ಮುಂಬೈ:ಮರ್ಡರ್​ ಸಿನಿಮಾ ಮೂಲಕ ಬಾಲಿವುಡ್​ನಲ್ಲಿ ಸಂಚಲನ ಮೂಡಿಸಿದ ಬೋಲ್ಡ್​ ಬ್ಯೂಟಿ ಮಲ್ಲಿಕಾ ಶೆರಾವತ್ ಸಾಕಷ್ಟು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದು, ಅವರ ನಟನೆಯ “ಆರ್​ಕೆ” ಚಿತ್ರ ಜುಲೈ 22ರಂದು ಬಿಡುಗಡೆಗೊಂಡು ಜನರ ಗಮನ ಸೆಳೆದಿದೆ. ಇದರ ನಡುವೆ ಮಲ್ಲಿಕಾ, ಬಾಲಿವುಡ್​ನ ಕೊಳಕು ಮನಸ್ಥಿತಿಗಳ ಬಗ್ಗೆ ಧೈರ್ಯದಿಂದ ಮಾತನಾಡಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಮಲ್ಲಿಕಾ, ಸಂಧಾನಕ್ಕೆ ಒಪ್ಪಿಕೊಳ್ಳದಿದ್ದಕ್ಕೆ ಸಾಕಷ್ಟು ಸಿನಿಮಾಗಳಿಂದ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಲೈಂಗಿಕ ಸಂಧಾನವನ್ನು ನಿರಾಕರಿಸಿದ್ದಕ್ಕೆ ಬಾಲಿವುಡ್​ನ ಎ-ಪಟ್ಟಿಯಲ್ಲಿರುವ ಅಥವಾ ಮುಂಚೂಣಿಯಲ್ಲಿದ್ದ ಬಾಲಿವುಡ್​ ನಟರು ನನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದರು. ನಟರು ತಾವು ನಿಯಂತ್ರಿಸಬಹುದಾದ ಮತ್ತು ಅವರೊಂದಿಗೆ ರಾಜಿ ಮಾಡಿಕೊಳ್ಳುವ ನಟಿಯರನ್ನು ಇಷ್ಟಪಡುತ್ತಾರೆ. ಆದರೆ, ನಾನು ಹಾಗಲ್ಲ, ನನ್ನ ವ್ಯಕ್ತಿತ್ವ ಅದಲ್ಲ. ನಾನು ಯಾರೊಬ್ಬರ ಆಸೆ ಮತ್ತು ಅಭಿಮಾನಗಳಿಗೆ ಒಳಗಾಗಲು ಬಯಸುವುದಿಲ್ಲ ಎಂದರು.
ಮುಂಜಾನೆ 3 ಗಂಟೆಗೆ ನಟನೊಬ್ಬ ನಿಮಗೆ ಕರೆ ಮಾಡಿ, ನನ್ನ ಮನೆಗೆ ಬಾ ಎಂದು ಕರೆದರೆ, ಒಂದು ವೇಳೆ ನೀವು ಆ ವಲಯದಲ್ಲಿ ಇದ್ದರೆ ಮತ್ತು ನೀವು ಆ ಚಿತ್ರ ಮಾಡುತ್ತಿದ್ದರೆ ಹೋಗಲೇಬೇಕು. ನೀವೇನಾದರೂ ಹೋಗದಿದ್ದರೆ, ನಿಮ್ಮನ್ನು ಆ ಸಿನಿಮಾದಿಂದಲೇ ಹೊರ ಹಾಕುತ್ತಾರೆಂದು ಮಲ್ಲಿಕಾ ತಿಳಿಸಿದರು.
ಈ ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಲ್ಲಿಕಾ, ಗೆಹ್ರಾಯಿಯಾಂ​ ಸಿನಿಮಾದಲ್ಲಿ ದೀಪಿಕಾ ಏನು ಮಾಡಿದ್ದಾರೋ ಅದನ್ನೇ ನಾನು 15 ವರ್ಷಗಳ ಹಿಂದೆಯೇ ಮರ್ಡರ್​ ಸಿನಿಮಾದಲ್ಲಿ ಮಾಡಿದ್ದೆ. ಆದರೆ, ಅಂದು ಜನರು ಒಂದೇ ಚೌಕಟ್ಟಿನಲ್ಲಿ ಯೋಚಿಸುತ್ತಿದ್ದರು. ಕಿಸ್ಸಿಂಗ್​ ಮತ್ತು ಬಿಕಿನಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ನನ್ನ ವಿರುದ್ಧ ಮುಗಿಬಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲೇ ಇರುವ ಕೆಲವು ಮಂದಿ ನನಗೆ ಕಿರುಕುಳ ನೀಡಿದರು. ನಟನೆ ಎಂದರೆ ಕೇವಲ ಗ್ಲಾಮರ್ ಅಲ್ಲ ಎಂದು ಬಹಳಷ್ಟು ಜನ ಕಿಡಿಕಾರಿದರು. ದಶಾವತಾರಂ, ಪ್ಯಾರ್ಕಿ ಸೈಡ್​ ಎಫೆಕ್ಟ್ಸ್​ ಮತ್ತು ವೆಲ್​ಕಮ್​ ಚಿತ್ರಗಳನ್ನು ಮಾಡಿದರೂ ಯಾರೊಬ್ಬರು ನನ್ನ ನಟನೆಯನ್ನು ಗುರುತಿಸಲಿಲ್ಲ ಎಂದು ಮಲ್ಲಿಕಾ ಹೇಳಿಕೊಂಡಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಆರ್​ಕೆ ಸಿನಿಮಾ ಜುಲೈ 22 ರಂದು ತೆರೆಗೆ ಅಪ್ಪಳಿಸಿ, ಜನರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಮಲ್ಲಿಕಾ ಶೆರಾವತ್​ ಜತೆಗೆ ಕಬ್ರಾ ಸೇಠ್​, ರಣವೀರ್​ ಶೋರೆ, ಮನು ರಿಶಿಖಾದ್ದ, ಚಂದ್ರಚೂರ್​ ರಾಯ್​ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.(ಏಜೆನ್ಸೀಸ್​)
ದೀಪಿಕಾ ಈಗ ಏನು ಮಾಡಿದ್ದಾರೋ ಅದನ್ನು 15 ವರ್ಷದ ಹಿಂದೆಯೇ ನಾನು ಮಾಡಿದ್ದೆ: ಮಲ್ಲಿಕಾರ ನೋವಿನ ಮಾತಿದು

ಭೀಕರ ಕಾರು ಅಪಘಾತದಲ್ಲಿ ಕಾಂಗ್ರೆಸ್​ ನಾಯಕನ ಮಗಳು, ಬ್ಯೂಟಿಷಿಯನ್​ ದುರಂತ ಸಾವು

ಕಾಬೂಲ್​ನಲ್ಲಿ ಅಮೆರಿಕ ನಡೆಸಿದ ವಾಯುದಾಳಿಗೆ ಅಲ್​ಖೈದಾ ನಾಯಕ ಐಮನ್​ ಅಲ್-ಜವಾಹಿರಿ ಬಲಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − 10 =
Remember me
