ಮುಂಬೈ:ದೇಶದಲ್ಲಿ ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ಹೆಚ್ಚಾಗಿರುವ ನಡುವೆಯೇ ಮೂರನೇ ಅಲೆಯ ಭೀತಿ ಕಾಡುತ್ತಿದ್ದು, ಈ ಬಗ್ಗೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ ಗುರುವಾರ ಶಾಕಿಂಗ್​ ಹೇಳಿಕೆಯನ್ನು ನೀಡಿದ್ದಾರೆ.
ಎರಡನೇ ಅಲೆಯ ಪರಿಣಾಮ ಹೆಚ್ಚಾಗಿ ಮಹಾರಾಷ್ಟ್ರ ಮೇಲೆ ಬೀರಿದ್ದು, ಇದರ ನಡುವೆ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ ಜುಲೈ ಅಥವಾ ಆಗಸ್ಟ್​ನಲ್ಲಿ ಮಹಾರಾಷ್ಟ್ರವು ಕರೊನಾ ಮೂರನೇ ಅಲೆಗೆ ಸಾಕ್ಷಿಯಾಗಲಿದೆ ಎಂದು ತಿಳಿಸಿದ್ದಾರೆ.
ಸದ್ಯ ಮಹಾರಾಷ್ಟ್ರವು ಕರೊನಾ ಎರಡನೇ ಅಲೆಯ ಹೊಡೆತದಿಂದ ದಿಕ್ಕೆಟ್ಟಿದ್ದು, ಆಕ್ಸಿಜನ್​ ಹಾಹಾಕಾರ ಉದ್ಭವವಾಗಿದೆ. ಮೇ ಅಂತ್ಯದ ವೇಳೆಗೆ ರಾಜ್ಯವು ಕರೊನಾ ಪ್ರಕರಣಗಳು ಕಡಿಮೆ ಆಗಲಿದೆ. ಆದರೆ, ಜುಲೈ ಅಥವಾ ಆಗಸ್ಟ್‌ನಲ್ಲಿ ಇದು ಮೂರನೇ ಅಲೆ ಉಂಟಾದರೆ, ರಾಜ್ಯ ಆಡಳಿತಕ್ಕೆ ಭಾರಿ ಸವಾಲುಗಳು ಎದುರಾಗಲಿದೆ ಎಂದು ತೋಪೆ ಹೇಳಿದರು.
ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ 66,159 ಹೊಸ ಪ್ರಕರಣಗಳು ವರದಿಯಾಗಿದ್ದು, 771 ಮಂದಿ ಮೃತಪಟ್ಟಿದ್ದಾರೆ. ಎರಡನೇ ಅಲೆಯಿಂದ ಎಚ್ಚೆತ್ತುಕೊಂಡು ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಕೆಲವ ಶೀಘ್ರವಾಗಿ ನಡೆಯಬೇಕಿದೆ.
ಮಹಾರಾಷ್ಟ್ರದಲ್ಲಿ ಈವರೆಗೂ 45,39,553 ಪ್ರಕರಣಗಳು ವರದಿ ಆಗಿದ್ದು, 67,985 ಮಂದಿ ಮೃತಪಟ್ಟಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಮೇ 15ರವರೆಗೆ ಲಾಕ್​ಡೌನ್​ ಜಾರಿಯಲ್ಲಿದೆ.(ಏಜೆನ್ಸೀಸ್​)
ಇಸ್ರೇಲ್​ನಲ್ಲಿ ಕಾಲ್ತುಳಿತಕ್ಕೆ 28 ಮಂದಿ ದುರಂತ ಸಾವು: 50ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರ
ಹೊಸಬರ ಜತೆ ನಿರ್ದೇಶಕ ಶಶಾಂಕ್‌ ಸಿನಿಮಾ..
ವಿಶ್ವದ ದೀರ್ಘಕಾಲಿಕ ಕರೊನಾ ರೋಗಿ ಈತ: 1 ವರ್ಷ ಕೋವಿಡ್​ನಿಂದ ಅನುಭವಿಸಿದ ನರಕಯಾತನೆ ಭಯಾನಕ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eight + 4 =
Remember me
