ವಿಜಯವಾಡ​:ಇಂದು ಯಾವುದೇ ಮದುವೆ ಸಮಾರಂಭ ಹಾಗೂ ಕಾರ್ಯಕ್ರಮಗಳಾಗಲಿ ಹೆಣ್ಣು ಮಕ್ಕಳ ಅಂದವನ್ನು ಹೆಚ್ಚಿಸುವುದೇ ಮೇಕಪ್​. ಹುಡುಗರು ಕೂಡ ಇದರಿಂದ ಹೊರತಾಗಿಲ್ಲ. ಹೀಗಾಗಿಯೇ ಇಂದಿನ ಆಧುನಿಕ ಕಾಲದಲ್ಲಿ ಮೇಕಪ್​ಗೆ ವಿಶೇಷ ಸ್ಥಾನವಿದೆ. ಬಹುತೇಕ ಮಂದಿ ಮೇಕಪ್​ನಿಂದಲೇ ವಿಶೇಷ ಗಮನ ಸೆಳೆಯುತ್ತಾರೆ. ಆದರೆ, ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡದೇ ಮೇಕಪ್ ನೋಡಿ ಮನಸ್ಸು ಕೊಟ್ಟರೆ ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಆಂಧ್ರ ಪ್ರದೇಶದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಮೇಕಪ್​ ಮಾಡಿಕೊಂಡು ತನ್ನ ವಯಸ್ಸನ್ನು ಮರೆಮಾಚಿ ನವ ವಧುವಿನಂತೆ ಮೂರು ಬಾರಿ ಮದುವೆಯಾಗಿ ವಂಚಿಸಿದ ಮಹಿಳೆಯನ್ನು ಬಂಧಿಸಲಾಗಿದೆ. ಈ ಘಟನೆ ಆಂಧ್ರದ ಪುತ್ತೂರಿನಲ್ಲಿ ನಡೆದಿದೆ. ಬಂಧಿತ ಮಹಿಳೆ ವಯಸ್ಸು 50ಕ್ಕೂ ಹೆಚ್ಚಿದೆ. ಮದುವೆಯಾಗಿ ಡಿವೋರ್ಸ್​ ಆದ ಅಥವಾ ತಡವಾಗಿ ಮದುವೆಯಾದ ವ್ಯಕ್ತಿಗಳೇ ಈಕೆಯ ಟಾರ್ಗೆಟ್​. ಮ್ಯಾರೇಜ್​ ಬ್ರೋಕರ್​ನನ್ನು ಸಂಪರ್ಕಿಸಿ, ಅವರಿಂದ ಮದುವೆಯಾಗಲು ಹೆಣ್ಣು ಹುಡುಕುತ್ತಿರುವ ವರರ ಫೋನ್​ ನಂಬರ್ ಪಡೆದುಕೊಳ್ಳುತ್ತಿದ್ದಳು. ಅಲ್ಲದೆ, ತನ್ನ ನಂಬರ್​ ಹಾಗೂ ಫೋಟೋವನ್ನು ನೀಡಿ ಮದುವೆಯಾಗಿ ವಂಚಿಸುತ್ತಿದ್ದಳು.
ವಿವರಣೆಗೆ ಬರುವುದಾದರೆ, 65 ವರ್ಷದ ಇಂದ್ರಾಣಿ ಎಂಬಾಕೆ ತನ್ನ ಮಗ ಹರಿ ಜೊತೆ ತಮಿಳುನಾಡಿನ ತಿರುವಳ್ಳೂರಿನ ಪುದುಪೇಟೆ ಎಂಬಲ್ಲಿ ವಾಸಿಸುತ್ತಿದ್ದಾರೆ. ಮಗ ಹರಿ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾಗಿ ಡಿವೋರ್ಸ್​ ಆಗಿದ್ದು, ಮಗನಿಗೆ ಮರು ಮದುವೆ ಮಾಡಲು ಕಳೆದ ಆರು ವರ್ಷದಿಂದ ಇಂದ್ರಾಣಿ ಪ್ರಯತ್ನಿಸುತ್ತಿದ್ದರು. ಹೀಗಿರುವಾಗ 2021ರಲ್ಲಿ ಇಂದ್ರಾಣಿ ಬ್ರೋಕರ್​ ಮೂಲಕ ತಿರುಪತಿ ಜಿಲ್ಲೆಯ ಪುತ್ತೂರು ಮೂಲದ ಶರಣ್ಯಾ ಎಂಬಾಕೆಯ ಪರಿಚಯವಾಗಿದೆ. ಬಳಿಕ ಫೋನ್​ನಲ್ಲಿ ಮಾತನಾಡಿದ್ದಾರೆ. ತಾನು ಬಡವರ ಮನೆ ಹುಡುಗಿ ಎಂದು ಶರಣ್ಯಾ ಹೇಳಿಕೊಂಡಿದ್ದಾಳೆ.
