ಚಾವಕ್ಕಾಡ್:ಅನಾರೋಗ್ಯದಿಂದ ಬಳಲುತ್ತಿದ್ದ ಮಗನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ತನ್ನ ಬಳಿಯಿದ್ದ ಚಿನ್ನದ ಉಂಗುರವನ್ನು ಮಾರಾಟ ಮಾಡುವುದನ್ನು ಬಿಟ್ಟು ಈ ಮಹಾತಾಯಿಗೆ ಬೇರೆ ದಾರಿ ಕಾಣಲಿಲ್ಲ. ಅದನ್ನು ಮಾರಾಟ ಮಾಡಲು ಹೋದ ತಾಯಿಗೆ ಒಂದು ಸಂಕಷ್ಟು ಎದುರಾಯಿತು. ದುರಾದೃಷ್ಟವಶಾತ್​ ಚಿನ್ನದ ಉಂಗುರ ಅನಿರೀಕ್ಷಿತವಾಗಿ ಚರಂಡಿಯೊಳಗೆ ಬಿದ್ದು ಹೋಯಿತು. ಮುಂದೇನು ಮಾಡುವುದು ಅಂತಾ ಯೋಚಿಸುವಾಗ ಅದೃಷ್ಟವಶಾತ್​ ದೇವರ ರೂಪದಲ್ಲಿ ಬಂದಿದ್ದೇ ಮಹಿಳಾ ಪೊಲೀಸ್​ ಅಧಿಕಾರಿ.
ತಿರುವಥ್ರ ನಿವಾಸಿ ಹಸೀನಾ ತನ್ನ ಅರ್ಧ ಸವರನ್​ ಚಿನ್ನದ ಉಂಗುರವನ್ನು ಮಾರಾಟ ಮಾಡಲು ಚಾವಕ್ಕಾಡ್​ಗೆ ಬಂದಿರುತ್ತಾರೆ. ತರಾತುರಿಯಲ್ಲಿ ನಡೆಯಬೇಕಾದರೆ ಆಕಸ್ಮಿಕವಾಗಿ ಹಸೀನಾ ಕೈಯಲ್ಲಿದ್ದ ಚಿನ್ನದ ಉಂಗುರ ಜಾರಿ ಕಾಂಕ್ರಿಟ್​ ಸ್ಲ್ಯಾಬ್​ ನಡುವೆ ತೂರಿ ಹೋಗಿ ಚರಂಡಿಗೆ ಬೀಳುತ್ತದೆ. ಅದನ್ನು ಮರಳಿ ಪಡೆಯಲು ಹಸೀನಾ ಸಾಕಷ್ಟು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ. ಏನು ಮಾಡುವುದು ಯೋಚಿಸುತ್ತಿರುವಾಗಲೇ ಹಸೀನಾಗೆ ಥಟ್ಟನೇ ನೆನಪಾಗುವುದು ಪೊಲೀಸ್​ ಠಾಣೆ. ತಕ್ಷಣ ಅವರು ಚಾವಕ್ಕಾಡ್​ ಪೊಲೀಸ್​ ಠಾಣೆಗೆ ಕಣ್ಣೀರಿಡುತ್ತಾ ಬರುತ್ತಾರೆ.
ಈ ವೇಳೆ ರಾಣೆಯ ಪೊಲೀಸ್​ ಅಧಿಕಾರಿ ಸೌದಮಣಿ, ಹಸೀನಾ ಅಳಲನ್ನು ಕೇಳಿ ಅವರಿಗೆ ಸಮಾಧಾನ ಮಾಡಿ ಸಹಾಯ ಮಾಡಲು ಮುಂದಾಗುತ್ತಾರೆ. ಹಸೀನಾರನ್ನು ಕರೆದುಕೊಂಡು ಉಂಗುರ ಕಳೆದುಕೊಂಡ ಸ್ಥಳಕ್ಕೆ ತೆರಳುತ್ತಾರೆ. ಬಳಿಕ ಒಂದು ಜೆಸಿಬಿಯನ್ನು ತರಿಸಿ, ಕಾಂಕ್ರಿಟ್​ ಸ್ಲ್ಯಾಬ್​ಗಳನ್ನು ತೆಗೆಸಿ, ಚರಂಡಿಯಲ್ಲಿದ್ದ ಕೊಳಕನ್ನು ಹೊರ ತೆಗೆಸುತ್ತಾರೆ. ಬಳಿಕ ಕೊಳಕಿನಲ್ಲಿ ಹುಡುಕಾಡಿದಾಗ ಚಿನ್ನದ ಉಂಗುರ ಪತ್ತೆಯಾಗುತ್ತದೆ. ಅಷ್ಟರಲ್ಲಿ ಹಸೀನಾ ಕೂಡ ನಿಟ್ಟುಸಿರು ಬಿಡುತ್ತಾ ಪೊಲೀಸ್​ ಅಧಿಕಾರಿ ಸೌದ ಮಣಿ ಅವರಿಗೆ ಧನ್ಯವಾದ ತಿಳಿಸುತ್ತಾರೆ.
ಸರಿಯಾದ ಸಮಯಕ್ಕೆ ಮಹಿಳೆಗೆ ಕಷ್ಟಕ್ಕೆ ಸ್ಪಂದಿಸಿದ ಸೌದ ಮಣಿ ಅವರಿಗೆ ಸಾರ್ವಜನಿಕರಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಸ್ಟೋರಿಯನ್ನು ಫೇಸ್​ಬುಕ್​ಗಳಲ್ಲಿ ಬರೆದುಕೊಂಡು ಸೌದ ಮಣಿ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್​)
ತುಮಕೂರು ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್​ ಪತ್ತೆ ಕೇಸ್​​: ಪೊಲೀಸ್​ ತನಿಖೆಯಲ್ಲಿ ಅಸಲಿಯತ್ತು ಬಯಲು..!

ಲವರ್​ ಜತೆ ಸೇರಿ ಗಂಡನ ಕೊಲೆ: ಕೆಮಿಕಲ್​ನಿಂದ ಮೃತದೇಹ ಕರಗಿಸಲು ಹೋದ ಪತ್ನಿಗೆ ಕಾದಿತ್ತು ಶಾಕ್​!

ಶರೀರದಲ್ಲಿ ಕೆಟ್ಟ ಕೊಬ್ಬಿನಾಂಶ ಕರಗಿಸಿ ಆರೋಗ್ಯ ಕಾಪಾಡುವಲ್ಲಿ ಧಾನ್ಯಗಳ ಪಾತ್ರ ತುಂಬಾ ಮಹತ್ವದ್ದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
