ಹೈದರಾಬಾದ್​:ವೇಗದಲ್ಲಿ ಬಂದ ಬೈಕ್​ ಒಂದು ಸೀದಾ ಬಟ್ಟೆ ಅಂಗಡಿಯೊಳಗೆ ನುಗ್ಗಿದ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?: ಬಟ್ಟೆ ಅಂಗಡಿ ಒಳಗೆ ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಮಾತನಾಡುತ್ತಿರುವಾಗಲೇ, ಇದ್ದಕ್ಕಿದ್ದಂತೆ ಅಂಗಡಿ ಒಳಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಬೈಕ್​ ಧುತ್ತನೇ ನುಗ್ಗುತ್ತದೆ. ತಕ್ಷಣ ಎಚ್ಚೆತ್ತುಕೊಳ್ಳುವ ಗ್ರಾಹಕರು ಒಂದು ಬದಿಗೆ ಸರಿಯುತ್ತಾರೆ. ಇತ್ತ ಬೈಕ್​ ಮೇಲಿದ್ದ ಸವಾರ ಹಾರಿ ಬೀಳುತ್ತಾನೆ.
ಅದೃಷ್ಟವಶಾತ್​ ಈ ಘಟನೆಯಿಂದ ಯಾರಿಗೂ ಹಾನಿಯಾಗಿಲ್ಲ. ಬೈಕ್​ನಿಂದ ಹಾರಿ ಹೋಗಿ ಸೀರೆ ತೋರುವ ಕೌಂಟರ್​ ಒಳಗೆ ಬಿದ್ದ ಸವಾರನಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂದಹಾಗೆ ಈ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯ ರವಿಚೆಟ್ಟು ಬಜಾರ್​ನಲ್ಲಿ ನವೆಂಬರ್​ 8ರಂದು ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬೈಕ್​ನ ಬ್ರೇಕ್​ ಫೇಲ್​ ಆದ ಕಾರಣ ಈ ಘಟನೆ ಸಂಭವಿಸಿದೆ ಎಂದು ಸವಾರ ತಿಳಿಸಿದ್ದಾನೆ. ಸದ್ಯ ಬೈಕ್​ ವಶಕ್ಕೆ ಪಡೆದಿರುವ ಪೊಲೀಸರು ಘಟನೆ ಸಂಬಂಧ ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)

ಪೊಲೀಸರನ್ನು ಕಂಡ್ರೆ ಭಯ ಅನ್ನುವವರು ಈ ಸ್ಟೋರಿ ಓದಿದ್ರೆ ಮನಸ್ಸು ಬದಲಾಯಿಸೋದು ಗ್ಯಾರೆಂಟಿ..!
ಆಂಧ್ರ ಹುಡುಗಿ-ಐರ್ಲೆಂಡ್​ ಹುಡುಗ: ದೇಶ, ಭಾಷೆ, ಧರ್ಮದ ಗಡಿ ಮೀರಿದ ವಿಶೇಷ ಪ್ರೇಮ ಕತೆ ಇದು
ಏನೇ ನಡೆದಿದ್ರೂ ಅವನೊಬ್ಬನಿಗೆ ಮಾತ್ರ ಗೊತ್ತಿರುತ್ತದೆ! ಪುನೀತ್ ಸಾವಿನ ಅನುಮಾನದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 7 =
Remember me
