ಭೋಪಾಲ್​:ವ್ಯಕ್ತಿಯೊಬ್ಬನ್ನು ಕಳ್ಳ ಅಂದುಕೊಂಡ ಗುಂಪೊಂದು ಆತನನ್ನು ಬರ್ಬರವಾಗಿ ಥಳಿಸಿದಲ್ಲದೆ, ಲಾರಿ ಹಿಂಬದಿಗೆ ಕಟ್ಟಿ ದರದರನೇ ಎಳೆಸುವ ಮೂಲಕ ಆತನ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ನಾವು ಕಳ್ಳನೊಬ್ಬನನ್ನು ಹಿಡಿದಿದ್ದೇವೆ ಎಂದು ಕೆಲವು ಮಂದಿ ಪೊಲೀಸ್​ ಸಹಾಯವಾಣಿಗೆ ಕರೆ ಮಾಡುತ್ತಾರೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ತಲುಪುತ್ತಾರೆ. ಬಳಿಕ ನಿತ್ರಾಣ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ. ಬಳಿಕ ಆತನನ್ನು ನಿಮುಚ್​ ಜಿಲ್ಲಾಸ್ಪತ್ರಗೆ ಶಿಫಾರಸು ಮಾಡಲಾಗುತ್ತದೆ. ಆದರೆ, ಆತ ಸಾವಿಗೀಡಾಗಿರುವುದಾಗಿ ನಿಮುಚ್​ ಆಸ್ಪತ್ರೆಯ ವೈದ್ಯರು ಘೋಷಿಸುತ್ತಾರೆ.
ನಿಮುಚ್​ ಜಿಲ್ಲೆಯ ಜೆತಿಯಾ ಗ್ರಾಮದಲ್ಲಿ ಗುರುವಾದ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಮೃತ ವ್ಯಕ್ತಿ ತನ್ನನ್ನು ಬಿಟ್ಟು ಬಿಡುವಂತೆ ಸಾಕಷ್ಟು ಗೋಗರೆದರೂ ಆ ಗುಂಪು ಆತನನ್ನು ಬಿಡದೆ ಚೆನ್ನಾಗಿ ಥಳಿಸಿದೆ. ಮೃತ ವ್ಯಕ್ತಿಯನ್ನು ಕನ್ಹಾ ಅಲಿಯಾಸ್​ ಕನ್ಹಿಯಾ ಭೀಲ್​ ಎಂದು ಗುರುತಿಸಲಾಗಿದೆ. ಈತ ಬಾನಾಡಾ ಗ್ರಾಮದ ನಿವಾಸಿ.
ಈ ಪ್ರಕರಣದಲ್ಲಿ 8 ಮಂದಿಯನ್ನು ಗುರುತಿಸಲಾಗಿದೆ. ಅದರಲ್ಲಿ ಐದು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದವರನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ನೀಮುಚ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೂರಜ್​ ವರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ವೈರಲ್​ ವಿಡಿಯೋ ನೆರವಾಯಿತು ಎಂದಿದ್ದಾರೆ.
ಬಂಧಿತರ ಮೇಲೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ( ದೌರ್ಜನ್ಯ ತಡೆಯುವಿಕೆ) ಕಾಯ್ದೆ ಅಡಿಯಲ್ಲಿ ಕೊಲೆ ಪ್ರಕರಣ ಮತ್ತು ಭಾರತೀಯ ದಂಡಸಂಹಿತೆಯ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಸೆಪ್ಟೆಂಬರ್​ 1 ರಿಂದ 5… ಆಫ್ಘಾನ್​ ಬೆಳವಣಿಗೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..!

ಕಾಂತಾರದಲ್ಲಿ ರಿಷಬ್​ಗೆ ಜೋಡಿಯಾಗಿ ಸಪ್ತಮಿ ಗೌಡ

ವಿದ್ಯಾರ್ಥಿಗಳಿಗೆ ಎನ್​ಇಪಿ ಸ್ವಾತಂತ್ರ್ಯ; ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತ ಪಿ. ಪ್ರದೀಪ್ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
