ಭೋಪಾಲ್​:ಹಾವುಗಳು ಮಳೆಗಾಲ ಬಂತೆಂದರೆ ಸಾಕು ಬೆಚ್ಚನೆಯ ಪ್ರದೇಶವನ್ನು ಹುಡುಕಿಕೊಂಡು ಬರುತ್ತವೆ. ಈ ವೇಳೆ ಶೂಗಳಲ್ಲಿ, ಬೈಕ್​ಗಳಲ್ಲಿ ಅಷ್ಟೇ ಯಾಕೆ ಮನೆಗಳಲ್ಲಿನ ಇಕ್ಕಾಟದ ಪ್ರದೇಶಗಳಲ್ಲಿ ಹಾವುಗಳು ಅಡಗಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ತಾಜಾ ಘಟನೆಯಲ್ಲಿ ಹಾವೊಂದು ವಿದ್ಯಾರ್ಥಿನಿಯೊಬ್ಬಳ ಸ್ಕೂಲ್​ ಬ್ಯಾಗ್​ ಒಳಗೆ ನುಸುಳಿಬಿಟ್ಟಿದೆ.
ಹೌದು, ಈ ಘಟನೆ ಸೆಪ್ಟೆಂಬರ್ 22 ರಂದು ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯ ಬಡೋನಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ನೆಟ್ಟಿಗರ ಗಮನವನ್ನು ತನ್ನೆಡೆಗೆ ಸೆಳೆದಿದೆ.
10ನೇ ತರಗತಿಯ ವಿದ್ಯಾರ್ಥಿನಿ ಉಮಾ ರಜಾಕ್, ಎಂದಿನಂತೆಯೇ ಸೆ.22ರಂದು ಮನೆಯಿಂದ ತನ್ನ ಬ್ಯಾಗ್​ ನೇತು ಹಾಕಿಕೊಂಡು ಶಾಲೆಗೆ ಬಂದಿದ್ದಾಳೆ. ಈ ವೇಳೆ ಬ್ಯಾಗ್​ನಿಂದ​ ಪಠ್ಯಪುಸ್ತಕವನ್ನು ತೆಗೆದುಕೊಳ್ಳಲು ಆಕೆ ಮುಂದಾದಾಗ, ಬ್ಯಾಗ್​ ಮೇಲಿನಿಂದ ಮೃದುವಾದ ವಸ್ತುವೊಂದು ಇರುವುದು ಅವಳ ಅನುಭವಕ್ಕೆ ಬರುತ್ತದೆ. ಏನಿದು ಮೃದುವಾಗಿ ಸಿಗುತ್ತಿದೆಯಲ್ಲ ಎಂದು ವಿದ್ಯಾರ್ಥಿನಿ ಗೊಂದಲದ ಗಾಬರಿಗೊಳ್ಳುತ್ತಾಳೆ. ಅಷ್ಟರಲ್ಲಿ ಆಕೆಗೆ ಹಾವು ಸೇರಿದೆ ಎಂಬುದು ಕೊಂಚ ಖಚಿತವಾಗುತ್ತದೆ.
ಇದಾದ ಬಳಿಕ ವಿದ್ಯಾರ್ಥಿನಿ ತನ್ನ ಶಿಕ್ಷಕರಿಗೆ ಈ ವಿಚಾರವನ್ನು ತಿಳಿಸುತ್ತಾಳೆ. ಆಕೆಯ ಬ್ಯಾಗ್​ ಅನ್ನು ತೆಗೆದುಕೊಳ್ಳುವ ಶಿಕ್ಷಕ, ತರಗತಿಯಿಂದ ಹೊರಗೆ ತಂದು ಜಿಪ್​ ತೆಗೆದು, ಒಳಗಿದ್ದ ಪುಸ್ತಕವನ್ನೆಲ್ಲ ಹೊರಗೆ ಸುರಿಯುತ್ತಾರೆ. ಆದರೆ ಹಾವು ಮಾತ್ರ ಹೊರಬರುವುದಿಲ್ಲ. ಮತ್ತೆ ಖಾಲಿ ಬ್ಯಾಗ್​ ಅನ್ನು ಜೋರಾಗಿ ಅಲ್ಲಾಡಿಸುತ್ತಾರೆ. ಈ ವೇಳೆ ಕಪ್ಪು ಬಣ್ಣದ ನಾಗರಹಾವೊಂದು ಬ್ಯಾಗ್​ನಿಂದ ಹೊರಗೆ ಬೀಳುತ್ತದೆ. ಈ ವೇಳೆ ಹಾವು ತನ್ನ ಹೆಡೆ ಬಿಚ್ಚಿರುತ್ತದೆ. ಬ್ಯಾಗ್​ನಿಂದ ಕೆಳಗೆ ಬಿದ್ದ ತಕ್ಷಣ ಹಾವು ಅಲ್ಲಿಂದ ಪರಾರಿಯಾಗುತ್ತದೆ. ಅದನ್ನು ನೋಡಿ ಅಲ್ಲಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಾಬರಿಯಾಗುತ್ತಾರೆ.
कक्षा 10 की छात्रा कु. उमा रजक के बैग से, घर से स्कूल आकर जैसे ही बैग खोला तो छात्रा को कुछ आभाष हुआ तो शिक्षक से शिकायत की, कि बस्ते में अंदर कुछ है, छात्रा के बैग को स्कूल के बाहर ले जाकर खोला तो बैग के अंदर से एक नागिन बाहर निकली, यह घटना दतिया जिले के बड़ोनी स्कूल की है।pic.twitter.com/HWKB3nktza
— Karan Vashistha BJP 🇮🇳 (@Karan4BJP)September 22, 2022

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಶಿಕ್ಷಣಾಧಿಕಾರಿ ಯು.ಎನ್​. ಮಿಶ್ರಾ, ವಿದ್ಯಾರ್ಥಿನಿಯ ಮನೆಯಲ್ಲೇ ಹಾವು ಸ್ಕೂಲ್​ ಬ್ಯಾಗ್​ ಒಳಗೆ ನುಸುಳಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೇವೆ. ಶಾಲಾ ಬ್ಯಾಗ್​ಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡುವಂತೆ ಸೂಚಿಸಿದ್ದೇವೆ ಎಂದು ಹೇಳಿದರು.(ಏಜೆನ್ಸೀಸ್​)
ಆಲಿಯಾ​ ಜತೆ ಮಲಗುವುದೆಂದರೆ ಅದೊಂದು ಹೋರಾಟ! ರಣಬೀರ್​​ ಹೇಳಿಕೆಗೆ ಆಲಿಯಾ ಉತ್ತರ ಹೀಗಿತ್ತು….

ಒಂದೇ ಒಂದು ಮೆಸೇಜ್​ನಿಂದ ಹಣ, ಗೌರವ ಎಲ್ಲವನ್ನು ಕಳ್ಕೊಂಡು ಫೇಸ್​ಬುಕ್​ ಲೈವ್​ನಲ್ಲಿ ಕಣ್ಣೀರಿಟ್ಟ ನಟಿ!

ಒಬ್ಬಳಿಗಾಗಿ ಇಬ್ಬರ ಗಲಾಟೆ: ಪ್ರಿಯತಮೆ-ನಗರಸಭೆ ಸದಸ್ಯನ ಕಿರುಕುಳ… ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 9 =
Remember me
