ಗುಂಟೂರು:ಮದುವೆಯಾದ ಕೇವಲ 16 ದಿನಗಳಲ್ಲೇ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಚೈತನ್ಯ (19) ಮೃತ ನವವಿವಾಹಿತೆ. ಈಕೆ ಗುಂಟೂರಿನ ರೆಪಲ್ಲಿ ವಲಯದ ಎಡುಪಲ್ಲಿ ಗ್ರಾಮದ ನಿವಾಸಿ. 16 ದಿನಗಳ ಹಿಂದಷ್ಟೇ ಗುಂಟೂರು ಗ್ರಾಮೀಣ ವಲಯದ ದಾಸರಿಪಲೇಮ್​ ಗ್ರಾಮದ ಕೋಟಿ ಸಂಬಿರೆಡ್ಡಿ ಎಂಬಾತನೊಂದಿಗೆ ಸಪ್ತಪದಿ ತುಳಿದಿದ್ದಳು. ಸಂಬಿರೆಡ್ಡಿ ಹೈದರಾಬಾದ್​ ಸಾಫ್ಟ್​ವೇರ್​ ಕಂಪನಿ ಒಂದರ ಉದ್ಯೋಗಿ. ಪ್ರಸ್ತುತ ವರ್ಕ್​ ಫ್ರಮ್​ ಹೋಮ್​ ಮಾಡುತ್ತಿದ್ದ.
ಹಬ್ಬದ ಹಿನ್ನೆಲೆಯಲ್ಲಿ 16 ದಿನಗಳ ಕಾಲ ತವರು ಮನೆಯಲ್ಲಿದ್ದ ಚೈತನ್ಯಳನ್ನು ಎರಡು ದಿನಗಳ ಹಿಂದೆ ದಾಸರಿಪಲೇಮ್​ ಗ್ರಾಮದ ಅತ್ತೆಯ ಮನೆಗೆ ಬಿಟ್ಟು ಬಂದಿದ್ದರು. ಒಂದು ದಿನ ಮಗಳ ಜತೆಯಲ್ಲೇ ಉಳಿದಿದ್ದ ತಾಯಿ ಸೋಮವಾರ ಮಧ್ಯಾಹ್ನ ತಮ್ಮ ಮನೆಗೆ ಹಿಂತಿರುಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಟಿವಿ ನೋಡುತ್ತಾ ಕುಳಿತಿದ್ದವಳು ಎದ್ದು ಬಾತ್​ರೂಮ್​ಗೆ ತೆರಳಿದ್ದಾಳೆ. ಸಾಕಷ್ಟು ಸಮಯದವರೆಗೂ ಆಕೆ ವಾಪಸ್​ ಬರದಿದ್ದನ್ನು ನೋಡಿ ಅತ್ತೆ ಮನೆಯವರು ಹೋಗಿ ಬಾತ್​ರೂಮ್​ ಬಾಗಿಲು ತೆರೆದು ನೋಡಿದಾಗ ಆಕೆ ಬಾತ್​ರೂಮ್​ ಕಿಟಕಿಗೆ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದ್ದನ್ನು ವೈದ್ಯರು ದೃಢಪಡಿಸಿದರು.
ಮಗಳನ್ನು ಕಳೆದುಕೊಂಡು ಕುಟುಂಬದಲ್ಲಿ ದುಃಖ ಮಡುಗಟ್ಟಿದ್ದು, ಚೈತನ್ಯಳ ಗಂಡ ಮತ್ತು ಅತ್ತೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಅದನ್ನು ಸಹಿಸದೇ ಚೈತನ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಆಕೆಯ ಪಾಲಕರು ಆರೋಪ ಮಾಡಿದ್ದಾರೆ. ಈ ಸಂಬಂಧ ದೂರು ಸಹ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ಡಿವೋರ್ಸ್​ ಬಳಿಕ ನಟಿ ಅಮಲಾ ಪೌಲ್​ ಹಾದಿಯನ್ನೇ ಅನುಸರಿಸಿದ ನಟಿ ಸಮಂತಾ..!

ಕೋಳಿ ಮೊದಲೊ? ಮೊಟ್ಟೆ ಮೊದಲೊ? ಸುದೀರ್ಘ ಸಂಶೋಧನೆ ನಂತರ ಅಂತೂ ಸಂಶೋಧಕರಿಗೆ ಸಿಕ್ಕಿದೆ ಈ ಉತ್ತರ….

‘20 ವರ್ಷದಲ್ಲಿ ರಾಜ್‌ ಕುಟುಂಬದಲ್ಲೇ ಪುನೀತ್‌ ಹುಟ್ತಾನೆ… ನಾನು ಇರ್ತೇನೋ ಗೊತ್ತಿಲ್ಲ.. ಆದ್ರೆ ಈ ಮಾತು ಬರೆದಿಟ್ಟುಕೊಳ್ಳಿ…’

ಬಿಟ್​ಕಾಯಿನ್​ ಹಾವಲ್ಲ, ಕಾಂಗ್ರೆಸ್​ನವರು ಎರಡು ತಲೆಯ ಮಣ್ಣುಮುಕ್ಕ ಹಾವು: ರೇಣುಕಾಚಾರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
