ಮುಂಬೈ:ಸುಮಾರು 12 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ 32 ವರ್ಷದ ಮೆಕಾನಿಕಲ್​ ಇಂಜಿನಿಯರ್​ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮಹೇಶ್​ ಅಲಿಯಾಸ್​ ಕರಣ್​ ಗುಪ್ತಾ ಎಂದು ಗುರುತಿಸಲಾಗಿದೆ. ಮುಂಬೈ ಮಲಾಡ್​ ಏರಿಯಾದಲ್ಲಿ ಸೋಮವಾರ ಬಂಧಿಸಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಪೊಲೀಸ್​ ಬಲೆಗೆ ನಯವಂಚಕ ಬಿದ್ದಿದ್ದಾನೆ.
ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಅನೇಕ ನಕಲಿ ಖಾತೆಗಳನ್ನು ಸೃಷ್ಟಿಸಿ ಸುಶಿಕ್ಷಿತ ಮಹಿಳೆಯರನ್ನೇ ಈತ ಟಾರ್ಗೆಟ್​ ಮಾಡುತ್ತಿದ್ದ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ವೆಬ್​ಸೈಟ್​ ಮೂಲಕ ಮಹಿಳೆಯರನ್ನು ಪರಿಚಯಿಸಿಕೊಂಡ ನಂತರ ಫೋನ್​ ಮೂಲಕ ಭೇಟಿಯನ್ನು ನಿಗದಿಪಡಿಸುತ್ತಿದ್ದ. ಪಬ್​, ರೆಸ್ಟೋರೆಂಟ್​ ಅಥವಾ ಮಾಲ್​ಗಳಲ್ಲಿ ಭೇಟಿ ಮಾಡುತ್ತಿದ್ದ.
ಭೇಟಿಯ ವೇಳೆಯೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಡೆಪ್ಯೂಟಿ ಕಮಿಷನರ್​ ಆಫ್​ ಪೊಲೀಸ್​ ಸುರೇಶ್​ ಮೆಂಗಡೆ ಮಾಹಿತಿ ನೀಡಿದ್ದಾರೆ.
ಪ್ರತಿ ಅಪರಾಧ ಮಾಡುವಾಗಲು ಆರೋಪಿ ಬೇರೆ ಬೇರೆ ನಂಬರ್​ ಬಳಸುತ್ತಿದ್ದ. ಸಿಮ್​ ಕಾರ್ಡ್​ ಬದಲಾಯಿಸುವುದೇ ಈತನ ಕಾಯಕವಾಗಿತ್ತು. ತನ್ನ ಹೆಸರಿನಲ್ಲಿ ನೋಂದಾವಣೆಯಾಗದ ಫೋನ್​ ನಂಬರ್​ ಅನ್ನೇ ಬಳಸುತ್ತಿದ್ದ. ವೈಯಕ್ತಿಕ ವಾಹನ ಬಳಸದೇ ಓಲಾ, ಊಬರ್​ ಕ್ಯಾಬ್​ ಮೂಲಕವೇ ಸಂಚಾರ ಮಾಡುತ್ತಿದ್ದ. ಕಂಪ್ಯೂಟರ್​ ಮೇಲೆ ಉತ್ತಮ ಜ್ಞಾನ ಹೊಂದಿರುವ ಆರೋಪಿ ಕೆಲ ಸಮಯ ಹ್ಯಾಕರ್​ ಆಗಿ ಕೆಲಸ ಮಾಡಿದ್ದ. ಆದರೆ, ಇದನ್ನು ಕೆಟ್ಟ ಕೆಲಸಕ್ಕಾಗಿ ಬಳಸಿದ್ದ ಎಂದು ಮೆಂಗಾಡೆ ತಿಳಿಸಿದರು.
ಗೌರವಾನ್ವಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಆರೋಪಿ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದಾನೆ. ಇಲ್ಲಿಯವರಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈತ 12 ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಆತನನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.(ಏಜೆನ್ಸೀಸ್​)
VIDEO| ಬೋಲ್ಡ್​ ಸೀನ್​ ಮೂಲಕ ಎಲ್ಲರ ಹುಬ್ಬೇರಿಸಿದ ಸಮಂತಾ: ಮಾದಕ ದೃಶ್ಯಗಳು ವೈರಲ್​!

ವಿಶ್ವ ಪರಿಸರ ದಿನದಂದು ರಸ್ತೆ ಬದಿಯಲ್ಲೇ ಗಾಂಜಾ ಗಿಡ ನೆಟ್ಟ ಯುವಕನಿಗಾಗಿ ಪೊಲೀಸರ ತಲಾಶ್!​

ಯುವತಿಯರು ವಾಸವಿದ್ದ ಬಾಡಿಗೆ ಮನೆಯ ಗುಟ್ಟು ದಿಢೀರ್​ ಪೊಲೀಸ್​ ದಾಳಿಯಿಂದ ರಟ್ಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
