ಕೋಲ್ಕತ:ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೋಮಿಯೋ ವಿರೋಧಿ ಪಡೆಯನ್ನು ತರುತ್ತೇವೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೇಳಿಕೆಗೆ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ತಿರುಗೇಟು ನೀಡಿದ್ದಾರೆ.
ಟ್ವೀಟ್​ ಮೂಲಕ ಟೀಕಾ ಪ್ರಹಾರ ನಡೆಸಿರುವ ಮಹುವಾ ಮೊಯಿತ್ರಾ, ಅಜಯ್​ ಬಿಸ್ತ್​ ಅಲಿಯಾಸ್​ ಸಿಎಂ ಯೋಗಿ ಅವರು ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರೋಮಿಯೋ ವಿರೋಧಿ ಪಡೆ ತರುವುದಾಗಿ ಹೇಳಿದ್ದಾರೆ. ಗುಡ್ಡೂಜೀ ನಿಮಗಿಂತಲೂ ಭಿನ್ನವಾಗಿ ನಾವು ಪಶ್ಚಿಮ ಬಂಗಾಳದವರು. ಹೃದಯದಿಂದ ನಾವು ಪ್ರೀತಿಯುಳ್ಳವರು. ನಾವು ಸಂಗೀತ ಆರಾಧಕರು, ನಮ್ಮ ಕವಿತೆ ಹಾಗೂ ನಮ್ಮ ರೋಮಿಯೋಗಳನ್ನು ಸಹ ನಾವು ಇಷ್ಟಪಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
Latest from Ajay Bisht aka YogiCM:“Anti-Romeo squads in Bengal if BJP is voted in”
Gudduji- Unlike your ilk, we Bengalis are lovers at heart!
We like our music, our poetry, our mishti & yes, our Romeos too!
— Mahua Moitra (@MahuaMoitra)April 8, 2021

ಗುರುವಾರ ಹೂಗ್ಲಿ ಜಿಲ್ಲೆಯ ಕೃಷ್ಣರಾಂಪುರ್​ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ್ದ ಸಿಎಂ ಯೋಗಿ, ಬಿಜೆಪಿ ಅಧಿಕಾರಕ್ಕೆ ಬಂದರೆ, ನಮ್ಮ ಮಕ್ಕಳ ಮತ್ತು ಸಹೋದರಿಯರ ಸುರಕ್ಷತಾ ದೃಷ್ಟಿಯಿಂದಾಗಿ ಉತ್ತರ ಪ್ರದೇಶದ ಮಾದರಿಯಲ್ಲಿಯೇ ರೋಮಿಯೋ ವಿರೋಧಿ ಪಡೆಯನ್ನು ಬಂಗಾಳದಲ್ಲೂ ತರುತ್ತೇವೆ. ಈ ಮೂಲಕ ಟಿಎಂಸಿ ರೋಡ್​ ರೋಮಿಯೋಗಳನ್ನು ಕಂಬಿ ಹಿಂದೆ ಹಾಕುತ್ತೇವೆ ಎಂದು ಹೇಳಿದ್ದರು.
ಉತ್ತರ ಪ್ರದೇಶದಲ್ಲಿ 2017ರಲ್ಲಿ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮಹಿಳೆಯರ ಸುರಕ್ಷತೆಗಾಗಿ ರೋಮಿಯೋ ವಿರೋಧಿ ಪಡೆಯನ್ನು ಜಾರಿಗೆ ತರಲಾಗಿದೆ.(ಏಜೆನ್ಸೀಸ್​)
ರಾಜ್ಯದಲ್ಲಿ ನೈಟ್​ ಕರ್ಫ್ಯೂ ಜಾರಿ- ಎಲ್ಲೆಲ್ಲಿ ನಿಷೇಧ? ಏನಿರುತ್ತೆ? ಏನಿರಲ್ಲ? ರಾತ್ರಿ ಬಂದ್​ ಏಕೆ? ಇಲ್ಲಿವೆ ಡಿಟೇಲ್ಸ್​

ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ಪೈಲಟ್​ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

ಗುಂಡು ಕೊಟ್ಟಿಲ್ಲವೆಂದು ವಿಮಾನಕ್ಕೇ ಬೆಂಕಿ ಇಡಲು ಹೊರಟಳು ಈ ಮಾಡೆಲ್​- ಹೌಹಾರಿದ ಪ್ರಯಾಣಿಕರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − thirteen =
Remember me
