ಲಖನೌ:ಮದುವೆಯಾದ ಹತ್ತೇ ದಿನದಲ್ಲಿ ಪತ್ನಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ ಪತಿಗೆ ಭಾರೀ ಆಘಾತವೊಂದು ಕಾದಿತ್ತು. ಏಕೆಂದರೆ, ಪತ್ನಿ ಅಷ್ಟರಲ್ಲಾಗಲೇ ಗರ್ಭಿಣಿ ಎಂಬ ವಿಚಾರ ತಿಳಿದು ನವವಿವಾಹಿತ ಅಲ್ಲಿಯೇ ಕುಸಿದುಬಿದ್ದಿದ್ದ. ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಬರೇಲಿ ಪೋರ್ಟ್​ನ ಸರೈ ಏರಿಯಾದ ದಂಪತಿ ಮದುವೆಯಾಗಿ ಕೇವಲ ಹತ್ತು ದಿನಗಳಾಗಿತ್ತಷ್ಟೆ. ಇಬ್ಬರು ಕೂಡ ಒಂದೇ ಏರಿಯಾದವರು. ಹೊಸದಾಗಿ ಮದುವೆಯಾದ ವಿವಾಹಿತನ ಮುಖದಲ್ಲಿ ಇನ್ನು ಮದುವೆಯ ಕಳೆಯೇ ಹೋಗಿರಲಿಲ್ಲ. ಇದ್ದಕ್ಕಿದ್ದಂತೆ ಪತ್ನಿ ಹೊಟ್ಟೆ ನೋವಿನಿಂದ ನರಳುವುದನ್ನು ನೋಡಿ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾನೆ. ಆಕೆಯನ್ನು ಪರೀಕ್ಷಿಸುವ ವೈದ್ಯರು ನೀವು ಅಪ್ಪ ಆಗುತ್ತಿದ್ದೀರಾ, ನಿಮ್ಮ ಪತ್ನಿ ಗರ್ಭಿಣಿ ಎಂದು ಹೇಳಿದ ಕೂಡಲೇ ಆತನಿಗೆ ಬರ ಸಿಡಿಲು ಬಡಿದಂತಾಗುತ್ತದೆ.
ಇದಾದ ಬಳಿಕ ಪೊಲೀಸ್​ ಠಾಣೆಗೆ ತೆರಳುವ ನವವಿವಾಹಿತ ಪತ್ನಿ ಮತ್ತು ಆಕೆಯ ಕುಟುಂಬದ ವಿರುದ್ಧ ದೂರು ದಾಖಲಿಸುತ್ತಾನೆ. ಮದುವೆಗು ಮುನ್ನ ತಾನು ಗರ್ಭಿಣಿ ಅಂತಾ ಗೊತ್ತಿದ್ದರೂ, ಅದನ್ನು ಮುಚ್ಚಿಟ್ಟು ಮದುವೆ ಆಗಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತ ಪತಿ ಉಲ್ಲೇಖಿಸಿದ್ದಾನೆ. ಆದರೆ, ಇದನ್ನು ನಿರಾಕರಿಸಿದ ವಿವಾಹಿತೆಯ ತಂದೆ, ಇಬ್ಬರಿಗೂ ಮೊದಲೇ ಪರಿಚಯವಿತ್ತು. ಆದರೆ, ಅದನ್ನು ವಿವಾಹಿತ ನಿರಾಕರಿಸುತ್ತಿದ್ದಾನೆಂದು ಆರೋಪ ಮಾಡಿದ್ದಾರೆ.
ವಿವಾಹಿತೆಗೆ ಆಕೆಯ ಸಂಬಂಧಿ ಯುವಕನ ಜತೆಯಲ್ಲಿ ಸಂಬಂಧ ಇತ್ತು ಮತ್ತು ಆತನನ್ನು ಮದುವೆ ಆಗಬೇಕೆಂದು ಬಯಸಿದ್ದಳು. ಆದರೆ, ಆಕೆಯ ಕುಟುಂಬ ಸುಳ್ಳು ಹೇಳಿ ಆಕೆಯ ಮದುವೆ ಮಾಡಿದ್ದಾರೆಂದು ವಿವಾಹಿತನ ಕುಟುಂಬ ದೂರಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಮತ್ತೊಮ್ಮೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.(ಏಜೆನ್ಸೀಸ್​)
ನಾನು ಕಲಿತ ಮೊದಲ ಪಾಠ.. ಸಮಂತಾ ಡಿವೋರ್ಸ್ ಬೆನ್ನಲ್ಲೇ ಮಾಜಿ ಲವರ್​ ಸಿದ್ಧಾರ್ಥ್​ ಟ್ವೀಟ್​ ವೈರಲ್​

ನಾಗಸಮಂತಾ ಬೇರೆಯಾಗಲು ವಿಚ್ಛೇದನ ತಜ್ಞ ಬಾಲಿವುಡ್​ ಸೂಪರ್​ಸ್ಟಾರ್​ ಕಾರಣ ಅಂದ್ರು ಕಂಗನಾ..!​

ಡಿವೋರ್ಸ್​ ಬೆನ್ನಲ್ಲೇ ಟ್ವೀಟ್​ ಮೂಲಕ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ ನಟಿ ಸಮಂತಾ..!

ಮದ್ವೆ ಎಂಬುದು ಸಾವು, ಡಿವೋರ್ಸ್​​ ಪುನರ್ಜನ್ಮ: ನಾಗಸಮಂತಾ ವಿಚ್ಛೇದನ ಬೆನ್ನಲ್ಲೇ ಆರ್​ಜಿವಿ ಟ್ವೀಟ್​

ಸಮಂತಾ-ನಾಗಚೈತನ್ಯ ಡಿವೋರ್ಸ್​ ಹಿಂದಿನ ಪ್ರಮುಖ ಕಾರಣ ಬಯಲು: ಇಬ್ಬರ ನಡುವೆ ನಡೆದಿತ್ತು ವಾಗ್ವಾದ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − one =
Remember me
