ಹೈದರಾಬಾದ್​:ಅತಿ ಅಮಾನವೀಯ ಘಟನೆಯೊಂದು ತೆಲಂಗಾಣದ ವಿಕಾರಾಬಾದ್​ನಲ್ಲಿ ನಡೆದಿದೆ. ಸ್ಥಳೀಯರ ಪ್ರಕಾರ ಯುವಕನೊಬ್ಬ ಪ್ರೀತಿಯೆಂಬ ಮಾಯಾಜಾಲದಲ್ಲಿ ಬಿದ್ದಿದ್ದ. ಹಿರಿಯರು ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಯುವಕನಿಗೆ ಪ್ರೇಯಸಿ ಮನವೊಲಿಸಿದ್ದಾಳೆ. ಮಾತು ನಂಬಿದ ಪ್ರಿಯಕರ ಸಾವಿನ ಹಾದಿ ಹಿಡಿದಿದ್ದಾನೆ.
ವಿನಯ್​ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ವಿಕಾರಾಬಾದ್​ ಜಿಲ್ಲೆಯ ದೋಮ ಮಂಡಲದ ಕಿಶ್ತಪುರ್​ ಗ್ರಾಮದಲ್ಲಿ ಘಟನೆ ನಡೆದಿದೆ. ಜೂನ್​ 29ರಂದು ಅತಿಯಾಗಿ ಡ್ರಗ್ಸ್​ ಸೇವನೆ ಮಾಡಿದ ವಿನಯ್ ತನ್ನ ಸಾವನ್ನು ತಾನೇ ತಂದುಕೊಂಡಿದ್ದಾನೆ. ಆತ್ಮಹತ್ಯೆಯ ಬಗ್ಗೆ ವರದಿ ಮಾಡದೇ ಆತನ ಅಂತ್ಯಕ್ರಿಯೆಯನ್ನು ಕುಟುಂಬದ ಸದಸ್ಯರು ನೆರವೇರಿಸಿದರು. ಇದಾದ ಬಳಿಕ ಆತನ ಮೊಬೈಲ್​ ಪರಿಶೀಲಿಸಿದಾಗ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ವಿನಯ್​ ಆತ್ಮಹತ್ಯೆ ಪ್ರೀತಿಯೇ ಕಾರಣ ಎಂದು ತಿಳಿದಕೂಡಲೇ ಆತನ ಕುಟುಂಬಸ್ಥರು ದೂರು ದಾಖಲಿಸಿದರು. ಇದಾದ ಬೆನ್ನಲ್ಲೇ ಸಮಾಧಿ ಮಾಡಲಾಗಿದ್ದ ವಿನಯ್​ ಶವವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿದಾಗ ಅತಿಯಾದ ಡ್ರಗ್ಸ್​ ಸೇವನೆಯಿಂದ ಮೃತಪಟ್ಟಿರುವುದು ಖಚಿತವಾಗಿದೆ.
ವಿನಯ್​ ಕಳೆದ ಕೆಲವು ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಅವರ ಪ್ರೀತಿಗೆ ಪ್ರೇಯಸಿ ಮನೆಯವರ ಒಪ್ಪಿಗೆ ಇರಲಿಲ್ಲ. ಇದಾದ ಬಳಿಕ ಇಬ್ಬರು ಒಂದು ಒಪ್ಪಂದಕ್ಕೆ ಬಂದಿದ್ದರು. ಮೊಬೈಲ್​ ಮೂಲಕ ಚಾಟಿಂಗ್​ ನಡೆಸಿದ್ದ ಇಬ್ಬರು ಡ್ರಗ್ಸ್​ ಸೇವಿಸಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
ಪ್ರೇಯಸಿಯ ಮಾತನ್ನು ನಂಬಿದ ಯುವಕ ಕೊನೆಗೂ ಆತ್ಮಹತ್ಯೆ ಮಾಡಿಕೊಂಡೇ ಬಿಟ್ಟ. ಆದರೆ, ಆತನ ಪ್ರೇಯಸಿ ಮಾತ್ರ ಒಪ್ಪಂದದ ಪ್ರಕಾರ ನಡೆಯಲೇ ಇಲ್ಲ. ಬದಲಾಗಿ ಪ್ರಿಯಕರನನ್ನು ಸಾವಿನ ಕೂಪಕ್ಕೆ ತಳ್ಳಿ, ಆತನ ಅಂತ್ಯಕ್ರಿಯೆಯ ದಿನವೇ ಆಕೆ ಮತ್ತೊಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ.
ಇದೀಗ ಈ ವಿಚಾರ ತಿಳಿದಿರುವ ವಿನಯ್​ ಪಾಲಕರು ಆತನ ಸಾವಿನ ನ್ಯಾಯ ಕೊಡಿಸಿ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಯುವತಿ ಪ್ರಚೋದನೆ ನೀಡಿದ್ದಾಳೆಂದು ದೂರಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ಲೋನ್​ ಬೇಕಾದ್ರೆ ಲೈಂಗಿಕ ಸುಖ ನೀಡ್ಬೇಕಂತೆ! ಬ್ಯಾಂಕ್​ ಮ್ಯಾನೇಜರ್ ಕಳ್ಳಾಟ ಸಿಸಿಟಿವಿಯಲ್ಲಿ ಬಯಲು​​

ನೀವು ಹೀಗೆ ಟಾರ್ಚರ್ ಮಾಡಿದ್ರೆ ನಾವು ಬರೆದಿಟ್ಟು ಸಾಯ್ತೆವೆ! ಅರಸೀಕೆರೆ ನಗರಸಭೆ ಸದಸ್ಯೆಯ ಅಳಲು

ಒಬ್ಬನ ಹುಟ್ಟುಹಬ್ಬ, ಮತ್ತೊಬ್ಬನಿಗೆ ಸಾವು, ಇನ್ನೊಬ್ಬನಿಗೆ ಗಾಯ: ಅಷ್ಟಕ್ಕೂ ದೇಹ ಛಿದ್ರವಾಗಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
