ಮಹೇಶ್ವರಂ:ನಿಶ್ಚಿತಾರ್ಥ ರದ್ದಾಗಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ಬೆಳಗ್ಗೆ ತೆಲಂಗಾಣದ ಮಹೇಶ್ವರಂ ಮಂಡಲದ ಪೆಂಡ್ಯಾಲಾ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ಪ್ರಗತಿ ಎಂದು ಗುರುತಿಸಲಾಗಿದೆ. ಈಕೆ ಡಿಗ್ರಿ ಓದುತ್ತಿದ್ದಳು. ಅಮೀರ್​ಪೇಟೆ ಗ್ರಾಮದ ಕಾರ್ತಿಕ್​ ಎಂಬುವನ ಜತೆಯಲ್ಲಿ ನಿಶ್ಚಿತಾರ್ಥವಾಗಿ, ಮದುವೆ ಆಗಬೇಕಿತ್ತು. ಗುರುವಾರ ನಿಶ್ಚಿತಾರ್ಥ ನೆರವೇರಬೇಕಿತ್ತು. ಆದರೆ, ಭಾನುವಾರವೇ ಕಾರ್ತಿಕ್​ ನಿಶ್ಚಿತಾರ್ಥ ರದ್ದು ಮಾಡಿದ್ದ. ಇದರಿಂದ ತೀವ್ರ ನೊಂದಿದ್ದ ಪ್ರಗತಿ ಮಂಗಳವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿನ ಹಾದಿ ಹಿಡಿದಿದ್ದಾಳೆ.
ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಪ್ರಗತಿ ತಾಯಿ, ಮಗಳನ್ನು ನೋಡಲು ಹೋದಾಗ ಫ್ಯಾನಿನಲ್ಲಿ ನೇತಾಡುತ್ತಿದ್ದ ಆಕೆಯ ಶವವನ್ನು ನೋಡಿ ಕುಸಿದುಬಿದ್ದರು. ಇತ್ತ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಗತಿಯನ್ನು ಮೊಬೈಲ್​ ಫೋನ್​ ವಶಕ್ಕೆ ಪಡೆದಿರುವ ಪೊಲೀಸರು ಸಾವಿಗೆ ನಿಶ್ಚಿತಾರ್ಥ ಬಿಟ್ಟು ಬೇರೆ ಯಾವುದಾದರೂ ಕಾರಣ ಇದೆಯಾ ಎಂದು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಹೈದರಾಬಾದ್​ನ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ. ನಿಶ್ಚಿತಾರ್ಥ ಏಕೆ ರದ್ದಾಯಿತು ಎಂಬುದಕ್ಕೆ ಇನ್ನು ಯಾವುದೇ ಸ್ಪಷ್ಟನೆ ದೊರೆತಿಲ್ಲ. ಪ್ರಕರಣ ದಾಖಲಾಗಿದ್ದು, ಕಾರ್ತಿಕ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ, ಕಾರಣ ತಿಳಿಯಲಿದೆ.(ಏಜೆನ್ಸೀಸ್​)
ಗಂಡ ಸತ್ತ ಬೆನ್ನಲ್ಲೇ ಯುವಕನ ಜತೆ ಸರಸವಾಡುವಾಗ ಸಿಕ್ಕಿಬಿದ್ದ ಮಹಿಳೆ: ಬಯಲಾಯ್ತು ಭಯಾನಕ ರಹಸ್ಯ..!
ಜಾಸ್ತಿ ಹಣ ಕೊಟ್ಟರೆ ಓಕೆ! ಸೌತ್​ ಬ್ಯೂಟಿ ಅಮಲಾ ಪೌಲ್ ಕುರಿತ ಬಿಸಿ ಬಿಸಿ ಸುದ್ದಿ ಇದು​
ಅ.24ಕ್ಕೆ ಪೊಲೀಸ್​ ಪೇದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ: ಹಾಲ್​ಟಿಕೆಟ್​ ಇಲ್ಲದಿದ್ದರೂ ಪರೀಕ್ಷೆಗೆ ಅವಕಾಶ
ಇಲ್ಲಿ ಎಲ್ಲರೂ ಒಂದೇ… ಯೂಟ್ಯೂಬರ್ಸ್​ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಸಮಂತಾಗೆ ಬಿಗ್​ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
