ಲಖನೌ:ಮುಂಬರುವ ಉತ್ತರ ಪ್ರದೇಶ ವಿಧಾನಸಭೆಯ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಸಮಾಜವಾದಿ ಪಾರ್ಟಿ(ಎಸ್​ಪಿ)ಯ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದ್ದು, ಉಭಯ ಪಕ್ಷಗಳ ನಾಯಕರು ಈಗಿನಿಂದಲೇ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ಮತ್ತು ವಾಗ್ದಾಳಿಗಳು ಸಾಮಾನ್ಯವಾಗಿವೆ.
ಸೋಮವಾರ ಬಿಜೆಪಿಗೆ ತಿರುಗೇಟು ನೀಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​, ಪ್ರತಿದಿನ ನನ್ನ ಕನಸಿನಲ್ಲಿ ಬರುವ ಶ್ರೀ ಕೃಷ್ಣ ಪರಮಾತ್ಮ ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಮ್ಮದೇ ಗೆಲುವು ಎಂದಿದ್ದಾರೆ.
ಮಥುರಾ ವಿಧಾನಸಭಾ ಸ್ಥಾನದಿಂದ ಹಾಲಿ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಕಣಕ್ಕಿಳಿಸುವಂತೆ ಶ್ರೀ ಕೃಷ್ಣ ಪರಮಾತ್ಮ ನನ್ನ ಕನಸಿನಲ್ಲಿ ಬಂದು ಹೇಳಿದ್ದಾನೆ. ಅವರು ಖಂಡಿತ ಗೆಲ್ಲಲಿದ್ದಾರೆ. ಹೀಗಾಗಿ ಯೋಗಿ ಅವರನ್ನು ಮಥುರಾದಿಂದ ಕಣಕ್ಕಿಳಿಸಿ ಎಂದು ಉತ್ತರ ಪ್ರದೇಶದ ಬಿಜೆಪಿ ರಾಜ್ಯಸಭಾ ಸದಸ್ಯ ಹರ್ನಾಥ್​ ಸಿಂಗ್​ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾರಿಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ ಅಖಿಲೇಶ್​ ಯಾದವ್ ತಿರುಗೇಟು ನೀಡಿದ್ದಾರೆ. ​
#WATCH| "Lord Sri Krishna comes to my dream every night to tell me that our party is going to form the government,” said Former UP CM and Samajwadi Party chief Akhilesh Yadav yesterdaypic.twitter.com/rmq1p8XgwT
— ANI UP/Uttarakhand (@ANINewsUP)January 4, 2022

ಬಾಬಾ (ಯೋಗಿ ಆದಿತ್ಯನಾಥ್​) ವಿಫಲರಾಗಿದ್ದಾರೆ. ಅವರನ್ನು ಯಾರು ಉಳಿಸಲು ಆಗುವುದಿಲ್ಲ. ಪ್ರತಿಯೊಂದು ರಾತ್ರಿ ಕೃಷ್ಣ ಪರಮಾತ್ಮ ನನ್ನ ಕನಸಿನಲ್ಲಿ ಬರುತ್ತಿದ್ದಾರೆ ಮತ್ತು ಮುಂದೆ ನಮ್ಮ ಪಕ್ಷವೇ ಸರ್ಕಾರ ರಚಿಸುವುದಾಗಿ ಹೇಳಿದೆ ಎಂದು ಸೋಮವಾರ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ಎಸ್‌ಪಿ ನಡುವೆ ತೀವ್ರ ವಾಕ್ಸಮರ ನಡೆದಿದೆ. ಕಾನೂನು ಮತ್ತು ಸುವ್ಯವಸ್ಥೆ, ರಾಮಮಂದಿರ, ಪಿಯೂಷ್ ಜೈನ್ ಪ್ರಕರಣ, ಮಾಫಿಯಾ ರಾಜ್ ಮುಂತಾದ ಹಲವಾರು ವಿಷಯಗಳಲ್ಲಿ ಉಭಯ ಪಕ್ಷಗಳು ಪರಸ್ಪರ ದಾಳಿ ನಡೆಸುತ್ತಿವೆ.(ಏಜೆನ್ಸೀಸ್​)
ಗರ್ಭಿಣಿ ಪತ್ನಿ ಮನೆಯಲ್ಲಿರುವಾಗಲೇ ಗುಂಡು ಹಾರಿಸಿಕೊಂಡು ಇನ್ಸ್​ಪೆಕ್ಟರ್​ ಆತ್ಮಹತ್ಯೆಗೆ ಶರಣು

ಆಗಲ್ಲ ಅಂದ್ರೂ ಪಾಲಕರು ಬಿಡ್ಲಿಲ್ಲ: ಹೊಸ ವರ್ಷದಂದೇ ಬಿಇ​ ವಿದ್ಯಾರ್ಥಿನಿ ಕಾಲುವೆಗೆ ಹಾರಿ ಪ್ರಾಣಬಿಟ್ಲು

ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಕೋವಿಡ್​ ಪರೀಕ್ಷೆ ಒಂದು ಹಗರಣ: ಪ್ರಯಾಣಿಕನ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 7 =
Remember me
