ಪಲಕ್ಕಾಡ್​:ಸುಮಾರು ಹತ್ತು ವರ್ಷಗಳ ಕಾಲ ತನ್ನ ಒಂಟಿ ಕೋಣೆಯಲ್ಲಿ ಪ್ರೇಯಸಿಯನ್ನು ಯಾರಿಗೂ ಗೊತ್ತಾಗದಂತೆ ಬಚ್ಚಿಟ್ಟಿದ್ದ ಪ್ರಿಯಕರ, ಗುರುವಾರ ಮಾಧ್ಯಮಗಳ ಮುಂದೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದು, ತನ್ನ ಕುಟುಂಬದ ಸಿಟ್ಟಿಗೆ ಹೆದರಿ ಈ ನಡೆಯನ್ನು ಅನುಸರಿಸಿದ್ದಾಗಿ ಹೇಳಿಕೊಂಡಿದ್ದಾನೆ.
ಇಷ್ಟೇ ಅಲ್ಲದೆ, ಪ್ರೇಯಸಿಯನ್ನು ದೀರ್ಘ ಕಾಲ ಬಚ್ಚಿಡಲು ಪೊಲೀಸರು ಮತ್ತು ಸ್ಥಳೀಯ ಜನರು ಸಹ ನೆರವು ನೀಡಿದ್ದರು ಎಂದು ತಿಳಿಸಿದ್ದಾನೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಕರ, ತನ್ನ ಕುಟುಂಬದ ಭಯಕ್ಕೆ ಹೆದರಿ ಪ್ರೇಯಸಿಯನ್ನು ತನ್ನ ಕೋಣೆಯಲ್ಲಿಯೇ ಕೂಡಿಟ್ಟಿದೆ. ನನ್ನ ಹೋಸ ಜೀವನಕ್ಕೆ ಪೊಲೀಸರು ಮತ್ತು ಸ್ಥಳೀಯ ಜನರು ಸಾಥ್​ ನೀಡುತ್ತಿದ್ದರು. ಸ್ಟೌ ಮತ್ತು ಇತರೆ ಗೃಹಬಳಕೆಯ ವಸ್ತುಗಳನ್ನು ಸಹ ಪೊಲೀಸರು ನೀಡಿದ್ದರು. ಸಣ್ಣದಾದ ಕೋಣೆಯಲ್ಲಿ ಇಬ್ಬರು ಸಂತೋಷದ ಜೀವನ ನಡೆಸುತ್ತಿದೆವು. ಅಕ್ಕಪಕ್ಕದ ಜನರು ಸಹ ನಮ್ಮ ನೆರವಿಗೆ ನಿಂತರು ಎಂದು ಹೇಳಿಕೊಂಡಿದ್ದಾನೆ.
ಇದ್ದ ಸ್ಥಳವನ್ನು ಬಿಟ್ಟು ಹೋಗಲು ನಾನು ಸ್ವಲ್ಪ ಹಣಕ್ಕಾಗಿ ಕಾಯುತ್ತಿದ್ದೆ. ಆದರೆ ಅದು ವಿಳಂಬವಾಯಿತು. ನಂತರ ನಾನು ಎಲ್ಐಸಿಯಿಂದ ಸ್ವಲ್ಪ ಮೊತ್ತಕ್ಕಾಗಿ ಕಾಯುತ್ತಿದ್ದೆ. ಆದರೆ ಅದು ಕೂಡ ವಿಳಂಬವಾಯಿತು. ಇದರ ನಡುವೆ ನನ್ನ ಕುಟುಂಬ ಹಣ ಸ್ವೀಕರಿಸಿದೆ ಎಂದು ತಿಳಿಯಿತು. ಮನೆಗೆ ಗೊತ್ತಾಗದಂತೆ ಹೇಗೋ ಪರಿಸ್ಥಿತಿಯನ್ನು ನಿಭಾಯಿಸಿದೆ ಎಂದು ಹೇಳಿಕೊಂಡಿದ್ದಾರೆ.