ಇದಾದ ಬಳಿಕ ಹೆಣ್ಣು ನೋಡಲು ಮನೆಗೆ ಬರುವುದಾಗಿ ಇಂದ್ರಾಣಿ ಹೇಳಿದ್ದಾಳೆ. ಅದಕ್ಕೂ ಮುನ್ನ ಶರಣ್ಯಾ ಬ್ಯೂಟಿ ಪಾರ್ಲರ್​ ಹೋಗಿ ಮೇಕಪ್​ ಮಾಡಿಸಿಕೊಂಡು ಬಂದಿದ್ದಾಳೆ. ಶರಣ್ಯಾ ನೋಡಿ ಮರುಳಾದ ಹರಿ ಆಕೆಯನ್ನು ಮದುವೆಯಾಗಲು ಓಕೆ ಅಂದಿದ್ದಾನೆ. ಬಳಿಕ ಇಂದ್ರಾಣಿ ತಾನೇ ಹಣ ಖರ್ಚು ಮಾಡಿ ಮದುವೆ ಮಾಡಿಕೊಂಡಿದ್ದಾರೆ. ಅಲ್ಲದೆ, ಶರಣ್ಯಾಗೆ ಉಡುಗೊರೆಯಾಗಿ 25 ಸವರನ್​ ಚಿನ್ನವನ್ನು ಸಹ ನೀಡಿದ್ದಾರೆ. ಮದುವೆ ಬಳಿಕ ಅತ್ತೆಯ ಮನೆಗೆ ಶರಣ್ಯಾ ಹೋಗಿದ್ದಾಳೆ. ಕೆಲ ದಿನಗಳವರೆಗೆ ಚೆನ್ನಾಗಿದ್ದ ಶರಣ್ಯಾ, ನಂತರ ತನ್ನ ವರಸೆ ಬದಲಿಸಿದ್ದಾಳೆ. ಗಂಡ ಹರಿಯ ಜತೆ ಜಗಳ ಶುರು ಮಾಡಿದ್ದಾಳೆ. ತಿಂಗಳ ಸಂಬಳವನ್ನು ತನ್ನ ಬಳಿ ತಂದುಕೊಡುವಂತೆ ಪಟ್ಟು ಹಿಡಿದಿದ್ದಾಳೆ. ಅಲ್ಲದೆ, ಬೀರುವಿನ ಕೀ ಕೊಡುವಂತೆ ಕೇಳಿದ್ದಾಳೆ.
ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾಳೆ. ಆಕೆಯ ವರ್ತನೆಯಿಂದ ಹರಿ ಮತ್ತು ಇಂದ್ರಾಣಿ ಅನುಮಾನಗೊಂಡಿದ್ದಾರೆ. ಬಳಿಕ ಆಸ್ತಿ ಬದಲಾಯಿಸುತ್ತೇವೆ ಎಂದು ನಂಬಿಸಿ ಶರಣ್ಯಾಳಿಂದ ಆಧಾರ್​ ಕಾರ್ಡ್​ ಪಡೆದುಕೊಳ್ಳುತ್ತಾರೆ. ಬಳಿಕ ಆಧಾರ್​​ ಕಾರ್ಡಿನಲ್ಲಿ ಹರಿ ಬದಲು ಗಂಡನ ಹೆಸರು ರವಿ ಎಂದು ಇರುವುದನ್ನು ನೋಡಿ ಶಾಕ್​ ಆಗುತ್ತಾರೆ. ಬಳಿಕ ಆಕೆಗೆ ಗೊತ್ತಿಲ್ಲದಂತೆ ಅವಳ ಬಗ್ಗೆ ವಿಚಾರಿಸುತ್ತಾರೆ. ಎಲ್ಲವನ್ನು ತಿಳಿದ ಬಳಿಕ ಪುತ್ತೂರು ಪೊಲೀಸ್​ ಠಾಣೆಯಲ್ಲಿ ಇಂದ್ರಾಣಿ ಮತ್ತು ಹರಿ ದೂರು ದಾಖಲಿಸುತ್ತಾರೆ. ಇದೀಗ ಶರಣ್ಯಾಳನ್ನು ಪೊಲೀಸರು ಬಂಧಿಸಿದ್ದಾರೆ.
ಅಂದಹಾಗೆ ಶರಣ್ಯಾಗೆ ಇರುವುದು ಇದೊಂದೆ ಹೆಸರಲ್ಲ. ಸುಕನ್ಯಾ, ಸಂಧ್ಯಾ ಎಂಬ ಹೆಸರುಗಳಿವೆ. ಬೇರೆ ಬೇರೆ ಹೆಸರುಗಳಿಂದ ವಂಚಿಸಿದ್ದಾಳೆ. ಇದಕ್ಕೂ ಮೊದಲು ತಮ್ಮದೇ ಏರಿಯಾದ ರವಿ ಎಂಬಾತನನ್ನು ಶರಣ್ಯಾ ಮದುವೆ ಆಗಿದ್ದಳು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ, ವೈಮನಸ್ಸಿನಿಂದಾಗಿ ಶರಣ್ಯಾ ತನ್ನ ಗಂಡ ರವಿಯಿಂದ ದೂರವಿದ್ದಾಳೆ. ರವಿ ಬಿಎಸ್​ಎನ್​ಎಲ್​ನ ನಿವೃತ್ತ ನೌಕರ. ಗಂಡನಿಂದ ಬೇರೆಯಾಗಿ ತಾಯಿ ಮನೆಯಲ್ಲಿ ವಾಸಿಸುತ್ತಿದ್ದಳು. ರವಿಯಿಂದ ದೂರಾದ ಬಳಿಕ ಆರ್ಥಿಕ ತೊಂದರೆಗೆ ಸಿಲುಕಿದ್ದರಿಂದ ಅದರಿಂದ ಹೊರ ಬರಲು ಎರಡನೇ ಮದುವೆ ಆಗಲು ನಿರ್ಧರಿಸಿದಳು.
