ಶ್ರೀನಗರ:ಟಿ20 ವಿಶ್ವಕಪ್​ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆಲುವು ದಾಖಲಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಪಾಕ್​ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿರುವ ಬಗ್ಗೆ ಈಗಾಗಲೇ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆತಂಕಕಾರಿ ವಿಚಾರವೇನೆಂದರೆ, ಪಾಕ್​ ಘೋಷಣೆಗೆ ವಿರೋಧಿಸಿದ ವಿದ್ಯಾರ್ಥಿನಿಗೆ ಇದೀಗ ಬೆದರಿಕೆ ಕರೆಗಳು ಬರುತ್ತಿರುವುದಾಗಿ ತಿಳಿದುಬಂದಿದೆ.
ಶ್ರೀನಗರದ ಸೌರದಲ್ಲಿರುವ ಸ್ಕಿಮ್ಸ್​ (SKIMS) ಕಾಲೇಜಿನ ಮೆಡಿಕಲ್​ ವಿದ್ಯಾರ್ಥಿನಿ ಅನನ್ಯ ಜಮ್ವಾಲ್​ಗೆ ಬೆದರಿಕೆ ಕರೆಗಳು ಬರುತ್ತಿವೆ. ಅಬ್ದುಲ್​ ಘಾಜಿ ಎಂಬಾತ ತನ್ನ ಟ್ವಿಟರ್​ನಲ್ಲಿ ಅನನ್ಯರನ್ನು “ಅಪ​ರಾಧಿ” ಹಾಗೂ “ಪೊಲೀಸ್ ಮಾಹಿತಿದಾರ”​ ಎಂದು ಜರಿದಿದ್ದಾನೆ. ಪಾಕ್​ ಪರ ಘೋಷಣೆ ಕೂಗಿದ ಮೆಡಿಕಲ್​​ ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿ ಎಫ್​ಐಆರ್​ ದಾಖಲಾಗಲು ಅನನ್ಯಳೇ ಕಾರಣ ಎಂದು ಟ್ವಿಟರ್​ನಲ್ಲಿ ಅಬ್ದುಲ್​ ಘಾಜಿ ಆರೋಪಿಸಿದ್ದಾನೆ.
ಪಾಕ್​ ಗೆಲುವು ದಾಖಲಿಸಿದ ಬೆನ್ನಲ್ಲೇ ಕೆಲವು ವಿದ್ಯಾರ್ಥಿಗಳು ಪಾಕ್​ ಪರ ಘೋಷಣೆ ಕೂಗಿರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್​​ಐಆರ್​ ಹಿಂದೆ ಅನನ್ಯ ಕೈವಾಡ ಇದೆ. ಆಕೆ ಆರ್​ಎಸ್​ಎಸ್​ ಸದಸ್ಯೆ ಮತ್ತು ಕಾರ್ಯಕರ್ತೆ ಎಂದು ಘಾಜಿ ಸರಣಿ ಟ್ವೀಟ್​ ಮೂಲಕ ಆರೋಪಿಸಿದ್ದಾರೆ.
ತಮ್ಮ ಮೇಲಿನ ಆರೋಪವನ್ನು ಅನನ್ಯ ತಿರಸ್ಕರಿಸಿದ್ದಾರೆ. ದೇಶದ್ರೋಹಿಗಳಿಗೆ ಬೆಂಬಲ ನೀಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅದಾದ ಬಳಿಕ ನನಗೆ ಕಿರುಕುಳ ನೀಡಲು ಆರಂಭಿಸಿದರು. ನನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.
ಈಗಾಗಲೇ ಎಫ್​ಐಆರ್​ ದಾಖಲಾಗಿದ್ದು, ಅದರಡಿಯಲ್ಲಿ ಸಾಂಬಾ ಜಿಲ್ಲೆಯಲ್ಲಿ 6 ಮಂದಿಯನ್ನು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ಇನ್ನು ಪಾಕ್​ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸರಿಯಾದ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.(ಏಜೆನ್ಸೀಸ್​)
ಹೆಣ್ಣು ಮಕ್ಕಳನ್ನು ಹೆತ್ತು ಮದುವೆಯ ಬಗ್ಗೆ ಚಿಂತಿಸುವ ಪಾಲಕರಿಗೆ ಸಮಂತಾ ಕೊಟ್ಟ ಸಲಹೆ ಹೀಗಿದೆ…

ಎಂದಿಗೂ ಈ ಒಂದು ಕೆಲಸ ಮಾಡದಂತೆ ಮಕ್ಕಳಿಗೆ ಯಾವಾಗಲೂ ಹೇಳ್ತಾರಂತೆ ನಾಗಾರ್ಜುನ..!

ರವಿತೇಜಗೆ ಶ್ರೀಲೀಲಾ ನಾಯಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
