ಅಮ್ರಾಬಾದ್​:ಪ್ರೇಮಿಗಳಿಬ್ಬರು ತೆಲಂಗಾಣದ ನಾಗರ್​ಕರ್ನೂಲ್​ ಜಿಲ್ಲೆಯ ಮದ್ದಿಮಡುಗು ನಲ್ಲಮಲ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಘಟನೆ ಬಗ್ಗೆ ಪದರಾ ಎಸ್​ಐ ಸುರೇಶ್​ ಕುಮಾರ್ ವಿವರಣೆ ನೀಡಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ತಲಕೊಂಡಪಲ್ಲಿ ಮಂಡಲದ ಗಟ್ಟು ಇಪ್ಪಲಪಲ್ಲಿ ಗ್ರಾಮದ ಶ್ರೀನಿವಾಸನ್ (28)​ ಅದೇ ಗ್ರಾಮದ ಸಮಂತಾ (27) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರಿಂದ ಹಿರಿಯರ ಒಪ್ಪಿಗೆ ಇರಲಿಲ್ಲ. ಇದರ ನಡುವೆ ಸಮಂತಾಳನ್ನು 8 ವರ್ಷದ ಹಿಂದೆಯೇ ಸಿಕಂದರಾಬಾದ್​ ಮೂಲದ ಸತೀಶ್​ ಜತೆಗೆ ಮದುವೆ ಮಾಡಲಾಗಿದೆ. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ.
ಹೀಗಿರುವಾಗ ಕೆಲವು ದಿನಗಳ ಹಿಂದೆ ತವರಿಗೆ ಬಂದ ಸಮಂತಾ ಜೂನ್​ 24ರಂದು ನಾಲ್ಕು ವರ್ಷದ ಮಗನನ್ನು ಕರೆದುಕೊಂಡು ಪ್ರಿಯಕರ ಶ್ರೀನಿವಾಸನ್​ ಜತೆ ಪರಾರಿಯಾಗಿದ್ದಾಳೆ. ಇದರ ಬೆನ್ನಲ್ಲೇ ಆಕೆಯ ಗಂಡನ ಮನೆಯವರು ಹೈದರಾಬಾದ್​ನ ಜವಹಾರ್​ ನಗರ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ.
ದೂರಿನ ಬೆನ್ನಲ್ಲೇ ಶ್ರೀನಿವಾಸನ್​ ಮತ್ತು ಸಮಂತಾ ಶನಿವಾರ ಅವರವರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ತಕ್ಷಣ ಎಚ್ಚೆತ್ತ ಪಾಲಕರು ಇಬ್ಬರ ಬಗ್ಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರ ಸಹಾಯದಿಂದ ಹುಡುಕಾಡಲು ಆರಂಭಿಸಿದ್ದಾರೆ.
ಫೋನ್​ನಲ್ಲಿ ಪ್ರೇಮಿಗಳು ಹೇಳಿದ ಸ್ಥಳಕ್ಕೆ ಭೇಟಿ ನೀಡಿದಾಗ ಅರಣ್ಯದಿಂದ ಮಗುವ ಅಳುವ ಶಬ್ದವನ್ನು ಕೇಳಿ ಅಲ್ಲಿಗೆ ಹೋಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಇಬ್ಬರು ಕೀಟನಾಶಕ ಸೇವಿಸಿ ಸಾವಿಗೀಡಾಗಿದ್ದರು. ಇಬ್ಬರ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.(ಏಜೆನ್ಸೀಸ್​)
ಒಂದು ವೃಕ್ಷವನ್ನು ಬೆಳೆಸುವುದು ಹತ್ತು ಸುಪುತ್ರರನ್ನು ಪಡೆಯುವುದಕ್ಕೆ ಸಮಾನ

ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇಮಿಗಳ ನಿರ್ಧಾರ! ಆದ್ರೆ ಆಗಿದ್ದೇ ಬೇರೆ, ಪ್ರೀತಿ ಕೊಂದ ಮಾಯಾಂಗನೆ

ಲೋನ್​ ಬೇಕಾದ್ರೆ ಲೈಂಗಿಕ ಸುಖ ನೀಡ್ಬೇಕಂತೆ! ಬ್ಯಾಂಕ್​ ಮ್ಯಾನೇಜರ್ ಕಳ್ಳಾಟ ಸಿಸಿಟಿವಿಯಲ್ಲಿ ಬಯಲು​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 7 =
Remember me
