ಲಿಂಗಂಪೇಟೆ(ಯೆಲ್ಲಾರೆಡ್ಡಿ):ಹಿರಿಯರು ಮದುವೆಗೆ ಒಪ್ಪಲಿಲ್ಲ ಎಂದು ಯುವಜೋಡಿ ಆತ್ಮಹತ್ಯೆ ಯತ್ನಿಸಿದಿರುವ ಘಟನೆ ತೆಲಂಗಾಣದ ಲಿಂಗಂಪೇಟೆಯಲ್ಲಿ ನಡೆದಿದೆ. ದುರಾದೃಷ್ಟವಶಾತ್​ ಯುವತಿ ಮೃತಪಟ್ಟಿದ್ದಾಳೆ.
ದಿವ್ಯಾ ಅಲಿಯಾಸ್​ ಮಾಧವಿ (17) ಮತ್ತು ರಾಜು (23) ಕಾಮರೆಡ್ಡಿ ಜಿಲ್ಲೆಯ ಲಿಂಗಂಪೇಟೆ ಮಂಡಲದ ಅಯಿಲಾಪುರ್​ ಗ್ರಾಮದವರು. ಇಬ್ಬರು ಒಂದು ವರ್ಷದಿಂದಲೂ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಮದುವೆಗೆ ಹಿರಿಯರು ಒಪ್ಪಿರಲಿಲ್ಲ. ಇದರಿಂದ ಮನನೊಂದು ಗ್ರಾಮದ ಹೊರವಲಯದ ಜಮೀನಿಗೆ ತೆರಳಿ ಇಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ವಿಚಾರ ತಿಳಿದು ಕುಟುಂಬಸ್ಥರು ಜಮೀನಿಗೆ ಓಡಿ ಹೋಗಿದ್ದಾರೆ. ಈ ವೇಳೆ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮಾಧವಿ ಮೃತಪಟ್ಟರೆ, ರಾಜು ಸ್ಥಿತಿ ಗಂಭೀರವಾಗಿದೆ.
ಮಾಧವಿ 10ನೇ ತರಗತಿ ಪೂರ್ಣಗೊಳಿಸಿ ಮನೆಯಲ್ಲಿ ಉಳಿದಿದ್ದಳು. ರಾಜು 10ನೇ ತರಗತಿಯನ್ನು ಮುಗಿಸಿ ಕೆಲಸಕ್ಕಾಗಿ ದುಬೈಗೆ ಹೋಗಿದ್ದ. ಎರಡು ವರ್ಷಗಳ ಕಾಲ ದುಬೈನಲ್ಲಿದ್ದ. ಕರೊನಾ ಮೊದಲ ಅಲೆಯ ಲಾಕ್​ಡೌನ್​ ವೇಳೆ ಊರಿಗೆ ಹಿಂತಿರುಗಿದ್ದ. ಅಂದಿನಿಂದ ಮಾಧವಿ ಮತ್ತು ರಾಜು ಪ್ರೀತಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸದ್ಯ ಯುವತಿ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ನಕಲಿ ಐಡಿ, ಪ್ರೀತಿ, ಕೊಲೆ, ಆತ್ಮಹತ್ಯೆ! ಮಗು ಸೇರಿ ಮೂವರ ಪ್ರಾಣ ಕಸಿದ ಫೇಸ್​ಬುಕ್​ ಟೈಮ್​ ಪಾಸ್ ಲವ್​​

ಅರಣ್ಯದಲ್ಲಿ ಮಗು ಅಳುವ ಶಬ್ದ ಕೇಳಿ ಅಲ್ಲಿಗೆ ತೆರಳಿದವರಿಗೆ ಕಾದಿತ್ತು ಬಿಗ್​ ಶಾಕ್​!

ಗೂಗಲ್‌ನಲ್ಲಿ ಪುರುಷರು ಅತೀ ಹೆಚ್ಚಾಗಿ ಹುಡುಕುವುದು ಇವಂತೆ- ಸಮೀಕ್ಷೆ ಏನು ಹೇಳಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 13 =
Remember me
