ಅಹಮದಾಬಾದ್​:ಏಳು ತಿಂಗಳ ಹಿಂದೆ ಯುವತಿಯೊಬ್ಬಳನ್ನು ಪುಸಲಾಯಿಸಿ ಆಕೆಯ ಜತೆ ಎಸ್ಕೇಪ್​ ಆಗಿದ್ದ ವಿವಾಹಿತನಿಗೆ ಗುಜರಾತ್​ ಹೈಕೋರ್ಟ್​ ಶಾಕ್​ ನೀಡಿದೆ. ಯುವತಿಯನ್ನು ಹುಡುಕಲು ಸರ್ಕಾರ ವೆಚ್ಚ ಮಾಡಿದ ಅರ್ಧದಷ್ಟು ಹಣವನ್ನು ಬರಿಸುವಂತೆ ಆರೋಪಿಗೆ ಕೋರ್ಟ್​ ಆದೇಶಿಸಿದೆ.
ಆರೋಪಿ ರಘಭಾಯ್​ ಪರ್ಮಾರ್​ ಜತೆ ಓಡಿ ಹೋಗಿದ್ದ 20 ವರ್ಷದ ಯುವತಿಯನ್ನು ಹುಡುಕಲು ಕಳೆದ ಏಳು ತಿಂಗಳಿಂದ ಪೊಲೀಸರು ಪಡಬಾರದ ಪಾಡನ್ನು ಪಟ್ಟಿದ್ದಾರೆ. 2021ರ ಮೇ ತಿಂಗಳಲ್ಲಿ ಆರೋಪಿ ಪಾರ್ಮರ್​, ಯುವತಿ ಜತೆ ರಾಜ್​ಕೋಟ್​ ನಗರದಿಂದ ಎಸ್ಕೇಪ್​ ಆಗಿದ್ದ. ಮಗಳನ್ನು ಹುಡುಕಾಡಲಾಗದೇ ಯುವತಿಯ ಪಾಲಕರು ಗುಜರಾತ್​ ಹೈಕೋರ್ಟ್​ ಮೊರೆ ಹೋಗಿದ್ದರು. ಬಳಿಕ ಕೋರ್ಟ್​ ಪೊಲೀಸರಿಗೆ ಆದೇಶ ಹೊರಡಿಸಿತ್ತು.
ಕಳೆದ ಏಳು ತಿಂಗಳಿಂದ ಇಬ್ಬರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು. ಏಳು ತಿಂಗಳ ಬಳಿಕ ಕೊನೆಗೂ ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು ಮರಳಿ ಮನೆಗೆ ಕರೆತಂದಿದ್ದಾರೆ. ಆರೋಪಿ ಪಾರ್ಮರ್​ ಈಗಾಗಲೇ ಮದುವೆ ಆಗಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಕಳೆದ ಏಳು ತಿಂಗಳಿಂದ ಇಬ್ಬರನ್ನು ಹುಡುಕಲು 17,170 ಗಂಟೆಯನ್ನು ವ್ಯಯಿಸಿದ್ದೇವೆ ಮತ್ತು 19 ದಿನಗಳ ವಿಚಾರಣೆ ನಡೆಸಿದ್ದೇವೆ. ಇದಕ್ಕಾಗಿ 42 ಸಾವಿರ ರೂಪಾಯಿ ಹಣ ವೆಚ್ಚವಾಗಿದೆ ಎಂದು ರಾಜ್​ಕೋಟ್​ ಪೊಲೀಸರು ಹೈಕೋರ್ಟ್​ಗೆ ತಿಳಿಸಿದ್ದಾರೆ. ಅಲ್ಲದೆ, ಹೆಚ್ಚುವರಿಯಾಗಿ ಆರೋಪಿಯನ್ನು ನ್ಯಾಯಾಲಯದ ಮುಂದೆ ಭೌತಿಕವಾಗಿ ಹಾಜರಾಗುವಂತೆ ಮಾಡಿದ ವೆಚ್ಚವು 75,000 ರೂ. ಆಗಿದ್ದು, ಇಡೀ ಪ್ರಕರಣದಲ್ಲಿ ಮಹಿಳೆಯನ್ನು ಮರಳಿ ಅವರ ಕುಟುಂಬಕ್ಕೆ ಒಪ್ಪಿಸಲು ವೆಚ್ಚವಾದ ಒಟ್ಟು ಮೊತ್ತ 1,17,500 ರೂಪಾಯಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಖರ್ಚಾದ ಹಣವನ್ನು ಆರೋಪಿ ಪಾರ್ಮರ್​ನಿಂದ ವಸೂಲಿ ಮಾಡಲು ನ್ಯಾಯಾಲಯದ ನಿರ್ಧರಿಸಿದಲ್ಲದೆ, ಮದುವೆಯಾಗದೇ ಮಹಿಳೆಯನ್ನು ಶೋಷಿಸಿದ್ದಕ್ಕೆ ಆರೋಪಿಗೆ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿದೆ.
ಇನ್ನು ಮಗಳ ಹುಡುಕಾಟಕ್ಕೆ ಕುಟುಂಬವೂ ಕೂಡ 8.06 ಲಕ್ಷ ರೂಪಾಯಿ ಹಣವನ್ನು ವ್ಯಯಿಸಿರುವುದಾಗಿ ಯುವತಿ ತಂದೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ ಸೂಕ್ತವಾದ ಸ್ಥಳೀಯ ನ್ಯಾಯಾಲಯದಲ್ಲಿ ತಮಗಾದ ಹಾನಿಯ ಬಗ್ಗೆ ವಾದಿಸಿ ಪರಿಹಾರ ಕಂಡುಕೊಳ್ಳಲು ಅನುಮತಿ ನೀಡಿದೆ. ಶೇ. 50ರಷ್ಟು ಅಂದರೆ, 55 ಸಾವಿರ ಹಣವನ್ನು ಬರಿಸುವಂತೆ ಆರೋಪಿಗೆ ನ್ಯಾಯಾಲಯ ಆದೇಶ ನೀಡಿದೆ.(ಏಜೆನ್ಸೀಸ್​)
ಕೆಜಿಎಫ್​-2 ಕುರಿತ ಸರಣಿ ಟ್ವೀಟ್​ ಡಿಲೀಟ್​ ಮಾಡಿ ಉಲ್ಟಾ ಹೊಡೆದ ವಿಮರ್ಶಕ ಯಶ್​​ ಬಗ್ಗೆ ಹೇಳಿದ್ದಿಷ್ಟು…

ಗ್ರಾಮಕ್ಕೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕೇಳಿದ್ದಕ್ಕೆ ಯುವಕನ ಕಪಾಳಕ್ಕೆ ಬಾರಿಸಿದ ಕೈ​ ಶಾಸಕ

ನಾಗಚೈತನ್ಯ 2ನೇ ಮದ್ವೆಗೆ ರೆಡಿಯಾಗಿರುವ ಸುದ್ದಿ ನಿಜವೋ? ವದಂತಿಯೋ?…ಇಲ್ಲಿದೆ ಅಸಲಿ ವಿಚಾರ

ಎರಡು ವರ್ಷ ಅಲೆದ್ರೂ ಸಿಗದ ಕೆಲಸ: ಟೀ ಮಾರಾಟಕ್ಕಿಳಿದ ಅರ್ಥಶಾಸ್ತ್ರ ಪದವೀಧರೆಯ ಮನಕಲಕುವ ಕತೆಯಿದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
