ಭೋಪಾಲ್​:ಏಳು ವರ್ಷದ ಬಾಲಕನ ಮೇಲೆ ದಾಳಿ ಮಾಡಿ, ಆತನನ್ನು ಜೀವಂತವಾಗಿಯೇ ನುಂಗಿದೆ ಎಂದು ಭಾವಿಸಿದ ಗ್ರಾಮಸ್ಥರು, ದೈತ್ಯ ಮೊಸಳೆಯನ್ನು ಸೆರೆಹಿಡಿದು ಅದರು ಉದರ ಸೀಳಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ಶಿಯೋಪುರ್​ ಜಿಲ್ಲೆಯ ರಘುನಾಥ​ಪುರದಲ್ಲಿ ನಡೆದಿದೆ.
ಚಂಬಲ್​ ನದಿಯಲ್ಲಿ ಈಜುತ್ತಿದ್ದ ಅಂತರ್​ ಸಿಂಗ್​ (7) ಹೆಸರಿನ ಬಾಲಕನನ್ನು ಮೊಸಳೆ ದೂರ ಎಳೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನನ್ನು ಮೊಸಳೆ ಜೀವಂತವಾಗಿ ನುಂಗಿದೆ ಎಂದು ಭಾವಿಸಿ ಅದನ್ನು ಸೆರೆಹಿಡಿದು ಉದರ ಸೀಳಲು ಗ್ರಾಮಸ್ಥರು ಮುಂದಾಗಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೇ ಹಿರಿಯ ಪೊಲೀಸ್​ ಅಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಗ್ರಾಮಸ್ಥರನ್ನು ತಡೆದರು. ಬಾಲಕನಿಗಾಗಿ ಚಂಬಲ್​ ನದಿಯಲ್ಲಿ ಹುಡುಕಾಟ ನಡೆಸುವುದಾಗಿ ಗ್ರಾಮಸ್ಥರಿಗೆ ಪೊಲೀಸರು ಭರವಸೆ ನೀಡಿ, ಅವರ ಮನವೊಲಿಸಿ ಮೊಸಳೆಯನ್ನು ಕಾಪಾಡಿದರು.
ಇದಕ್ಕೂ ಮುನ್ನ ಅಂದರೆ, ಬಾಲಕ ನೀರಿನಲ್ಲಿ ಕಾಣೆಯಾದ ಬೆನ್ನಲ್ಲೇ ಗ್ರಾಮಸ್ಥರು ಬಲೆ ಹಾಕಿ ಮೊಸಳೆಯನ್ನು ಸೆರೆಹಿಡಿದಿದರು. ಬಳಿಕ ಬಾಲಕನ ಕುಟುಂಬಕ್ಕೂ ಈ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಮೊಸಳೆಯ ದವಡೆಗಳ ನಡುವೆ ಬಿದಿರಿನ ದೊಣ್ಣೆಯನ್ನು ಅಡ್ಡಲಾಗಿ ಇಟ್ಟಿದ್ದರು. ಏಕೆಂದರೆ, ಬಾಲಕನನ್ನು ಜೀವಂತವಾಗಿ ನುಂಗಿರುವುದರಿಂದ ಆತನ ದೇಹವನ್ನು ಜಗಿಯದಂತೆ ತಡೆಯಲು ದೊಣ್ಣೆಯಿಟ್ಟಿದ್ದಾಗಿ ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಮೊಸಳೆಯನ್ನು ನದಿಯ ದಡಕ್ಕೆ ಎಳೆದು ತಂದಿದ್ದಾಗ ತನ್ನ ಮಗ ಮೊಸಳೆಯ ಹೊಟ್ಟೆಯ ಒಳಗೆ ಇನ್ನೂ ಜೀವಂತವಾಗಿ ಇರಬಹುದು ಎಂದು ನಂಬಿದ್ದ ಪಾಲಕರು ಅಂತರ್​ ಸಿಂಗ್​ ಕೂಡಾಡಿದರು. ಅಲ್ಲದೆ, ಮೊಸಳೆಯ ಹೊಟ್ಟೆಯನ್ನು ಬಗೆದು ನನ್ನ ಮಗನನ್ನು ಬದುಕಿಸಿ ಎಂದು ಅಧಿಕಾರಿಗಳ ಮುಂದೆ ಪಾಲಕರು ಗೋಳಿಟ್ಟರು. ಉದರ ಸೀಳುವವರೆಗೂ ನಾವು ನಿಮ್ಮನ್ನು ಬಿಡುವುದಿಲ್ಲ ಎಂದು ನೂರಾರು ಗ್ರಾಮಸ್ಥರು ಪ್ರತಿಭಟಿಸಿದರು.
