ನವದೆಹಲಿ:ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಚಿಕ್ಕಮ್ಮ ಆಗಿರಲಿ ಅಥವಾ ದೊಡ್ಡಮ್ಮ ಆಗಿರಲಿ ಅವರು ಮಾತೃ ಸಮಾನರು. ಆದರೆ, ಇಲ್ಲೊಬ್ಬ ಯುವಕ ತನ್ನ ಮಲತಾಯಿಯ ಜೊತೆ ಓಡಿ ಹೋಗಿದ್ದು, ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ನೊಂದ ವ್ಯಕ್ತಿ, ನನ್ನ ಮಗ ನನ್ನ ಎರಡನೇ ಹೆಂಡತಿಯ ಜತೆ ಓಡಿ ಹೋಗಿದ್ದು ನ್ಯಾಯ ದೊರಕಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ.
ಈ ಘಟನೆ ಉತ್ತರಾಖಂಡದ ಬಜ್ಪುರ್​ ಜಿಲ್ಲೆಯಲ್ಲಿ ನಡೆದಿದೆ. ಇಂದ್ರರಾಮ್​ ಎಂಬಾತ ಮಗನ ವಿರುದ್ಧವೇ ದೂರು ನೀಡಿದ್ದಾನೆ. ನನ್ನ ಎರಡನೇ ಹೆಂಡತಿ ಬಾಬ್ಲಿ ಜತೆ ನನ್ನ ಪುತ್ರ ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಸಿದ್ದಾನೆ.
ಇಂದ್ರಾರಾಮ್​ ಮೊದಲ ಪತ್ನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಬಾಬ್ಲಿಯನ್ನು ಮದುವೆಯಾಗಿ 11 ವರ್ಷ ಕಳೆದಿವೆ. ಮೊದಲ ಹೆಂಡತಿಯ ಪುತ್ರ ನಿತ್ಯವು ಮನೆಗೆ ಬರುತ್ತಿದ್ದನಂತೆ. ಹಿಂದಿನ ದಿನ ಮನೆಗೆ ಹೋಗುವುದಾಗಿ ಹೇಳಿದ್ದ ಬಾಬ್ಲಿ ವಾಪಸ್ ಬಂದಿರಲಿಲ್ಲ. ಬಳಿ ವಿಚಾರಣೆ ನಡೆಸಿದಾಗ ಬಾಬ್ಲಿ, ಇಂದ್ರರಾಮ್​ ಮೊದಲ ಪುತ್ರನ ಜತೆ ಮದುವೆಯಾಗಿರುವ ವಿಚಾರ ಗೊತ್ತಾಗಿದೆ.
ಮನೆಯಿಂದ ಹೋಗುವಾಗ ಬಾಬ್ಲಿ 20 ಸಾವಿರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾಳೆ ಎಂದು ಇಂದ್ರರಾಮ್​ ಆರೋಪಿಸಿದ್ದಾನೆ. ಪತಿಯೊಂದಿಗೆ ಹಿಂತಿರುಗಲು ನಿರಾಕರಿಸಿದ ಕಾರಣ ಮಾತಿನ ಚಕಮಕಿ ನಡೆದಿದ್ದು, ಇಂದ್ರರಾಮ್ ಗಾಯಗೊಂಡಿದ್ದಾರೆ. ಪತ್ನಿ ಮತ್ತು ಮಗನೇ ಇಂತಹ ನೀಚ ಕೃತ್ಯ ಮಾಡಿರುವುದನ್ನು ನೋಡಿ ನೊಂದುಕೊಂಡಿರುವ ಇಂದ್ರರಾಮ್​ ಗೋಳಾಡುತ್ತಿದ್ದಾನೆ. ಇಬ್ಬರು ಇದೀಗ ನಾಪತ್ತೆಯಾಗಿದ್ದು, ಪೊಲೀಸರಿಗೆ ದೂರು ನೀಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾನೆ.(ಏಜೆನ್ಸೀಸ್​)
ವಿದೇಶಿ ಸಂಸತ್ತಿನಲ್ಲಿ ಮೊದಲ ಬಾರಿಗೆ ಮೊಳಗಿದ ಕನ್ನಡ: ಕೆನಡಾ ಸಂಸದ ಚಂದ್ರ ಆರ್ಯರಿಂದ ಕನ್ನಡದಲ್ಲೇ ಭಾಷಣ

ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳ: ರವಿ ಚೆನ್ನಣ್ಣನವರ್​ ಸಹೋದರನ ವಿರುದ್ಧ ಎಫ್​ಐಆರ್​

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ: ದಿಢೀರ್​ ಶಾಕ್​ ಕೊಟ್ಟ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − two =
Remember me
