ಮಲಪ್ಪುರಂ:ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಕಳೆದ ಜೂನ್​ ತಿಂಗಳಲ್ಲಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಭಾವಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾನ್ಯ (22) ಮೃತ ಯುವತಿ. ಆರೋಪಿ ಅಶ್ವಿನ್​ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಥ್ರಿಕ್ಕಾಲಯೂರ್​ ಮೂಲದ ಮಾನ್ಯ, ಕಳೆದ ಜೂನ್​ನಲ್ಲಿ ತನ್ನ ಮನೆಯ ಬೆಡ್​ರೂಪ್​ನಲ್ಲಿ ನೇಣಿಗೆ ಶರಣಾಗಿದ್ದರು. ಘಟನೆ ನಡೆದ ಎರಡು ತಿಂಗಳ ಬಳಿಕ ಅಶ್ವಿನ್​​ ಬಂಧನವಾಗಿದೆ.
ಮಾನ್ಯ ಕುಟುಂಬ ಆರೋಪ ಮಾಡಿದ ಬಳಿಕ ಅರೀಕೋಡ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಮ್ಮ ಮಗಳು ಸಾವಿನ ಬಗ್ಗೆ ನಮಗೆ ಅನುಮಾನ ಇದೆ ಮತ್ತು ಈ ಪ್ರಕರಣದ ತನಿಖೆ ಆಗಬೇಕೆಂದು ಕುಟುಂಬ ಒತ್ತಾಯ ಮಾಡಿತ್ತು. ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಅಶ್ವಿನ್​ ಕಿರುಕುಳದಿಂದಲೇ ಮಾನ್ಯ ಮೃತಪಟ್ಟಿರುವುದು ಮೊಬೈಲ್​ನಿಂದ ಬಹಿರಂಗವಾಗಿದೆ.
ಮಾನ್ಯ ಅವರು ಬಳಸುತ್ತಿದ್ದ ಫೋನ್‌ನಿಂದ ಅವರ ಧ್ವನಿ ಸಂದೇಶಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. 2021ರ ಸೆಪ್ಟೆಂಬರ್​ನಲ್ಲಿ ನಿಶ್ಚಿತಾರ್ಥ ಆಗುವ ಮುನ್ನ ಕಳೆದ 8 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಕೆಲಸಕ್ಕೆಂದು ಅಶ್ವಿನ್​ ವಿದೇಶಕ್ಕೆ ಹೋಗಿದ್ದ. ಇದರ ನಡುವೆ ಇಬ್ಬರ ಪ್ರೀತಿಯಲ್ಲಿ ಸಾಕಷ್ಟು ಏರಿಳಿತಗಳ ಸಂಭವಿಸಿದ್ದವು. ಮದುವೆಯಿಂದ ದೂರ ಉಳಿಯುವ ಅಶ್ವಿನ್ ನಿರ್ಧಾರದಿಂದ ಬೇಸತ್ತು ಮಾನ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶದಿಂದ ಮರಳಿದ ನಂತರ ಆರೋಪಿ ಅಶ್ವಿನ್​ನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.(ಏಜೆನ್ಸೀಸ್​)
ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾದ್ರೂ ಮಂಡ್ಯಕ್ಕೆ ಬಾರದ ಸಂಸದೆ ಸುಮಲತಾ ವಿರುದ್ಧ ಜನಾಕ್ರೋಶ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ: ಹಿಂದು ಸಂಘಟನೆಗಳಿಂದ ಹರ್ಷೋದ್ಘಾರ

https://www.vijayavani.net/r-12-tables-and-25-chairs-were-broken-for-pappadam-many-of-the-injured-not-willing-to-speak-out/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
