ಕೊಚ್ಚಿ:ಆನ್​ಲೈನ್​ನಲ್ಲಿ ಬುಕ್​ ಮಾಡಿದ ಪ್ರಾಡಕ್ಟ್​ ಬದಲಾಗಿ ಬೇರೆ ಪ್ರಾಡಕ್ಟ್​ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆನ್​ಲೈನ್​ಲ್ಲಿ ವಾಚ್ ಬುಕ್​ ಮಾಡಿದ ಗ್ರಾಹಕನಿಗೆ ಆರ್ಡರ್​ ಡೆಲಿವರಿ ಬಳಿಕ ಶಾಕ್​ ಕಾದಿತ್ತು.
ಈ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಥಟ್ಟಂಪಾಡಿ ನಿವಾಸಿ ಅನಿಲ್​ ಕುಮಾರ್​ ಎಂಬುವರು ಪ್ರಮುಖ ಇ-ಕಾಮರ್ಸ್​ ಕಂಪನಿಯಲ್ಲಿ 2,200 ರೂಪಾಯಿ ಬೆಲೆ ಬಾಳುವ ವಾಚ್ ಅನ್ನು​ ಬುಕ್​ ಮಾಡಿದ್ದರು.
ಶನಿವಾರ ಮಧ್ಯಾಹ್ನ ಇಬ್ಬರು ಡೆಲಿವರಿ ಏಜೆಂಟ್​ಗಳು ಅನಿಲ್​ ಕುಮಾರ್​ ಅವರ ಮನೆಗೆ ಬಂದು ವಾಚ್​ ಡೆಲಿವರಿ ಮಾಡಿದ್ದಾರೆ. ಆದರೆ, ಪ್ಯಾಕೇಜ್​ ತುಂಬಾ ತೂಕ ಇರುವುದನ್ನು ನೋಡಿ ಅನುಮಾನಗೊಂಡ ಅನಿಲ್​, ತಕ್ಷಣ ಅದನ್ನು ತೆರೆದು ನೋಡಿದ್ದಾರೆ. ಅದರಲ್ಲಿ ವಾಚ್​ ಬದಲಾಗಿ ಕಾಂಡೋಮ್​ ಜತೆಯಲ್ಲಿ ಕೆಲವು ವಸ್ತುಗಳು ಇರುವುದನ್ನು ನೋಡಿ ಅನಿಲ್​ ಶಾಕ್​ ಆಗಿದ್ದಾರೆ.
ಇದಾದ ತಕ್ಷಣ ಡೆಲಿವರಿ ಏಜೆಂಟ್​​ಗಳನ್ನು ತಮ್ಮ ಮನೆಯ ಆವರಣದಲ್ಲೇ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಇದು ಕಂಪನಿ ಮಾಡಿದ ಎಡವಟ್ಟ? ಅಥವಾ ಸಂಚು ರೂಪಿಸಿ ಮಾಡಿದ ವಂಚನೆಯಾ? ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಸದ್ಯ ಇಬ್ಬರು ಡಿಲಿವರಿ ಏಜೆಂಟ್​ ಪೊಲೀಸ್​ ವಶದಲ್ಲಿದ್ದಾರೆ.(ಏಜೆನ್ಸೀಸ್​)
18 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್​ ಬೈ ಹೇಳಿದ ನಟ ಧನುಷ್​: ರಜಿನಿ ಪುತ್ರಿ ಐಶ್ವರ್ಯಾ ಜತೆ ಡಿವೋರ್ಸ್​

ಕಾಲಿವುಡ್​ಗೆ ಮತ್ತೆ ರಾಗಿಣಿ; ಎಂಟು ವರ್ಷಗಳ ನಂತರ ತಮಿಳು ಚಿತ್ರರಂಗಕ್ಕೆ

ಮೌನಕ್ಕೆ ಜಾರಿದ ಮಾಯಾ: ಪಕ್ಷದಲ್ಲಿ ಕಾಣದ ಉತ್ಸಾಹ; ಬಿಜೆಪಿ-ಎಸ್​ಪಿ ನೇರ ಹಣಾಹಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
