ಲಖನೌ:ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಬಹುದೊಡ್ಡ ಭದ್ರತಾ ಲೋಪ ಕಂಡುಬಂದಿದೆ. ಮಂಗಳವಾರ ಬಸ್ತಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದ ಸ್ಥಳಕ್ಕೆ ಸಿಎಂ ಯೋಗಿ ಬರುವ ಮುಂಚೆಯೇ ವ್ಯಕ್ತಿಯೊಬ್ಬ ಪರವಾನಗಿ ಪಡೆದ ಗನ್​ ಹಿಡಿದು ಒಳನುಸುಳಿರುವುದು ಬೆಳಕಿಗೆ ಬಂದಿದೆ. ​
ಗನ್​ ಹಿಡಿದ ವ್ಯಕ್ತಿಯನ್ನು ಆಡಿಟೋರಿಯಂ ಒಳಗೆ ಕಂಡಕೂಡಲೇ ಆತನನ್ನು ತಕ್ಷಣ ಅಲ್ಲಿಂದ ಭದ್ರತಾ ಸಿಬ್ಬಂದಿ ದೂರ ಕರೆದೊಯ್ದಿದ್ದಾರೆ. ಇದನ್ನು ಬಹುದೊಡ್ಡ ಭದ್ರತಾ ಲೋಪ ಎಂದು ಪರಿಗಣಿಸಿರುವ ಸರ್ಕಾರ ನಾಲ್ವರು ಪೋಲಿಸ್​ ಸಿಬ್ಬಂದಿಯನ್ನು ಅಮಾನತು ಮಾಡಿದೆ.
ಸಿಎಂ ಯೋಗಿ ಅವರ ಮಂಗಳವಾರ ಬಸ್ತಿ ಜಿಲ್ಲೆಯಲ್ಲಿರುವ ಅಟಲ್​ ಬಿಹಾರಿ ವಾಜಪೇಯಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಭದ್ರತೆಯಾಗಿ ಸ್ಥಳೀಯ ಪೊಲೀಸ್​ ಠಾಣೆ ಹಾಗೂ ಜಿಲ್ಲೆಯ ಇತರೆ ಠಾಣೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್​​ ಬರುವ 45ಕ್ಕೂ ಮುಂಚೆಯೇ ಅದೇ ಜಿಲ್ಲೆಯ ಗೌರ್​ ಬ್ಲಾಕ್​ ಪ್ರತಿನಿಧಿ ಜಾತ್ಶಂಕರ್​ ಶುಕ್ಲ ಎಂಬಾತ ಆಡಿಟೋರಿಯಂನಲ್ಲಿದ್ದ.
ಜಾತ್ಶಂಕರ್​ ಶುಕ್ಲ ಅವರ ಕಿರಿಯ ಸಹೋದರ ಅಮರ್​ದೀಪ್​ ಅವರ ಬಾಮೈದ ಜೀತೇಂದರ್​ ಪಾಂಡೆ ಲೈಸೆನ್ಸ್​ ಪಡೆದಿದ್ದ ರಿವಾಲ್ವರ್​ ಹಿಡಿದು ಆಡಿಟೋರಿಯಂಗೆ ಮುಂಚೆಯೇ ಆಗಮಿಸಿದ್ದ. ಆನಂತರ ರಿವಾಲ್ವರ್​ ಗಮನಿಸಿದ ಪೊಲೀಸ್​ ಸಿಬ್ಬಂದಿ ಜೀತೇಂದರ್​ ಪಾಂಡೆ ಸಮೇತ ಗನ್​ ಅನ್ನು ವಶಕ್ಕೆ ಪಡೆದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್​ ಹಿರಿಯ ಅಧಿಕಾರಿ ಕರ್ತವ್ಯ ನಿರ್ಲಕ್ಷ್ಯ ಆರೋಪದಲ್ಲಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.(ಏಜೆನ್ಸೀಸ್​)
ಗಂಡ ಸತ್ತ ಬೆನ್ನಲ್ಲೇ ಯುವಕನ ಜತೆ ಸರಸವಾಡುವಾಗ ಸಿಕ್ಕಿಬಿದ್ದ ಮಹಿಳೆ: ಬಯಲಾಯ್ತು ಭಯಾನಕ ರಹಸ್ಯ..!

100 ಕೋಟಿ ಲಸಿಕೆ ಕೇವಲ ಸಂಖ್ಯೆಯಲ್ಲ, ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭ: ಪ್ರಧಾನಿ ಮೋದಿ

ಕೇಂದ್ರ ನೌಕರರ ಡಿಎ ಹೆಚ್ಚಳ; ಶೇ.3 ಏರಿಕೆಗೆ ಸಂಪುಟ ಅಸ್ತು, ದೀಪಾವಳಿ ಕೊಡುಗೆ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 19 =
Remember me
