ಮುಂಬೈ:ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್​ ಆಫ್​ ಚೇರ್ಮನ್​ ಆನಂದ್​ ಮಹೀಂದ್ರಾ ಅವರು ತಮ್ಮ ಕಣ್ಣಿಗೆ ಬಿದ್ದಂತಹ ವಿಶೇಷತೆಗಳನ್ನು ಆಗಾಗ ಪರಿಚಯಿಸುತ್ತಿರುತ್ತಾರೆ. ಅದರಂತೆ ಈ ಬಾರಿಯು ಒಂದು ವಿಶೇಷ ವಾಹನವನ್ನು ಪರಿಚಯಿಸಿರುವ ಅವರು ವಾಹನ ತಯಾರಿಸಿದವನಿಗೆ ಒಂದು ಆಫರ್​ ನೀಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ.
ಮಹಾರಾಷ್ಟ್ರದ ದತ್ತಾತ್ರೆಯ ಲೋಹರ್​ ಎಂಬುವರು ಹಾಳಾದ ಲೋಹದ ತುಣುಕುಗಳು ಅಥವಾ ಗುಜರಿ ವಸ್ತುಗಳನ್ನು ಬಳಸಿಕೊಂಡು ನಾಲ್ಕು ಚಕ್ರದ ವಾಹನವನ್ನು ಸಂಶೋಧಿಸಿದ್ದಾರೆ. ಹಿಸ್ಟರಿಕೆನೋ ಹೆಸರಿನ ಯೂಟ್ಯೂಬ್​ ಚಾನೆಲ್​ ಪ್ರಕಾರ ದತ್ತಾತ್ರೆಯ ಲೋಹಾರ್​ ಅವರು ಕಡಿಮೆ ಶಿಕ್ಷಣವನ್ನು ಹೊಂದಿದ್ದರೂ ಕೂಡ ಹಾಳಾದ ಲೋಹದ ತುಣುಕುಗಳನ್ನು ತೆಗೆದುಕೊಂಡು ತಮ್ಮ ಮಗನ ಆಸೆಯನ್ನು ಈಡೇರಿಸಲು ವಾಹನ ಸಂಶೋಧನೆ ಮಾಡಿದ್ದಾರೆ. ಈ ವಿಶಿಷ್ಟ ಸಂಶೋಧನೆಯನ್ನು ನೋಡಿ ಪ್ರಭಾವಿತಗೊಂಡ ಆನಂದ್​ ಮಹೀಂದ್ರಾ ಅವರು ತಕ್ಷಣ ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಲ್ಲದೆ, ಇದು ಸ್ಪಷ್ಟವಾಗಿ ಯಾವುದೇ ನಿಬಂಧನೆಗಳನ್ನು ಪೂರೈಸುವುದಿಲ್ಲ ಆದರೆ, ನಮ್ಮ ಜನರ ಜಾಣ್ಮೆ ಮತ್ತು ಸಾಮರ್ಥ್ಯಗಳನ್ನು ಮೆಚ್ಚುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
This clearly doesn’t meet with any of the regulations but I will never cease to admire the ingenuity and ‘more with less’ capabilities of our people. And their passion for mobility—not to mention the familiar front grillepic.twitter.com/oFkD3SvsDt
— anand mahindra (@anandmahindra)December 21, 2021

ಇನ್ನು 45 ಸೆಕೆಂಡಿನ ವಿಡಿಯೋದಲ್ಲಿ ಮಹಾರಾಷ್ಟ್ರದ ದೇವರಾಷ್ಟ್ರೇ ಗ್ರಾಮದ ಕಮ್ಮಾರ ಆಗಿರುವ ದತ್ತಾತ್ರೆಯ ಲೋಹರ್​ ಅವರು ಹೇಗೆ ವಾಹನ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಕೇವಲ 60 ಸಾವಿರ ರೂಪಾಯಿಯಲ್ಲಿ ವಾಹನವನ್ನು ತಯಾರಿಸಲಾಗಿದೆ. ಕೇವಲ ದ್ವಿಚಕ್ರ ವಾಹನಗಳಲ್ಲಿ ಇರುವಂತಹ ಕಿಕ್​ ಸ್ಟಾರ್ಟ್​ ಮೆಕ್ಯಾನಿಸಂ ವ್ಯವಸ್ಥೆಯು ಕೂಡ ಈ ವಾಹನದಲ್ಲಿದೆ. ಇದು ಹಳೆಯ ಮತ್ತು ಕೈಬಿಟ್ಟಂತಹ ಕಾರಿನ ಭಾಗಗಳನ್ನು ಬಳಸಿ ನಿರ್ಮಿಸಲಾಗಿದೆ.
ಮತ್ತೊಂದು ಟ್ವೀಟ್​ ಮಾಡಿರುವ ಆನಂದ್​ ಮಹೀಂದ್ರಾ ಅವರು ಆತನ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಬದಲು ವಾಹನವು ಸರ್ಕಾರದ ಕೆಲವು ನಿಯಮಗಳನ್ನು ಅನುಸರಿಸಿಲ್ಲ ಎಂದು ಕಾರಣ ನೀಡಿ ಸ್ಥಳೀಯ ಅಧಿಕಾರಿಗಳು ಅದನ್ನು ರಸ್ತೆಗಳಲ್ಲಿ ಓಡಿಸದಂತೆ ತಡೆಯುತ್ತಾರೆ ಎಂದಿರುವ ಅವರು ವೈಯಕ್ತಿಕವಾಗಿ ದತ್ತಾತ್ರೆಯ ಅವರಿಗೆ ಬೊಲೆರೋ ಕಾರು ವಿನಿಮಯದ ಆಫರ್​ ನೀಡಿದ್ದಾರೆ. ಅಲ್ಲದೆ, ಆತನ ಆವಿಷ್ಕಾರ ಇತರರಿಗೆ ಮಾದರಿಯಾಗಲು ಮಹೀಂದ್ರ ರೀಸರ್ಚ್​ ವ್ಯಾಲಿಯಲ್ಲಿ ಪ್ರದರ್ಶಿಸುವುದಾಗಿ ಭರವಸೆ ನೀಡಿದ್ದಾರೆ.
Local authorities will sooner or later stop him from plying the vehicle since it flouts regulations. I’ll personally offer him a Bolero in exchange. His creation can be displayed at MahindraResearchValley to inspire us, since ‘resourcefulness’ means doing more with less resourceshttps://t.co/mibZTGjMPp
— anand mahindra (@anandmahindra)December 22, 2021

ಸದ್ಯ ದತ್ತಾತ್ರೆಯ ಆವಿಷ್ಕಾರದ ವಿಡಿಯೋ ವೈರಲ್​ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.(ಏಜೆನ್ಸೀಸ್​)
ಜೆಡಿಎಸ್​ ಮುಖಂಡನ ಪುತ್ರನ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಲೇಡಿ ಎಸ್​ಐ ​ಜತೆಗಿನ ಲವ್ವಿಡವ್ವಿಯೇ ಮುಳುವಾಯ್ತಾ?

ಸ್ಯಾಂಡಲ್​ವುಡ್​ಗೆ ಮತ್ತೊಂದು ಆಘಾತ: ಯುದ್ಧಕಾಂಡ ಖ್ಯಾತಿಯ ಹಿರಿಯ ನಿರ್ದೇಶಕ ಕೆವಿ ರಾಜು ಇನ್ನಿಲ್ಲ

ಫುಡ್​ ಡೆಲಿವರಿ ಮಾಡುವುದು ತಡವಾಗ್ತಿದೆ ಎಂದಿದ್ದಕ್ಕೆ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − five =
Remember me
