ನವದೆಹಲಿ:ಐಷಾರಾಮಿ ಕಾರುಗಳನ್ನೇ ಟಾರ್ಗೆಟ್​ ಮಾಡಿ, ಕದ್ದು ಮಾರಾಟ ಮಾಡುತ್ತಿದ್ದ ಖತರ್ನಾಕ್​ ಖದೀಮನನ್ನು ದೆಹಲಿ ಪೊಲೀಸರು ಬಂದಿಸಿದ್ದಾರೆ.
ಬಂಧಿತನನ್ನು 42 ವರ್ಷದ ಕುನಾಲ್​ ಎಂದು ಗುರುತಿಸಲಾಗಿದೆ. 2003ರಿಂದಲೂ ದುಬಾರಿ ಕಾರುಗಳನ್ನು ಕಳ್ಳತನ ಮಾಡುವುದನ್ನೇ ಕುನಾಲ್​ ಅಭ್ಯಾಸ ಮಾಡಿಕೊಂಡಿದ್ದ. ಆತನಿಂದ ಮೂರು ಕಾರುಗಳು, ನಂಬರ್​ ಪ್ಲೇಟ್​ಗಳು, ಕಾರಿನ ಲಾಕ್​ಗಳು ಮತ್ತು ಬಿಡಿ ಭಾಗಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕದ್ದ ಕಾರನ್ನು ಉತ್ತರ ಪ್ರದೇಶ ಮತ್ತು ಕಾಶ್ಮೀರ ಮುಂತಾದ ಕಡೆ ಕುನಾಲ್​ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಶ್ರೆತಂಕ್​ ಅಗರ್ವಾಲ್​ ಎಂಬುವರು ತಮ್ಮ ಮನೆಯ ಮುಂದೆ ಪಾರ್ಕ್​ ಮಾಡಿದ್ದ ಟೊಯೋಟಾ ಫಾರ್ಚುನರ್​ ಕಾರು ಕಳ್ಳತನ ಆಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಶ್ಮೀರಿ ಗೇಟ್​ನಲ್ಲಿ ಫಾರ್ಚುನರ್​ ಕಾರಿನ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಆತನಿಂದ ವಶಪಡಿಸಿಕೊಂಡ ಕಾರಿನ ನೋಂದಣಿ ಮತ್ತು ನಂಬರ್‌ಗೆ ಯಾವುದೇ ಸಂಬಂಧವಿಲ್ಲ ಎಂಬ ಶಂಕೆಯ ಮೇರೆಗೆ ಅವನನ್ನು ಬಂಧಿಸಲಾಯಿತು. ಇದಾದ ಬಳಿಕ ಆತನ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಕುನಾಲ್​ ಸುಮಾರು 100 ಕಾರುಗಳನ್ನು ಕದ್ದಿರುವ ಬಗ್ಗೆ ಮಾಹಿತಿ ದೊರಕಿದೆ.
ತನ್ನನ್ನು ತಾನು ಕಾರ್​ ಕಿಂಗ್​ ಎಂದು ಕರೆದುಕೊಳ್ಳಲು ಬಯಸುತ್ತಿದ್ದ. ದೆಹಲಿಯ ವಿವಿಧ ಪೊಲೀಸ್​ ಠಾಣೆಯಲ್ಲಿ ಆರೋಪಿ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ. ಆರೋಪಿ ಕುನಾಲ್​ ಐಷಾರಾಮಿ ಜೀವನ ನಡೆಸಲು ಐಷಾರಾಮಿ ಕಾರು ಕಳ್ಳತನದಲ್ಲಿ ಆಗಾಗ ಭಾಗಿಯಾಗಿರುವ ಸಂಗತಿ ಬಯಲಾಗಿದ್ದು, ಇದೀಗ ಸಿಕ್ಕಿಬಿದ್ದು ಕಂಬಿ ಎಣಿಸುತ್ತಿದ್ದಾನೆ.(ಏಜೆನ್ಸೀಸ್​)
ಅಲ್ಲು ಅರ್ಜುನ್​ರ ವ್ಯಾನಿಟಿ ವ್ಯಾನ್​ ಒಳಗಡೆ ಏನೇನಿದೆ? ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​ ವಿತ್​ ಡಿಟೇಲ್ಸ್​!

ದೆವ್ವಗಳು ನಿಜವಾಗಿಯೂ ಇದೆಯೇ? ಐಐಟಿ ನಿರ್ದೇಶಕ ಪ್ರೊ. ಲಕ್ಷ್ಮೀಧರ್​ ಮಾತು ಕೇಳಿದ್ರೆ ಶಾಕ್​ ಆಗ್ತೀರಾ!

ಬಿಸಿಸಿಐ ಜತೆಗಿನ ಜಟಾಪಟಿ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ಮುಳುವಾಯಿತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + nineteen =
Remember me