ಇದ್ದ ಸಣ್ಣ ಕೋಣೆಯಲ್ಲಿ ಎಲ್ಲವನ್ನು ಅಳವಡಿಸಿದ್ದೆ. ಟಿವಿ ಸೇರಿದಂತೆ ಪ್ರತಿಯೊಂದು ಇತ್ತು. ಆಕೆ ನನ್ನೊಂದಿಗೆ ಹೊಂದಿಕೊಂಡಿದ್ದಳು. ಪ್ರತಿದಿನ ನನ್ನ ಕೋಣೆಗೆ ಮನೆಯಿಂದ ಆಹಾರ ತೆಗೆದುಕೊಂಡು ಹೋಗಿ ಇಬ್ಬರು ಹಂಚಿಕೊಳ್ಳುತ್ತಿದ್ದೆವು. ಆರಂಭದಲ್ಲಿ ಕೆಲವೇ ದಿನ ಆಕೆಯನ್ನು ಬಚ್ಚಿಡಲು ನಿರ್ಧರಿಸಿದ್ದೆ. ಆದರೆ, ಕಾಲಚಕ್ರ ಹಾಗೇ ಉರುಳಿತು ಎಂದಿದ್ದಾನೆ.
ಇದೀಗ ಮಹಿಳೆಯು ಸಹ ಆಕೆಯ ಕುಟುಂಬದೊಂದಿಗೆ ಮಾತನಾಡಿದ್ದು, ಅವರು ಕೂಡ ಸಂತೋಷವಾಗಿದ್ದಾರೆ.
ಘಟನೆಯ ಹಿನ್ನೆಲೆಕೇರಳದ ಪಾಲಕ್ಕಾಡ್ ಜಿಲ್ಲೆಯ ಅರಿಯೂರು ಸಮೀಪದ ಕರೈಕ್ಕಟ್ಟುಪರಂಬು ಗ್ರಾಮದಲ್ಲಿ 2010ರ ಫೆಬ್ರವರಿ 2ರಂದು 19 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿದ್ದಳು. ಮಗಳಿಗಾಗಿ ಈಕೆಯ ಪಾಲಕರು ಹುಡುಕಿದ ಜಾಗವಿಲ್ಲ. ಪೊಲೀಸ್​ ಠಾಣೆಯಲ್ಲಿ ಯುವತಿ ನಾಪತ್ತೆ ಕೇಸ್​ ಕೂಡ ದಾಖಲಾಗಿತ್ತು. ಪೊಲೀಸರು ಹುಡುಕಾಡಿದರೂ ಪತ್ತೆಯಾಗಲಿಲ್ಲ.
ಆದರೆ, ಆ ಯುವತಿ ಅದೇ ಗ್ರಾಮದ ತನ್ನ ಪ್ರಿಯಕರನ ಮನೆಯಲ್ಲೇ ಇದ್ದಳು. ಅಂದು ನಾಪತ್ತೆಯಾಗಿದ್ದ ಯುವತಿಯನ್ನ ಪ್ರಿಯಕರ ತನ್ನ ಮನೆಯ ಕೋಣೆಯೊಂದರಲ್ಲಿ ಅಡಗಿಸಿಟ್ಟಿದ್ದ. ಯುವತಿ ಮತ್ತು ಯುವಕನ ಮನೆ ಕೇವಲ 100 ಮೀಟರ್​ ಅಂತರದಲ್ಲಿದ್ದರೂ ಯಾರೊಬ್ಬರಿಗೂ 10 ವರ್ಷ ಕಾಲ ಗೊತ್ತೇ ಆಗಿಲ್ಲ. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆ ಕೋಣೆಯ ಕಿಟಕಿ ಮೂಲಕ ಯುವತಿಯನ್ನ ಸ್ನಾನಗೃಹ, ಶೌಚಗೃಹಕ್ಕೆ ಕರೆದೊಯ್ಯುತ್ತಿದ್ದ. ತಾನು ಕೋಣೆಯಲ್ಲೇ ಊಟ ಮಾಡುವೆ ಎಂದು ತಟ್ಟೆಗೆ ಊಟ ಹಾಕಿಕೊಂಡು ಹೋಗುತ್ತಿದ್ದವ ತನ್ನ ಪ್ರೇಯಸಿಗೆ ಕೊಡುತ್ತಿದ್ದ. ತನ್ನ ಕೋಣೆಯೊಳಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ಮನೆಯವರು ಏಕೆ? ಏನು