನೆ: ಟ್ವೀಟ್​ ಮೂಲಕ ನೋವು ಬಿಚ್ಚಿಟ್ಟ ನಟಿ ಪೂಜಾ ಹೆಗ್ಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 4 =
Remember me
