ಭೋಪಾಲ್​:ಕೂದಲು ಹಿಡಿದೆಳೆದು ಮರಕ್ಕೆ ಕಟ್ಟಿ 19 ವರ್ಷದ ಯುವತಿಯೊಬ್ಬಳನ್ನು ಆಕೆಯ ತಂದೆ ಮತ್ತು ಸೋದರಸಂಬಂಧಿಗಳು ಸಾರ್ವಜನಿಕರ ಎದುರಲ್ಲೇ ಥಳಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮನಸ್ಸು ಕದಡುವಂತಿದೆ.
ಸಂತ್ರಸ್ತ ಯುವತಿ ಮೂರು ತಿಂಗಳ ಹಿಂದಷ್ಟೇ ಮದುವೆ ಆಗಿದ್ದಳು. ಅತ್ತೆ ಮನೆಯನ್ನು ಬಿಟ್ಟು ಮನೆಗೆ ಬಂದಿದ್ದಕ್ಕೆ ಕೋಪಗೊಂಡಿದ್ದ ಕುಟುಂಬಸ್ಥರು ಆಕೆಯನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಳುವುದನ್ನು ನಿಲ್ಲಿಸು. ಮತ್ತೆ ಎಂದಾದರೂ ಹಿಂತಿರುಗುತ್ತೀಯಾ? ಎಂದು ವ್ಯಕ್ತಿಯೊಬ್ಬ ಜೋರು ಧ್ವನಿಯಲ್ಲಿ ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮತ್ತೊಬ್ಬ ವ್ಯಕ್ತಿ ಯುವತಿಯನ್ನು ನಿರ್ದಯವಾಗಿ ಹೊಡೆಯುವುದನ್ನು ಕಾಣಬಹುದಾಗಿದೆ.
ಮತ್ತೊಂದು ವಿಡಿಯೋದಲ್ಲಿ ಯುವತಿಯನ್ನು ಮರಕ್ಕೆ ಕಟ್ಟಿ ಆಕೆಯ ಸ್ಥಿತಿಯನ್ನು ಅನೇಕರು ನಗುತ್ತಿರುವುದನ್ನು ಕಾಣಬಹುದಾಗಿದೆ. ತಮ್ಮ ಎದುರಲ್ಲೇ ಅನ್ಯಾಯ ನಡೆಯುತ್ತಿದ್ದರೂ ಅನೇಕರು ಸುಮ್ಮನೇ ನಿಂತಿದ್ದರು. ಯಾರೊಬ್ಬರು ಆಕೆಯ ನೆರವಿಗೆ ಧಾವಿಸಲಿಲ್ಲ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವತಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 400 ಕಿಲೋಮೀಟರ್ ದೂರದಲ್ಲಿರುವ ಅಲಿರಾಜ್‌ಪುರದ ತನ್ನ ಮಾವನ ಮನೆಗೆ ಹೋಗಿದ್ದಳು. ಈ ವೇಳೆ ಆಕೆಯನ್ನು ಅಲ್ಲಿಂದ ಹೊರಗೆ ಎಳೆದು ಜೂನ್ 28 ರಂದು ಚಿತ್ರಹಿಂಸೆ ನೀಡಲಾಗಿದೆ.
ಘಟನೆಯ ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಬೆಳಕಿಗೆ ಬಂದ ನಂತರ ಪೊಲೀಸರು ಯುವತಿಯ ಹೇಳಿಕೆಯನ್ನು ದಾಖಲಿಸಿ ಆಕೆಯ ತಂದೆ ಮತ್ತು ಸೋದರಸಂಬಂಧಿಗಳನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)
ಮಗನ ಮೇಲೆಯೇ ತಾಯಿಯ ಲೈಂಗಿಕ ದೌರ್ಜನ್ಯ: ಪೊಲೀಸರು ಇಂತಹ ಕೀಳು ಮಟ್ಟಕ್ಕೆ ಇಳಿದರಾ?

ಕೆಆರ್​ಎಸ್​ ಡ್ಯಾಂನಲ್ಲಿ ಬಿರುಕು: ಕಾವೇರಿ ನೀರಾವರಿ ನಿಗಮದ ವರದಿಯಿಂದ ಇಕ್ಕಟಿಗೆ ಸಿಲುಕಿದ ಸುಮಲತಾ!

ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ: ಪುಲ್ವಾಮದಲ್ಲಿ ವಿಜಯಪುರ ಮೂಲದ ಯೋಧ ಹುತಾತ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
