ಭೋಪಾಲ್​:ಯಾರೇ ಆಗಲಿ ತಾವು ತುಂಬಾ ಪ್ರೀತಿ ಮಾಡುವವರಿಗೋಸ್ಕರ ಏನು ಬೇಕಾದರು ಮಾಡಲು ತಯಾರಾಗಿರುತ್ತಾರೆ. ತಮ್ಮ ಕೈಯಲ್ಲಿ ಆಗದಿದ್ದರೂ ಒಂದು ಪ್ರಯತ್ನವನ್ನಾದರೂ ಮಾಡೇ ಮಾಡುತ್ತಾರೆ. ಏಕೆಂದರೆ, ಪ್ರೀತಿಗೆ ಆ ಶಕ್ತಿ ಇದೆ. ಇದಕ್ಕೆ ಪೂರಕವಾದ ಒಂದು ಘಟನೆ ಇದೀಗ ಮಧ್ಯಪ್ರದೇಶದಲ್ಲಿ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ತನ್ನ ಪ್ರೀತಿಯ ಪತ್ನಿಗೋಸ್ಕರ ಮಧ್ಯಪ್ರದೇಶದ ಭಿಕ್ಷುಕನೊಬ್ಬ 90 ಸಾವಿರ ರೂಪಾಯಿ ಮೌಲ್ಯದ ಮೊಪೆಡ್​ ಖರೀದಿಸಿರುವುದು ಇದೀಗ ಸುದ್ದಿಯಾಗಿದೆ. ಅದರಲ್ಲೂ ಮೊಪೆಡ್​ ಖರೀದಿ ಹಿಂದಿರುವ ಉದ್ದೇಶ ಮಾತ್ರ ಮನಮುಟ್ಟುವಂತಿದೆ. ಈ ಮೊದಲು ಭಿಕ್ಷುಕ ದಂಪತಿ ತ್ರಿಚಕ್ರದ ಬೈಸಿಕಲ್ ಮೇಲೆ ಪ್ರಯಾಣಿಸುತ್ತಿದ್ದರು. ಪತ್ನಿ ಬೆನ್ನು ನೋಯುತ್ತದೆ ಎಂದು ಆಗಾಗ ಹೇಳುತ್ತಿದ್ದಳು. ಹೀಗಾಗಿ ಆಕೆಯ ನೋವಿಗೆ ಪರಿಹಾರ ನೀಡಲು ಭಿಕ್ಷುಕ ಮೊಪೆಡ್​ ಖರೀದಿಸಿದ್ದಾನೆ.
ಅಂದಹಾಗೆ ಭಿಕ್ಷುಕನ ಹೆಸರು ಸಂತೋಷ್​ ಕುಮಾರ್​ ಸಾಹು. ಈತ ಮಧ್ಯಪ್ರದೇಶದ ಚಿಂದ್ವಾರ ಮೂಲದವನು. ತನ್ನ ಪತ್ನಿ ಮುನ್ನಿಗಾಗಿ ಮೊಪೆಡ್​ ಖರೀದಿಸಿದ್ದಾನೆ. ಸುಮಾರು 4 ವರ್ಷಗಳಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಅಷ್ಟೂ ಹಣವನ್ನು ನಗದು ರೂಪದಲ್ಲಿ ನೀಡಿ ಮೊಪೆಡ್​ ಖರೀದಿ ಮಾಡಿದ್ದಾನೆ.
ಈ ಬಗ್ಗೆ ಮಾತನಾಡಿರುವ ಸಾಹು, ನಾವು ತ್ರಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದೆವು. ನನ್ನ ಪತ್ನಿಗೆ ಆರಾಮದಾಯಕವಾಗಿರಲೆಂದು 90 ಸಾವಿರ ಕೊಟ್ಟ ಮೊಪೆಡ್​ ಖರೀದಿ ಮಾಡಿದ್ದೇನೆ. ಇದೀಗ ನಾವಿಬ್ಬರು ಆರಾಮಾಗಿ ಸಿಯೋನಿ, ಭೋಪಾಲ್​ ಮತ್ತು ಇಂದೋರ್​ನಲ್ಲಿ ಓಡಾಡಬಹುದು ಎಂದಿದ್ದಾರೆ.
ಸಾಹು ಕಾಲಿನಲ್ಲಿ ಸಮಸ್ಯೆ ಇರುವುದರಿಂದ ತಿರುಗಾಡಲು ಆಗುವುದಿಲ್ಲ. ಹೀಗಾಗಿ ತ್ರಿಚಕ್ರ ವಾಹನದಲ್ಲಿ ಕೂರಲು ತನ್ನ ಹೆಂಡತಿಯ ಮೇಲೆ ಆತ ಅವಲಂಬಿತನಾಗಿದ್ದಾನೆ. ಸಾಹು ಮೊಪೆಡ್​ ಓಡಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಆತನ ಉದ್ದೇಶ ತಿಳಿದಿರುವ ನೆಟ್ಟಿಗರು ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಆತ ತನ್ನ ಪತ್ನಿ ಮೇಲಿಟ್ಟಿರುವ ಪ್ರೀತಿಗೆ ಎಲ್ಲರೂ ಮನಸೋತಿದ್ದಾರೆ.(ಏಜೆನ್ಸೀಸ್​)
#WATCHA beggar, Santosh Kumar Sahu buys a moped motorcycle worth Rs 90,000 for his wife Munni in Chhindwara, MP
Earlier, we had a tricycle. After my wife complained of backache, I got this vehicle for Rs 90,000. We can now go to Seoni, Itarsi, Bhopal, Indore, he says.pic.twitter.com/a72vKheSAB
— ANI MP/CG/Rajasthan (@ANI_MP_CG_RJ)May 24, 2022

ಇನ್ಮುಂದೆ ಸಂಸಾರ ಉಳಿಸಿಕೊಳ್ಳಲು ಆಗುವುದಿಲ್ಲ: ಗಂಡನ ಕರಾಳ ಮುಖ ಬಿಚ್ಚಿಟ್ಟ ನಟಿ ಚೈತ್ರಾ ಹಳ್ಳಿಕೇರಿ

ಅನೇಕ ಕುಟುಂಬಗಳ ಉಳಿತಾಯ ಹಣಕ್ಕೆ ಕನ್ನ: IPL ಬೆಟ್ಟಿಂಗ್​ ಆಡಿ 1 ಕೋಟಿ ರೂ. ಕಳ್ಕೊಂಡ ಪೋಸ್ಟ್​ ಮಾಸ್ಟರ್​!

ಗೌರಿಬಿದನೂರಿನ ಕಲ್ಯಾಣ ಮಂಟಪದಿಂದ ರಾತ್ರೋರಾತ್ರಿ ಪ್ರಿಯಕರನ ಜತೆ ವಧು ಎಸ್ಕೇಪ್! ಕಂಗಾಲಾದ ಕುಟುಂಬ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − ten =
Remember me