ಇದೇ ಸಂದರ್ಭದಲ್ಲಿ ಎಸ್​ಡಿಆರ್​ಎಫ್​ ತಂಡ ಬಾಲಕನ ಮೃತದೇಹಕ್ಕಾಗಿ ಚಂಬಲ್​ ನದಿಯನ್ನು ಹುಡುಕಾಡುತ್ತಿತ್ತು. ನಿನ್ನೆ ಸಂಜೆಯವರೆಗೂ ಶೋಧ ಕಾರ್ಯಾಚರಣೆ ಮುಂದುವರಿಸಿತ್ತು. ಆದರೆ, ಬಾಲಕನ ಮೃತದೇಹ ಮಾತ್ರ ಪತ್ತೆಯಾಗಲಿಲ್ಲ.
ಬಾಲಕ ನದಿಯ ಆಳಕ್ಕೆ ಹೋಗಿ ನಾಪತ್ತೆಯಾಗಿಬೇಕು ಎಂದು ಪೊಲೀಸರು ಹೇಳಿದ್ದಾರೆ. ಮಂಗಳವಾರದಿಂದ ಹುಡುಕಾಟ ಪುನರಾರಂಭವಾಗಲಿದೆ. ಈ ಮೊಸಳೆ ನರಭಕ್ಷಕವಾಗಿ ಮಾರ್ಪಟ್ಟಿದ್ದು, ದೂರದ ಯಾವುದಾದರೂ ಸ್ಥಳದಲ್ಲಿ ಬಿಡಬೇಕು ಎಂದು ಗ್ರಾಮಸ್ಥರು ಒತ್ತಾಯಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಹೇಳಿದರು.
ಮೊಸಳೆಯು ಬಾಲಕನನ್ನು ಜೀವಂತವಾಗಿ ನುಂಗುತ್ತಿರುವುದನ್ನು ನೋಡಿರುವುದಾಗಿ ಗ್ರಾಮದ ಕೆಲವರು ಹೇಳಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಅದನ್ನು ನಿರಾಕರಿಸಿದ್ದು, ಒಂದು ವೇಳೆ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿದ್ದರೆ, ಅದು ಆತನನ್ನು ನುಂಗುವುದಿಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಲು ಅಧಿಕಾರಿಗಳು ಪ್ರಯತ್ನಿಸಿದರು. ಅಧಿಕಾರಿಗಳ ಪ್ರಕಾರ, ಚಂಬಲ್​ ನದಿಯಲ್ಲಿ ನೂರಾರು ಮೊಸಳೆಗಳಿವೆ ಮತ್ತು ಮಾನವರ ಮೇಲೆ ದಾಳಿ ಮಾಡಿದ ಹಲವಾರು ನಿದರ್ಶನಗಳಿವೆ.(ಏಜೆನ್ಸೀಸ್​)
ದೇಶದ ಅತಿ ಕಿರಿಯ ಮೇಯರ್ ವರಿಸಲಿದ್ದಾರೆ ರಾಜ್ಯದ ಅತಿ ಕಿರಿಯ MLA! ಸೆ.4ಕ್ಕೆ ಅಪರೂಪದ ಮದ್ವೆಗೆ ಕೇರಳ ಸಾಕ್ಷಿ

ತೆಲಂಗಾಣದಲ್ಲಿ ಮೀನಿನ ಮಳೆ ಕಂಡು ಹೌಹಾರಿದ ಜನರು! ಈ ಮೀನುಗಳು ತಿನ್ನಲು ಯೋಗ್ಯವೇ? ಇಲ್ಲಿದೆ ಉತ್ತರ…

ಕಳಂಕಿತರ ನೇಮಕ ಬೇಡ: ತನಿಖಾ ಸಂಸ್ಥೆಗಳಿಗೆ ನಿಯುಕ್ತಿ, ಸರ್ವೀಸ್ ರೆಕಾರ್ಡ್ ಪರಿಗಣಿಸಲು ಸೂಚನೆ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + six =
Remember me