ಪ್ರಶ್ನಿಸುವುದನ್ನು ತಪ್ಪಿಸಲು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಹಾಗಾಗಿ ಮನೆಯವರೂ ಅವನತ್ತ ಹೆಚ್ಚು ಸುಳಿಯುತ್ತಿರಲಿಲ್ಲ. ಕೆಲಸಕ್ಕೆ ಹೋದವ ಬೇಗ ಮನೆಗೆ ಬಂದು ಕೋಣೆ ಸೇರಿಕೊಳ್ಳುತ್ತಿದ್ದ. ಪ್ರೇಯಸಿಯೊಂದಿಗೆ ಕಾಲ ಕಳೆಯುತ್ತಿದ್ದ. ಹೀಗೆ ರಹಸ್ಯ ಕೋಣೆಯಲ್ಲಿ ನಡೆಯುತ್ತಿದ್ದ ಇವರಿಬ್ಬರ ಪ್ರೇಮ್​ಕಹಾನಿ ಬಯಲಾಗಿದ್ದೇ ರೋಚಕ.
ಮೂರು ತಿಂಗಳ ಹಿಂದಷ್ಟೆ ಯುವಕ ನಾಪತ್ತೆಯಾಗಿದ್ದ. ಆತಂಕಗೊಂಡ ಪಾಲಕರು ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದರು. ಇತ್ತೀಚಿಗೆ ಯುವಕ ತನ್ನ ಸಹೋದರನ ಕಣ್ಣಿಗೆ ಬಿದ್ದಿದ್ದ. ಪೊಲೀಸರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಗೊತ್ತಾಯ್ತು ಪ್ರೇಯಸಿಯನ್ನ ದಶಕ ಕಾಲ ರಹಸ್ಯವಾಗಿ ಕೋಣೆಯಲ್ಲೇ ಇಟ್ಟದ್ದು ಏಕೆಂದು.
ಒಂದೇ ಗ್ರಾಮದ ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಲು ಜಾತಿ ಅಡ್ಡ ಬರಲಿದೆ, ಮನೆಯವರು ಒಪ್ಪುವುದಿಲ್ಲ. ಎಲ್ಲಿಯಾದರೂ ಓಡಿಹೋಗೋಣ ಅಂದ್ರೆ ಹಣವಿಲ್ಲ ಎಂದು ಯೋಚಿಸಿದ ಪ್ರೇಮಿಗಳು ರಹಸ್ಯ ಕೋಣೆಯಲ್ಲೇ ಬಚ್ಚಿಟ್ಟುಕೊಂಡು ಲವ್​ ಕಹಾನಿ ಮುಂದುವರಿಸಿದ್ದರಂತೆ. ಇತ್ತೀಚಿಗೆ ರಾತ್ರಿ ವೇಳೆ ಆಕೆಯನ್ನ ಮನೆಯಿಂದ ಹೊರ ಕರೆದೊಯ್ದು ಮದುವೆ ಮಾಡಿಕೊಂಡು ವಿಥಾನಸ್ಸೆರಿ ಗ್ರಾಮದಲ್ಲಿ ವಾಸವಿದ್ದ. ಇನ್ನು ರಹಸ್ಯ ಕೋಣೆಯ ಕಿಟಕಿ ಮೂಲಕ ಯುವತಿ ತನ್ನ ತಂದೆ-ತಾಯಿಯನ್ನ ಎರಡ್ಮೂರು ಬಾರಿ ನೋಡಿದ್ದರೂ ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲವಂತೆ… ಇವರಿಬ್ಬರ ಪ್ರೇಮ್​ ಕಹಾನಿ ಕೇಳಿದ ಪೊಲೀಸರು ಅರೆಕ್ಷಣ ದಂಗಾಗಿದ್ದಾರೆ.(ಏಜೆನ್ಸೀಸ್​)
ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
