ಪುಣೆ:ಮಂಗಳೂರು ಮೂಲದ ಮಲಯಾಳಿ ವೈದ್ಯೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆ ಬಳಿಯಿರುವ ಪಿಂಪ್ರಿಯಲ್ಲಿ ಮಂಗಳವಾರ ನಡೆದಿದೆ.
ಮೃತ ವೈದ್ಯೆಯನ್ನು ಜೈಶಾ (27) ಎಂದು ಗುರುತಿಸಲಾಗಿದೆ. ಮಂಗಳೂರು ಮೂಲದ ಜಾನ್​ ಥಾಮಸ್​ ಮತ್ತು ಉಷಾ ಥಾಮಸ್​ ದಂಪತಿಯ ಪುತ್ರಿಯಾದ ಜೈಶಾ, ರಿಮಿನ್​ ಆರ್​ ಕುರಿಯಾಕೋಸ್ ಎಂಬುವರನ್ನು ಮದುವೆ ಆಗಿದ್ದರು.
ಜೈಶಾ ಅವರು ಮಂಗಳವಾರ ಮಧ್ಯಾಹ್ನದ ವಿರಾಮದ ಸಮಯದಲ್ಲಿ ಮನೆಗೆ ತೆರಳಿ, ಊಟ ಮುಗಿಸಿಕೊಂಡು ಕ್ಲಿನಿಕ್​ಗೆ ಹಿಂದಿರುಗುತ್ತಿದ್ದರು. ಈ ವೇಳೆ ಜೈಶಾ ಅವರ ಸ್ಕೂಟರ್​ಗೆ ಟ್ರಕ್​ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಸ್ಥಳದಲ್ಲೇ ಜೈಶಾ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಮೃತದೇಹವನ್ನು ಪುಣೆಯಲ್ಲಿರುವ ಮನೆಗೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಅಲ್ಲಿಂದ ಮಂಗಳೂರಿಗೆ ಸ್ಥಳಾಂತರ ಮಾಡಲಾಯಿತು. ಮಂಗಳೂರಿನ ಜೆಪ್ಪುವಿನ ಸೆಂಟ್ ಆಂಟೋನಿ ಜಾಕೋಬೈಟ್ ಸಿರಿಯನ್ ಕೆಥೆಡ್ರಲ್‌ನ ಸ್ಮಶಾನದಲ್ಲಿ ಬುಧವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು. ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.(ಏಜೆನ್ಸೀಸ್​)
1 ಕೋಟಿ ರೂ. ಮೌಲ್ಯದ ಮರ್ಸಿಡೆಸ್​ ಕಾರಿಗೆ ಬೆಂಕಿಯಿಟ್ಟ ಗಾರೆ ಕೆಲಸದ ಮೇಸ್ತ್ರಿ! ಕಾರಣ ಹೀಗಿದೆ…

30ಕ್ಕೆ ರಿಚಾ-ಅಲಿ ವಿವಾಹ: ದೆಹಲಿಯಲ್ಲಿ ಮದುವೆ; ಮುಂಬೈನಲ್ಲಿ ರಿಸೆಪ್ಶನ್

ವಿರಾಮದ ನಂತರ ಅಮಲಾ ಪೌಲ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + nineteen =
Remember me
