ಭೋಪಾಲ್​:ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಅಥವಾ ವಜ್ರ, ಚಿನ್ನ ಸಿಕ್ಕಿ ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಮಧ್ಯ ಪ್ರದೇಶದ ರೈತನೊಬ್ಬನಿಗೆ ಅದೃಷ್ಟ ಲಕ್ಷ್ಮೀ ಖುಲಾಯಿಸಿದ್ದಾಳೆ. ವಜ್ರ ಗಣಿಗಾರಿಕೆಯಲ್ಲಿ ಪ್ರಖ್ಯಾತಿಯನ್ನು ಹೊಂದಿರುವ ಪನ್ನಾ ಜಿಲ್ಲೆಯಲ್ಲಿ ಲೀಸ್​ಗೆ ಹಾಕಿಕೊಂಡಿದ್ದ ಗಣಿಯಲ್ಲಿ ರೈತನೊಬ್ಬನಿಗೆ 11.88 ಕ್ಯಾರೆಂಟ್​ ಉತ್ತಮ ಗುಣಮಟ್ಟದ ವಜ್ರ ದೊರಕಿದೆ.
ಕೂಲಿ ಕೆಲಸ ಮಾಡುತ್ತಿರುವ ಸಣ್ಣ ರೈತ ಪ್ರತಾಪ್ ಸಿಂಗ್ ಯಾದವ್ ಅವರು ಜಿಲ್ಲೆಯ ಪನ್ನಾ ಜಿಲ್ಲೆ ಪಟ್ಟಿ ಪ್ರದೇಶದ ಗಣಿಯಿಂದ ಈ ವಜ್ರವನ್ನು ಪತ್ತೆಹಚ್ಚಿದ್ದಾರೆ ಎಂದು ವಜ್ರದ ಅಧಿಕಾರಿ ರವಿ ಪಟೇಲ್ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಅಲ್ಲದೆ, ಉತ್ತಮ ಗುಣಮಟ್ಟದ ಈ ವಜ್ರವನ್ನು ಮುಂಬರುವ ಹರಾಜಿನಲ್ಲಿ ಮಾರಾಟಕ್ಕೆ ಇಡಲಾಗುವುದು ಮತ್ತು ಸರ್ಕಾರದ ಮಾರ್ಗಸೂಚಿಯಂತೆ ಬೆಲೆಯನ್ನು ನಿಗದಿಪಡಿಸಲಾಗುವುದು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಪ್ರತಾಪ್​ ಸಿಂಗ್​ ಯಾದವ್, ನಾನು ಸಣ್ಣ ಕೃಷಿ ಭೂಮಿ ಹೊಂದಿರುವ ಬಡ ವ್ಯಕ್ತಿ. ನಾನು ಕೂಡ ಕೂಲಿ ಕೆಲಸ ಮಾಡುತ್ತೇನೆ. ನಾನು ಕಳೆದ ಮೂರು ತಿಂಗಳಿನಿಂದ ಈ ಗಣಿಯಲ್ಲಿ ಕಷ್ಟಪಟ್ಟು ವಜ್ರವನ್ನು ಪಡೆದು ಡೈಮಂಡ್ ಆಫೀಸ್‌ಗೆ ನೀಡಿದ್ದೇನೆ. ಈ ವಜ್ರದ ಹರಾಜಿನಿಂದ ಬಂದ ಹಣವನ್ನು ವ್ಯಾಪಾರದ ಬೆಳವಣಿಗೆ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುವುದು ಎಂದು ತಿಳಿಸಿದ್ದಾರೆ.
ಖಾಸಗಿ ಅಂದಾಜಿನ ಪ್ರಕಾರ ರೈತ ಯಾದವ್​ಗೆ ದೊರೆತಿರುವ ವಜ್ರವು ಹರಾಜಿನಲ್ಲಿ 50 ಲಕ್ಷ ರೂ.ಗೂ ಹೆಚ್ಚು ಬೆಲೆ ಬಾಳಬಹುದು ಎಂದಿದ್ದಾರೆ. ಕಚ್ಚಾ ವಜ್ರವನ್ನು ಹರಾಜು ಹಾಕಲಾಗುವುದು ಮತ್ತು ಆದಾಯವನ್ನು ಸರ್ಕಾರದ ರಾಯಧನ ಮತ್ತು ತೆರಿಗೆಯನ್ನು ಕಡಿತಗೊಳಿಸಿದ ನಂತರ ರೈತನಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು pನ್ನಾ ಜಿಲ್ಲೆಯಲ್ಲಿ 12 ಲಕ್ಷ ಕ್ಯಾರೆಟ್ ವಜ್ರd ನಿಕ್ಷೇಪವಿದೆ ಎಂದು ಅಂದಾಜಿಸಲಾಗಿದೆ.(ಏಜೆನ್ಸೀಸ್​)
ನಟ ಮಹೇಶ್​ ಬಾಬುಗೆ ಕಪಾಳ ಮೋಕ್ಷ ಮಾಡಿ ಕ್ಷಮೆಯಾಚಿಸಿದ ಕೀರ್ತಿ ಸುರೇಶ್​! ನಡೆದಿದ್ದೇನು? ಇಲ್ಲಿದೆ ಸ್ಫೋಟಕ ಮಾಹಿತಿ

ಜಾತ್ರೆಯ ಊಟ ಮುಗಿಸಿ ಊರಿಗೆ ಹೊರಟ ಸ್ನೇಹಿತರಿಬ್ಬರು ಮಾರ್ಗ ಮಧ್ಯೆ ದುರಂತ ಸಾವು

10 ವರ್ಷದ ಮಗಳನ್ನು ಕಾಮತೃಷೆಗೆ ಬಳಸಿಕೊಳ್ತಿದ್ದ ಉಪ ತಹಸೀಲ್ದಾರ್​ಗೆ ಘನ ಘೋರ ಶಿಕ್ಷೆ ವಿಧಿಸಿದ ಕೋರ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
