ಕರ್ನೂಲ್​:ಹಣ ಡ್ರಾ ಮಾಡಲೆಂದು ಎಟಿಎಂಗೆ ಹೋದ ವ್ಯಕ್ತಿಯೊಬ್ಬ ಎಟಿಎಂ ಕಾರ್ಡ್​ ಹಾಕಿ 1000 ರೂಪಾಯಿ ನಮೂದಿಸಿದಾಗ 10 ಸಾವಿರ ರೂ. ಹಣ ಡ್ರಾ ಆದ ಅಚ್ಚರಿಯ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ನಲ್ಲಿ ಶನಿವಾರ ರಾತ್ರಿ ನಡೆದಿದೆ.
ಈ ರೀತಿ ಆದಾಗ ಖುಷಿಯಿಂದ ಹಣ ತೆಗೆದುಕೊಂಡು ಹೋಗುವವರೇ ಹೆಚ್ಚು. ಅದರಲ್ಲೂ ಅದೇ ಸಮಯದಲ್ಲಿ ಎಟಿಎಂ ಸೆಕ್ಯುರಿಟಿ ಗಾರ್ಡ್​ ಇಲ್ಲದಿದ್ದರೆ ಲಾಡು ಬಂದು ಬಾಯಿಗೆ ಬಿದ್ದಂತೆ. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಏನು ನಡೆಯಿತು ಎಂದು ತಿಳಿದರೆ ನಿಜಕ್ಕೂ ಆ ವ್ಯಕ್ತಿಯ ಬಗ್ಗೆ ಹೆಮ್ಮೆ ಪಡ್ತೀರಾ.
ಘಟನೆಯ ವಿವರಣೆಗೆ ಬರುವುದಾದರೆ, ಚಾಂದ್​ಭಾಷಾ ಎಂಬುವರು ಶನಿವಾರ ರಾತ್ರಿ ಹಣ ಡ್ರಾ ಮಾಡಲೆಂದು ಸ್ಥಳೀಯ ಎಸ್​ಬಿಐ ಎಟಿಎಂಗೆ ತೆರಳುತ್ತಾರೆ. ಕಾರ್ಡನ್ನು ಎಟಿಎಂ ಒಳಗೆ ಹಾಕಿ 1000 ರೂ. ಹಣ ಡ್ರಾ ಮಾಡಲು ಮುಂದಾಗುತ್ತಾನೆ. ಆದರೆ, ಸರ್ಪ್ರೈಸ್​ ಎನ್ನುವಂತೆ 10000 ಸಾವಿರ ಹಣ ಎಟಿಎಂ ಯಂತ್ರದಡಿಯಲ್ಲಿ ಇರುತ್ತದೆ. ಆದಾಗ್ಯೂ ಒಮ್ಮೆ ಪರಿಶೀಲಿಸಿದಾಗ ತನ್ನ ಖಾತೆಯಲ್ಲಿ ಕೇವಲ 1 ಸಾವಿರ ರೂ. ಡ್ರಾ ಆಗಿರುವುದು ಖಚಿತವಾಗುತ್ತದೆ.
ಎಟಿಎಂ ಸೆಕ್ಯುರಿಟಿ ಅನುಪಸ್ಥಿತಿಯಲ್ಲಿ ಅಷ್ಟೂ ಹಣವನ್ನು ತೆಗೆದುಕೊಳ್ಳುವ ಚಾಂದ್​ಭಾಷಾ ಸೋಮವಾರ ಬ್ಯಾಂಕ್​ ಅಧಿಕಾರಿಗಳನ್ನು ಭೇಟಿಯಾಗುತ್ತಾರೆ. ಬಳಿಕ ಪರಿಶೀಲನೆ ನಡೆಸುವ ಅಧಿಕಾರಿಗಳು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡುತ್ತಾರೆ. ಅಲ್ಲದೆ, ಪ್ರಾಮಾಣಿಕವಾಗಿ ಹಣವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದ ಚಾಂದ್​ಭಾಷನಿಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.(ಏಜೆನ್ಸೀಸ್​)
ವಿಶೇಷ ದಾಖಲೆ ಬರೆದ ದಿವ್ಯಾ ಉರುಡುಗ: ಬಿಗ್​ಬಾಸ್​ ಕನ್ನಡ ಇತಿಹಾಸದಲ್ಲಿ ಇದೇ ಮೊದಲು!

ಕೇರಳ ಕುವರಿ ಸಂಜನಾ ಜಾರ್ಜ್ ಮನರಂಜನಾ ಕುಸ್ತಿ!

ಕಾವ್ಯಾ ಶಾಸ್ತ್ರಿ ಪ್ಲಾಸ್ಮಾ ದಾನ; ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − two =
Remember me
