ಜೈಪುರ:ರಾಜಸ್ಥಾನದ ಲೇಡಿ ಸಿಂಗಂ ಖ್ಯಾತಿಯ ಪೊಲೀಸ್​ ಸಬ್​​ ಇನ್ಸ್​ಪೆಕ್ಟರ್​ ಸೀಮಾ ಝಖರ್​ ಅವರನ್ನು ಪೊಲೀರು ಬಂಧಿಸಿದ್ದಾರೆ. ಸ್ಮಗ್ಲರ್​ಗಳಿಗೆ ನೆರವು ಮತ್ತು ಪ್ರೋತ್ಸಾಹ ನೀಡಿದ ಆರೋಪದ ಮೇಲೆ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್​ ವಶಕ್ಕೆ ಪಡೆದುಕೊಳ್ಳಲಾಗಿದೆ.
ಭ್ರಷ್ಟಾಚಾರದಲ್ಲೇ ಮುಳುಗಿದ್ದ ಸೀಮಾ ಝಾಖರ್​, ರಾಜಸ್ಥಾನದ ಸಿರೋಹ್​ ಜಿಲ್ಲೆಯ ಬರ್ಲೋಟ್​ ಪೊಲೀಸ್​ ಠಾಣೆಗೆ ಎಸ್​ಎಚ್​ಒ ಆಗಿ ಕೆಲಸ ಮಾಡುತ್ತಿದ್ದರು. ಸ್ಮಗ್ಲರ್​ಗಳ ಜೊತೆ ಸಂಪರ್ಕ ಬೆಳಸಿಕೊಂಡಿದ್ದ ಸೀಮಾ, ಕಳೆದ ವರ್ಷ ನವೆಂಬರ್ 14 ರಂದು ರಾತ್ರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆದೇಶದ ಮೇರೆಗೆ ಸ್ಮಗ್ಲರ್​ಗಳನ್ನು ಹಿಡಿಯಲು ತಮ್ಮ ತಂಡದ ಜೊತೆ ಹೋಗಿದ್ದರು. ಸ್ಮಗ್ಲರ್​ಗಳನ್ನು ಹಿಡಿದಿದ್ದ ಸೀಮಾ, ಅವರಿಂದ 10 ಲಕ್ಷ ರೂಪಾಯಿ ಲಂಚ ಪಡೆದು ಒಪ್ಪಂದ ಮಾಡಿಕೊಂಡಿದ್ದರು.
ಇದಾದ ಬಳಿಕ ಸ್ಮಗ್ಲರ್​ಗಳನ್ನು ತಮ್ಮ ಸ್ವಂತ ವಾಹನದಲ್ಲಿ ಡ್ರಾಪ್​ ಮಾಡಿದ್ದ ಸೀಮಾ, ಅವರಿಂದ 10 ಲಕ್ಷ ರೂ. ಪಡೆದು ಉದಯ್​ಪುರ್​ಗೆ ತೆರಳಿದ್ದರು. ಈ ವಿಚಾರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಗಮನಕ್ಕೆ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಲಂಚ ಪಡೆದಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ನವೆಂಬರ್​ 26ರಂದು ಮೂವರು ಕಾನ್ಸ್​ಟೇಬಲರ್​ ಸೇರಿದಂತೆ ಸೀಮಾರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.
ಇನ್ನೊಂದೆಡೆ ಸೀಮಾರ ಮದುವೆ ನವೆಂಬರ್​ 269ರಂದು ಜೋಧ್​ಪುರದಲ್ಲಿ ನಡೆಯಿತು. ಈ ಮದುವೆಗೆ ಅನೇಕ ರಾಜಕೀಯ ವ್ಯಕ್ತಿಗಳು ಕೂಡ ಬಂದಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹುಕಾಲದವರೆಗೂ ಹರಿದಾಡಿತ್ತು. ಸಾರ್ವಜನಿಕ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಭ್ರಷ್ಟಾಚಾರ ಆರೋಪದ ಮೇಲೆ ಅಮಾನತುಗೊಂಡಿರುವ ಸೀಮಾ ಜಖರ್ ಅವರನ್ನು ಪೊಲೀಸರು, ಕಳೆದ ಭಾನುವಾರ ರಾತ್ರಿ ಜೋಧ್‌ಪುರದಲ್ಲಿರುವ ಅತ್ತೆಯ ಮನೆಯಲ್ಲಿ ಬಂಧಿಸಿದ್ದಾರೆ ಎಂದು ಸಿರೋಹಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಸಿಂಗ್ ಹೇಳಿದ್ದಾರೆ. ಡ್ರಗ್ಸ್​ ಕೇಸ್​ ಅಡಿಯಲ್ಲಿ ಬಂಧಿಸಲಾಗಿದ್ದು, ಸ್ವರೂಪ್ ಗಂಜ್ ಪೊಲೀಸ್ ಠಾಣೆಯಲ್ಲಿ ಆಕೆಯನ್ನು ವಿಚಾರಣೆ ನಡೆಸಿ, ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೀಮಾ ಜಖರ್ ಅವರನ್ನು ಅಮಾನತುಗೊಳಿಸುವ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಕೆ ತನ್ನನ್ನು ಲೇಡಿ ಸಿಂಗಂ ಎಂದು ಸಂಬೋಧಿಸಿಕೊಂಡಿದ್ದರು. ಆಕೆಯನ್ನು ಕೆಲಸದಿಂದ ಅಮಾನತುಗೊಳಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅಪ್‌ಡೇಟ್ ಬಂದಿಲ್ಲ.(ಏಜೆನ್ಸೀಸ್​)
ಸೋನಿಯಾ ಗಾಂಧಿ ಆಪ್ತ ಸಹಾಯಕ 71 ವರ್ಷದ ಮಾಧವನ್​ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು!

ಅಮೇಜಾನ್​, ಗೂಗಲ್​ ಬಿಟ್ಟು ಫೇಸ್​ಬುಕ್​ ಕೆಲ್ಸಕ್ಕೆ ಸೈ ಎಂದ ವಿದ್ಯಾರ್ಥಿಯ ಸಂಬಳ ಕೇಳಿದ್ರೆ ಹುಬ್ಬೇರಿಸ್ತೀರಾ!

ಸಾವಿನ ದವಡೆಯಲ್ಲಿ ಸಿಲುಕ್ಕಿದ್ದ ಯುವನಟಿಯ ಪ್ರಾಣ ಉಳಿಸಿದ ನೆಟ್ಟಿಗರು! ಸ್ವಲ್ಪ ತಡವಾಗಿದ್ರೂ ಜೀವ ಹೋಗ್ತಿತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
