ಮಲಪ್ಪುರಂ:ವಿದ್ಯಾರ್ಥಿಗಳ ಪ್ರಯಾಣವನ್ನು ನಿರಾಕರಿಸುತ್ತಿದ್ದ ಖಾಸಗಿ ಬಸ್​ ವಿರುದ್ಧ ರೊಚ್ಚಿಗೆದ್ದ ಶಾಲಾ ಪ್ರಾಂಶುಪಾಲರೊಬ್ಬರು ಸ್ವತಃ ರಸ್ತೆಗಿಳಿದು, ಬಸ್​ ತಡೆದು, ಚಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೇರಳ ಮಲಪ್ಪುರಂನಲ್ಲಿ ನಡೆದಿದೆ.
ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಅಳಲನ್ನು ಗಮನಿದೇ ನಿರಾಸಕ್ತಿ ತೋರಿದ್ದರಿಂದ ಬೇಸರಗೊಂಡ ಪ್ರಾಂಶುಪಾಲರು ಸ್ವತಃ ರಸ್ತೆಗೆ ಇಳಿದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು. ರಸ್ತೆ ಮಧ್ಯೆಯೇ ಖಾಸಗಿ ಬಸ್​ ಅನ್ನು ಸಿನಿಮೀಯ ಶೈಲಿಯಲ್ಲಿ ಪ್ರಾಂಶುಪಾಲರು ಅಡ್ಡಗಟ್ಟಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಾಂಶುಪಾಲರ ನಡೆಗೆ ಭಾರಿ ಜನ ಮೆಚ್ಚುಗೆ ವ್ಯಕ್ತವಾಗಿದೆ.
ಮಲಪ್ಪುರಂನ ಪಿಟಿಎಂಎಚ್‌ಎಸ್‌ಎಸ್ ತಝೆಕೋಡ್‌ನ ಡಾ.ಎನ್.ಸಕ್ಕೀರ್ (ಸೈನುದ್ಧೀನ್ ಎಂದೂ ಕರೆಯುತ್ತಾರೆ) ರಸ್ತೆಯಲ್ಲಿ ಬಸ್ ತಡೆದ ಪ್ರಾಂಶುಪಾಲರು. ಸಕ್ಕೀರ್​ ಅವರು ಪ್ರಾಂಶುಪಾಲರ ಸಂಘದ ರಾಜ್ಯಾಧ್ಯಕ್ಷರೂ ಆಗಿದ್ದಾರೆ.
ಸಕ್ಕೀರ್ ಅವರ ಪ್ರಕಾರ, ಕೋಯಿಕ್ಕೋಡ್-ಪಾಲಕ್ಕಾಡ್ ಮಾರ್ಗದಲ್ಲಿ ಸಂಚರಿಸುವ ರಾಜಪ್ರಭ ಹೆಸರಿನ ಬಸ್ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದರೂ ಸೂಕ್ತ ಕ್ರಮಕೈಗೊಂಡಿಲ್ಲ. ಶಾಲೆಯ ಬಳಿ ಇರುವ ಸ್ಟಾಪ್‌ನಲ್ಲಿ ನಿತ್ಯವೂ ಬಸ್‌ ನಿಲ್ಲುವುದಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ. ಬಸ್ ಒಳಗೆ ಪ್ರವೇಶಿಸಲು ಪ್ರಯತ್ನಿಸಿದಾಗಲೂ ಅದು ಅಪಾಯಕಾರಿ ವೇಗದಲ್ಲಿ ಧಾವಿಸುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸರಗೊಂಡು ಸಕ್ಕೀರ್, ತಾವೇ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾದರು. ಮೊದಲ ಬಾಗಿಗೆ ಬಸ್ ಅನ್ನು ತಡೆಯಲು ಪ್ರಯತ್ನಿಸಿದರು, ಆದರೆ ಬಸ್ ವೇಗವಾಗಿ ನುಗ್ಗಿದ್ದರಿಂದ ಆ ಪ್ರಯತ್ನ ವಿಫಲವಾಯಿತು.
ಎರಡನೇ ಪ್ರಯತ್ನದಲ್ಲಿ ಬಸ್​ ವೇಗವನ್ನು ತಪ್ಪಿಸಲು ರಸ್ತೆಯಲ್ಲಿ ಇರಿಸಲಾದ ವಿಭಜಕದ ವ್ಯವಸ್ಥೆಯನ್ನು ಮಾರ್ಪಡಿಸಿದರು. ಇದರಿಂದಾಗಿ ಬಸ್​ ಅನಿವಾರ್ಯವಾಗಿ ನಿಧಾನಗೊಳಿಸಬೇಕಾಯಿತು. ಬಳಿಕ ಬಸ್​ ಚಾಲಕರೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ. ಇದೇ ವರ್ತನೆ ಪುನಾರಾವರ್ತನೆಯಾದರೆ, ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.(ಏಜೆನ್ಸೀಸ್​)
ಔಷಧ ಚೀಟಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗುತ್ತಿರುವ ಡಾಕ್ಟರ್​ ಇವರು! ಅಂಥದ್ದೇನಿದೆ ಈ ಚೀಟಿಯಲ್ಲಿ?

ವಿಜಯನಗರ: ದೂರು ನೀಡಲು ಬಂದ ವ್ಯಕ್ತಿಯ ಮಗಳನ್ನು ಮಂಚಕ್ಕೆ ಕರೆದ ಪೊಲೀಸ್ ಹೆಡ್​ ಕಾನ್ಸ್​ಟೇಬಲ್​

ಈವರೆಗೂ ನೋಡಿರದ ಮೀರಾ ಜಾಸ್ಮಿನ್ ಹಾಟ್​ ಅವತಾರ! ಮಲಯಾಳಿ ಬ್ಯೂಟಿಯ ಮೈಮಾಟಕ್ಕೆ ಫ್ಯಾನ್ಸ್​ ಫಿದಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − ten =
Remember me