ಕೆಲ ಮ್ಯಾರೇಜ್​ ಬ್ರೋಕರ್ಸ್​ ಸಹಾಯದಿಂದ ಇತ್ತೀಚೆಗೆ ಶರಣ್ಯಾಗೆ ಸುಬ್ರಮಣಿ ಪರಿಚಯವಾಗಿತ್ತು. ಈತ ಜೊಲಾರ್​ ಪೇಟೆಯ ರೈಲ್ವೇ ಗುತ್ತಿಗೆದಾರ. ಸುಕನ್ಯಾ ಹೆಸರಿನಿಂದ ಪರಿಚಯಿಸಿಕೊಂಡಿದ್ದಳು. ಮದುವೆ ಆಗಿ ಕೆಲ ವರ್ಷಗಳವರೆಗೆ ಆತನೊದಿಗೆ ಇದ್ದಳು. ಆ ನಂತರ ಕರೊನಾ ಅವಧಿಯಲ್ಲಿ ತಾಯಿಯನ್ನು ನೋಡಲು ಹೋಗುವುದಾಗಿ ಹೇಳಿ ಪುತ್ತೂರಿನ ಮನೆಗೆ ಮರಳಿದ್ದಳು. ಇದಾದ ಬಳಿಕ ಮತ್ತೆ ಬ್ರೋಕರ್​ ಸಹಾಯದಿಂದ ಇಂದ್ರಾಣಿ ಜೊತೆ ಸಂಪರ್ಕಕ್ಕೆ ಬಂದಿದ್ದಳು. ಅವರ ಬಳಿ ಒಳ್ಳೆಯ ಆಸ್ತಿ ಇದೆ ಎಂದು ಮೊದಲೇ ತಿಳಿದಿದ್ದ ಶರಣ್ಯಾ ತನ್ನ ಪ್ಲಾನ್​ನಂತೆ ಇಂದ್ರಾಣಿಯನ್ನು ಮನೆಗೆ ಕರೆಸಿಕೊಂಡಿದ್ದಳು. ತಾನು ಬ್ಯೂಟಿ ಪಾರ್ಲರ್​ಗೆ ಹೋಗಿ ವಧುವಿನಂತೆ ಕಾಣುವ ರೀತಿ ಚೆನ್ನಾಗಿ ಮೇಕಪ್​ ಮಾಡಿಸಿಕೊಂಡು ಬಂದಿದ್ದಳು. ಇಂದ್ರಾಣಿ ಮತ್ತು ಮಗನನ್ನು ಮರಳು ಮಾಡಿ ಮದುವೆಯು ಆಗಿದ್ದಾಳೆ. ಇದೀಗ ಆಕೆಯ ಬಂಡವಾಳ ಬಯಲಾಗಿದ್ದು, ಶರಣ್ಯಾಳನ್ನು ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಪತ್ನಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದು ನನಗೆ ಗೊತ್ತಿರಲಿಲ್ಲ ಎನ್ನುತ್ತಾರೆ ಎರಡನೇ ಪತಿ ಸುಬ್ರಮಣಿ. ವಂಚಕಿ ತನ್ನ ಮೊದಲ ಪತಿ ರವಿ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿ 10 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.(ಏಜೆನ್ಸೀಸ್​​)
ಹೀಗೂ ಹಣ್ಣು ಮಾರಾಟ ಮಾಡಬಹುದಾ? ಈ ವಿಡಿಯೋ ನೋಡಿ ನಗದೇ ಇರಲು ಟ್ರೈ ಮಾಡಿ…

ವಾರದಲ್ಲಿ 2 ದಿನ ಕೆಲ್ಸ…ಆರೇ ತಿಂಗಳಲ್ಲಿ 27 ಲಕ್ಷ ರೂ. ಗಳಿಕೆ! ಈಕೆಯ ಹಿನ್ನೆಲೆ ಕೇಳಿದ್ರೆ ನೀವು ದಂಗಾಗ್ತೀರಾ

ಜನ ಸಾಮಾನ್ಯರಿಗೆ ಮತ್ತೆ ದರ ಏರಿಕೆ ಬರೆ​: ಗೃಹಬಳಕೆಯ LPG ಸಿಲಿಂಡರ್​ ಬೆಲೆಯಲ್ಲಿ 50 ರೂ. ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
