ಭುವನೇಶ್ವರ:ಆನ್​ಲೈನ್​ನಲ್ಲಿ ಬುಕ್​ ಮಾಡಿದ ಪ್ರಾಡಕ್ಟ್​ ಬದಲಾಗಿ ಬೇರೆ ಪ್ರಾಡಕ್ಟ್​ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಫೋನ್​ ಬದಲಿಗೆ ಸೋಪ್​ ಅಥವಾ ಖಾಲಿ ಬಾಕ್ಸ್​ ಪಡೆದುಕೊಂಡಿರುವುದನ್ನು ಕಂಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಮಿಂತ್ರಾದಲ್ಲಿ ಗ್ರಾಹಕರೊಬ್ಬರು ಫುಟ್​ಬಾಲ್​ ಬುಕ್​ ಮಾಡಿದ್ದರು. ಆದರೆ, ತಲುಪಿದ ಪ್ರಾಡಕ್ಟ್​ ನೋಡಿ ಗ್ರಾಹಕ ತಬ್ಬಿಬ್ಬಾಗಿದ್ದಾನೆ.
ಒಡಿಶಾ ರಾಜಧಾನಿ ಭುವನೇಶ್ವರದ ನಿವಾಸಿ ಕಶ್ಯಪ್​ ಎಂಬುವರು ಆನ್​ಲೈನ್​ ಶಾಪಿಂಗ್​ ವೇಳೆ ತಮಗಾದ ಕಹಿ ಅನುಭವವನ್ನು ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಕಶ್ಯಪ್​ ಪುಟ್​ಬಾಲ್​ ಖರೀದಿಸಲು ಮಿಂತ್ರಾ (Myntra)ದಲ್ಲಿ ಆರ್ಡರ್​ ಮಾಡಿದ್ದರು. ನಿಗದಿಯಂತೆ ಕಶ್ಯಪ್​ ಅವರಿಗೆ ಆರ್ಡರ್​ ಅನ್ನು ಡೆಲಿವರಿ ಬಾಯ್​ ಡೆಲಿವರಿ ಮಾಡಿದ್ದಾರೆ. ಆರ್ಡರ್​ ಪಡೆದು ಬಾಕ್ಸ್​ ಓಪನ್​ ಮಾಡಿದ ಕಶ್ಯಪ್​ ಅಕ್ಷರಶಃ ಶಾಕ್​ ಕಾದಿತ್ತು. ಏಕೆಂದರೆ, ಅದರಲ್ಲಿ ಫುಟ್​ಬಾಲ್​ ಬದಲಿಗೆ ಕಪ್ಪು ಬಣ್ಣದ ಬ್ರಾ ಇತ್ತು. ಇದಿಷ್ಟು ಘಟನೆ ಅ.12ರಂದು ನಡೆದಿದೆ. ಇದಾದ ಬಳಿಕ ಕಶ್ಯಪ್​, ಕಸ್ಟಮರ್​ ಕೇರ್​ಗೆ ಕಾಲ್​ ಮಾಡಿ ಮಾಹಿತಿ ತಿಳಿಸಿದ್ದಾರೆ. ಆದರೆ, ಸರಿಯಾಗಿ ಸ್ಪಂದಿಸದ ಕಂಪನಿ ಪ್ರಾಡಕ್ಟ್​ ಬದಲಾಯಿಸಲು ನಿರಾಕರಿಸಿದೆ.
Ordered football stockings. Received a triumph bra.@myntra's response? "Sorry, can't replace it".
So I'm going to be wearing a 34 CC bra to football games, fellas. Ima call it my sports bra.pic.twitter.com/hVKVwJLWGr
— Kashyap (@LowKashWala)October 17, 2021

Cut it in half and use them as knee caps. You’ll be the coolest kid in the block.
— Tilak Mithrabettu (@tilak365)October 17, 2021

ಅಸಹಾಯಕನಾದ ಕಶ್ಯಪ್​ ಫೋಟೋ ತೆಗೆದು ಅದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿ ತಮ್ಮ ಅಳಲು ತೊಡಿಕೊಂಡಿದ್ದಾರೆ. ಇದೀಗ ಆ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ಫೋಟೋ ನೋಡಿ ಮುಸಿ ಮುಸಿ ನಕ್ಕರೆ, ಇನ್ನು ಕೆಲವರು ಬ್ರಾ ಹೇಗೆ ಬಳಸಬೇಕೆಂದು ಫನ್ನಿಯಾಗಿ ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)
ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ದುಬಾರಿ ಐಫೋನ್​ ಬುಕ್​ ಮಾಡಿದ್ದ ಗ್ರಾಹಕನಿಗೆ ಕಾದಿತ್ತು ಬಿಗ್​ ಶಾಕ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 9 =
Remember me
