ವಿಜಯವಾಡ (ಆಂಧ್ರ ಪ್ರದೇಶದ):ವಿಜಯವಾಡದ ಸತ್ಯನಾರಾಯಣಪುರಂ ಪೊಲೀಸ್​ ಠಾಣೆಯ ಮಹಿಳಾ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್ (ಪ್ರೊಬೆಷನರಿ) ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವು ಪ್ರೇಮ ವೈಫಲ್ಯ ತಿರುವು ಪಡೆದುಕೊಂಡಿದೆ. ​
ಕೊಂಡುರು ವಲಯದ ಯುವತಿ ಕೆಲವು ತಿಂಗಳ ಹಿಂದೆ ಪಿಎಸ್​ಐ ಆಗಿ ನೇಮಕವಾಗಿದ್ದರು. ವಿಜಯವಾಡದ ಅಯೋಧ್ಯ ನಗರದಲ್ಲಿ ವಾಸವಿದ್ದ ಪಿಎಸ್​ಐ ಇದೇ ತಿಂಗಳ 12ರಂದು ರಾತ್ರಿ 11.30ರ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದರು. ಅದಕ್ಕೂ ಮುನ್ನ ಸೆಂಟ್ರಲ್​ ಕ್ರೈಮ್​ ಸ್ಟೇಷನ್​ಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಾಹಿತಿ ನೀಡಿದ್ದರು. ಬಳಿಕ ಸತ್ಯನಾರಾಯಣಪುರಂ ಠಾಣೆಗೆ ಮಾಹಿತಿ ತಿಳಿದು ಅಲ್ಲಿನ ಸಿಬ್ಬಂದಿ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದರು.
ಮಹಿಳಾ ಪಿಎಸ್​ಐ ಮನೆಯೊಳಗೆ ಆಗಮಿಸಿದ ಪೊಲೀಸ್​ ಸಿಬ್ಬಂದಿಯ ಕಣ್ಣಿಗೆ ಉಗುರು ಬಣ್ಣ ಮತ್ತು ಸ್ಯಾನಿಟೈಸರ್​ ಬಾಟಲಿ ಕಣ್ಣಿಗೆ ಬಿದ್ದಿತ್ತು. ಎರಡನ್ನು ಮಿಶ್ರಣ ಮಾಡಿ ಪಿಎಸ್​ಐ ಸೇವಿಸಿರುವುದು ಖಚಿತವಾಯಿತು. ತಕ್ಷಣ ಆಕೆಯನ್ನು ಸಿಂಗನಗರಕ್ಕೆ ದಾಖಲಿಸಿ, ಚೇತರಿಕೆ ಬಳಿಕ ಅವರನ್ನು ಮನೆಗೆ ಸೇರಿಸಲಾಯಿತು.
ಆತ್ಮಹತ್ಯೆ ಯತ್ನ ಹಿಂದಿದೆ ಲವ್​ ಫೇಲ್ಯೂರ್​ಮಹಿಳಾ ಪಿಎಸ್​ಐ ಆತ್ಮಹತ್ಯೆಗೆ ಲವ್​ ಕಾರಣ ಎಂದು ಹೇಳಲಾಗಿದೆ. ಆಕೆ ಸೆಂಟ್ರಲ್​ ಕ್ರೈಮ್​ ಸ್ಟೇಷನ್​ನಲ್ಲಿ ಕೆಲಸ ಮಾಡುವ ಎಸ್​ಐ ಜತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಆದರೆ, ತಾನು ಪ್ರೀತಿಸುತ್ತಿದ್ದ ಎಸ್​ಐ ಇತ್ತೀಚೆಗೆ ಇನ್ನೊಬ್ಬಳ ಜತೆ ಮದುವೆ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದುಬಂದಿದೆ.
ಇದೀಗ ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಪಿಎಸ್​ಐ ವಿರುದ್ಧ ಅಜಿತ್​ ಸಿಂಗ್​ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.(ಏಜೆನ್ಸೀಸ್​)
ಪಾಕಿಸ್ತಾನದಲ್ಲಿ ಪಂಜಾಬಿ ಹಾಡು ಹಾಡ್ತಿದ್ದಾರೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್!
ಪರ ಪುರುಷನ ಜತೆ ಸಂಬಂಧ: ಮಹಿಳೆಯ ಬಟ್ಟೆಗಳನ್ನು ಕಿತ್ತೆಸೆದು ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು!
ನಟಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಪ್ರತಿಷ್ಠಿತ ಉದ್ಯಮಿ ಸೇರಿದಂತೆ ಐವರ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − one =
Remember me
