ಭೋಪಾಲ್​:ಕ್ಯಾಂಡಿಗಳನ್ನು ತಿನ್ನಲು ನನ್ನಮ್ಮ ಬಿಡುತ್ತಿಲ್ಲ ಎಂದು ಮೂರು ವರ್ಷದ ಮಗು, ಪೊಲೀಸ್​ ಠಾಣೆಗೆ ತೆರಳಿ ಅಮ್ಮನ ವಿರುದ್ಧವೇ ದೂರು ದಾಖಲಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಈ ಘಟನೆ ಮಧ್ಯಪ್ರದೇಶದ ಬುರ್ಹಾನ್​ಪುರ್​ನಲ್ಲಿ ನಡೆದಿದೆ. ಮೂರು ವರ್ಷದ ಮಗುವಿನ ಹೆಸರು ಹಮ್ಜಾ. ಅಮ್ಮ ಕ್ಯಾಂಡಿಗಳನ್ನು ಕದ್ದು, ಕಪಾಳಕ್ಕೆ ಬಾರಿಸಿದ್ದಕ್ಕೆ ಕುಪಿತಗೊಂಡ ಮಗು ಅಮ್ಮನ ವಿರುದ್ಧವೇ ದೂರು ದಾಖಲಿಸಿದೆ. ಠಾಣೆಗೆ ಕರೆದೊಯ್ಯುವಂತೆ ಅಪ್ಪನ ಬಳಿ ಕೇಳಿ, ಠಾಣೆಗೆ ಕರೆದದೊಯ್ಯುತ್ತಿದ್ದಂತೆ ಸಬ್​ ಇನ್ಸ್​ಪೆಕ್ಟರ್​ ಬಳಿ ಮಗು ತಾಯಿಯ ವಿರುದ್ಧ ದೂರು ನೀಡಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ 3 ವರ್ಷದ ಮಗು ಬುರ್ಹಾನ್​ಪುರ್​ನ ಡೆಡ್ತಲೈದಲ್ಲಿರುವ ಪೊಲೀಸ್​ ಠಾಣೆಗೆ ತೆರಳಿ, ಸಬ್​ ಇನ್ಸ್​ಪೆಕ್ಟರ್​ ಪ್ರಿಯಾಂಕಾ ನಾಯಕ್ ಅವರಿಗೆ ತನ್ನ ನೋವಿನ ಕತೆ ಹೇಳಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನನ್ನ ಅಮ್ಮ ನನ್ನ ಕ್ಯಾಂಡಿಗಳನ್ನು ಕದ್ದಿದ್ದಾರೆ. ಆಕೆಯನ್ನು ಜೈಲಿಗೆ ಹಾಕಿ ಎಂದು ಮಗು, ಸಬ್​ ಇನ್ಸ್​ಪೆಕ್ಟರ್​ಗೆ ಹೇಳಿದೆ. ಮಗುವಿನ ಮುಗ್ಧತೆಯನ್ನು ನೋಡಿ, ನಗೆಗಡಲಲ್ಲಿ ತೇಲಿದ ಎಸ್​ಐ ಪ್ರಿಯಾಂಕಾ, ತಮ್ಮ ನಗುವನ್ನು ನಿಯಂತ್ರಿಸಲು ಪರದಾಡುತ್ತಾ, ಮಗುವಿಗೆ ಕೆಲವು ಪ್ರಶ್ನೆಗಳನ್ನು ಕೇಳಿ, ದೂರು ಬರೆದುಕೊಳ್ಳುತ್ತಿರುವಂತೆ ನಟಿಸುತ್ತಾರೆ. ಬಳಿಕ ಮಗು ಪೇಪರ್​ಗೆ ಸಹಿ ಮಾಡುತ್ತದೆ. ಆದಷ್ಟು ಬೇಗ ನಿಮ್ಮ ಅಮ್ಮನನ್ನು ಬಂಧಿಸುವುದಾಗಿ ಹೇಳಿ ಭರವಸೆ ನೀಡಿ ಕಳುಹಿಸುವುದು ವಿಡಿಯೋದಲ್ಲಿದೆ.
ಮಗುವಿನ ತಂದೆ ಈ ಬಗ್ಗೆ ಮಾತನಾಡಿದ್ದು, ಹಮ್ಜಾ ಕ್ಯಾಂಡಿಗಳನ್ನು ಕೇಳಿದಾಗ ತಾಯಿ ಮೃದುವಾಗಿ ಕೆನ್ನೆಗೆ ಬಾರಿಸಿದಳು. ಇದರ ಬೆನ್ನಲ್ಲೇ ತನ್ನ ಪೊಲೀಸ್​ ಠಾಣೆಗೆ ಕರೆದೊಯ್ಯುವಂತೆ ಹಮ್ಜಾ ಹೇಳಿದನು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ವಿಡಿಯೋ ತುಣುಕು ವೈರಲ್ ಆದ ನಂತರ, ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಮಗುವಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದು, ದೀಪಾವಳಿಯಂದು ಮಗುವಿಗೆ ಚಾಕೊಲೇಟ್ ಮತ್ತು ಸೈಕಲ್ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ.(ಏಜೆನ್ಸೀಸ್​)
ಮಹಿಳೆಯರ ಶವದ ಮಾಂಸವನ್ನು ಬೇಯಿಸಿ ತಿಂದಿದ್ದೀರಾ? ಆರೋಪಿ ಕೊಟ್ಟ ಪ್ರತಿಕ್ರಿಯೆ ನೋಡಿ ದಂಗಾದ ಅಧಿಕಾರಿಗಳು

ಮುಖ ಟ್ಯಾನ್​ ಆಗುವುದನ್ನು ತಪ್ಪಿಸಲು ಯಾವ ಸನ್​ಸ್ಕ್ರೀನ್ ಬಳಸ್ತೀರಾ? ರಾಹುಲ್ ಗಾಂಧಿ ಕೊಟ್ಟ ಉತ್ತರವಿದು…

60 ವರ್ಷದ ಉದ್ಯಮಿ ಜತೆ ವಿವಾಹೇತರ ಸಂಬಂಧ! ನಟಿ ಕಸ್ತೂರಿ ಕೊಟ್ಟ ಪ್ರತಿಕ್ರಿಯೆ ಹೀಗಿದೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × two =
Remember me
