ಲಖನೌ:ಉತ್ತರ ಪ್ರದೇಶದ ಮಥುರಾ ಮೂಲದ ಅರ್ಚಕರು ಬಾಲಿವುಡ್​ ಹಾಟ್​ ಬ್ಯೂಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಅವರ ಇತ್ತೀಚಿನ ವಿಡಿಯೋ ಆಲ್ಬಮ್​ ಅನ್ನು ಬ್ಯಾನ್​ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಮಧುಬನ ಮೇ ರಾಧಿಕಾ ನಾಚೇ ಎಂಬ ಹಾಡಿನಲ್ಲಿ ಸನ್ನಿ ಲಿಯೋನ್​ ಅಶ್ಲೀಲ ಡಾನ್ಸ್​ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಈ ಕೂಡಲೇ ವಿಡಿಯೋ ಸಾಂಗ್​ ಅನ್ನು ಬ್ಯಾನ್​ ಮಾಡಬೇಕು ಎಂದು ಮಥುರಾ ಅರ್ಚಕರು ಒತ್ತಾಯಿಸಿದ್ದಾರೆ.
ಈ ಹಾಡನ್ನು ಮೂಲತಃ ಮೊಹಮ್ಮದ್ ರಫಿ ಅವರು 1960ರ ಕೊಹಿನೂರ್ ಚಲನಚಿತ್ರಕ್ಕಾಗಿ ಹಾಡಿದ್ದರು. ವಿಡಿಯೋ ಆಲ್ಬಂ ಬ್ಯಾನ್​ ಮಾಡಿ, ನಟಿಯ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ, ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಬೃಂದಾವನದ ಸಂತ ನಾವಲ್​ ಗಿರಿ ಮಹಾರಾಜ್​ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸನ್ನಿ ಲಿಯೋನ್​, ದೃಶ್ಯವನ್ನು ಹಿಂಪಡೆದು ಸಾರ್ವಜನಿಕರ ಕ್ಷಮೆಯಾಚಿಸದಿದ್ದರೆ, ಆಕೆ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ ಎಂದಿದ್ದಾರೆ.
ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಾಠಕ್ ಕೂಡ ಸನ್ನಿ ಲಿಯೋನ್ ಡಾನ್ಸ್ ವಿಡಿಯೋ ವಿರುದ್ಧ ಕಿಡಿಕಾರಿದ್ದಾರೆ. ಅವಹೇಳನಕಾರಿ ರೀತಿಯಲ್ಲಿ ಹಾಡನ್ನು ಪ್ರಸ್ತುತಪಡಿಸುವ ಮೂಲಕ ಬ್ರಿಜ್​ಭೂಮಿಯ ಪ್ರತಿಷ್ಠೆಯನ್ನು ಕೆಡಿಸಿದ್ದಾರೆ ಎಂದರು.
ಸರೆಗಮ ಮ್ಯೂಸಿಕ್ ಬುಧವಾರವಷ್ಟೇ ತನ್ನ ಇತ್ತೀಚಿನ ಮಧುಬನ್ ಎಂಬ ಶೀರ್ಷಿಕೆಯ ಸಂಗೀತ ವೀಡಿಯೊವನ್ನು ಬಿಡುಗಡೆ ಮಾಡಿತು, ಇದರಲ್ಲಿ ಕನಿಕಾ ಕಪೂರ್ ಮತ್ತು ಅರಿಂದಮ್ ಚಕ್ರವರ್ತಿ ಹಾಡಿರುವ ಪಾರ್ಟಿ ಸಾಂಗ್​ನಲ್ಲಿ ಸನ್ನಿ ಲಿಯೋನ್ ಸೊಂಟ ಬಳುಕಿಸಿದ್ದಾರೆ. ಈ ಹಾಡು ಕೃಷ್ಣ ಮತ್ತು ರಾಧಾ ನಡುವಿನ ಪ್ರೇಮದ ವಿಷಯದ ಮೇಲೆ ರಚನೆಯಾಗಿರುವುದರಿಂದ ನೆಟ್ಟಿಗರು ಕೂಡ ಹಿಂದು ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.(ಏಜೆನ್ಸೀಸ್​)

ದುಡ್ಡು ಇಲ್ಲ, ಮನೆಯೂ ಸಿಗಲಿಲ್ಲ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ನಟ, ನಿರ್ದೇಶಕ ನಾಗಶೇಖರ್​

ಬೂಸ್ಟರ್ ಡೋಸ್​ಗೆ ಸಿದ್ಧತೆ; 1,200 ಜನರ ಮೇಲೆ ಮೂರನೇ ಡೋಸ್ ಪ್ರಾಯೋಗಿಕ ಪರೀಕ್ಷೆ

ಪಾರ್ಟಿ ಇಲ್ಲ ಪುಷ್ಪ! ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ರ ಪುಷ್ಪ ಚಿತ್ರತಂಡಕ್ಕೆ ಶಾಕ್ ಕೊಟ್ಟ​ ಆಂಧ್ರ ಸರ್ಕಾರ

ಪ್ಯಾನ್​ ಇಂಡಿಯಾ ಸಿನಿಮಾಗಳ ಹಣಗಳಿಕೆಯ ವರದಿ ಬಗ್ಗೆ ಗಂಭೀರ ಆರೋಪ ಮಾಡಿದ ನಟ ಸಿದ್ಧಾರ್ಥ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 6 =
Remember me
