ರಂಗಾರೆಡ್ಡಿ:ಮೊಬೈಲ್​ನಲ್ಲಿ ಗೇಮ್​ ಆಡಬೇಡ ಎಂದು ತಂದೆ ಗದರಿದ್ದಕ್ಕೆ ಮನನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್​ಪೇಟ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯರ ಪ್ರಕಾರ ಬಾಲಾಪುರ್​ ಮೂಲದ ವೇಲದುರ್ತಿ ಮನೋಹರಚಾರಿ ಮತ್ತು ಲಾವಣ್ಯ ದಂಪತಿ ಮೀರ್​ಪೇಟ್​ನ ಸರ್ವೋದಯ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ನೆಲೆಸಿದ್ದರು. ದಂಪತಿಗೆ ಕೌಶಿಕಿ (17) ಮತ್ತು ಅನುಶ್ರೀ ಎಂಬ ಇಬ್ಬರು ಹೆಣ್ಣ ಮಕ್ಕಳು ಮತ್ತು ರೇವಂತ್​ ಹೆಸರಿನ ಒಬ್ಬ ಮಗನಿದ್ದಾನೆ.
ಹಿರಿಯ ಮಗಳು ಕೌಶಿಕಿ ದ್ವಿತೀಯ ಪಿಯು ವಿದ್ಯಾರ್ಥಿನಿ ಆಗಿದ್ದಳು. ಮೊಬೈಲ್​ ಗೀಳಿಗೆ ಬಿದ್ದಿದ್ದ ಕೌಶಿಕಿ ಅಪ್ಪನ ಮೊಬೈಲ್​ ತೆಗೆದುಕೊಂಡು ಯಾವಾಗಲೂ ಗೇಮ್​ ಆಡುತ್ತಿದ್ದಳು. ಹೀಗೆ ಗೇಮ್​ ಆಡುತ್ತಿರುವಾಗ ಭಾನುವಾರ ರಾತ್ರಿ ಕೌಶಿಕಿ ತಂದೆ ಆಕೆಯನ್ನು ಬೈದು ಮೊಬೈಲ್​ ಕಿತ್ತುಕೊಂಡಿದ್ದರು.
ಅಪ್ಪ ಬೈದಿದ್ದರಿಂದ ಬೇಸರಗೊಂಡಿದ್ದ ಕೌಶಿಕಿ ಅದೇ ದಿನ ರಾತ್ರಿ ಮಲಗುವುದಾಗಿ ಹೇಳಿ ಬೆಡ್​ರೂಮ್​ಗೆ ತೆರಳಿ ಲಾಕ್​ ಹಾಕಿಕೊಂಡಿದ್ದಾಳೆ. ಅದೇ ಕೋಣೆಯಲ್ಲಿ ಆಕೆಯ ಸಹೋದರಿ ಕೂಡ ಮಲಗಿದ್ದಳು. ಇದರ ನಡುವೆ ತಾಯಿ ಕಿಟಕಿ ಬಾಗಿಲು ಬಡಿದಿದ್ದಾಳೆ. ಇದರಿಂದ ಎಚ್ಚರಗೊಂಡ ಸಹೋದರಿ ಎದ್ದು ನೋಡಿದಾಗ ಅಕ್ಕ ತನ್ನ ದುಪ್ಪಟ್ಟದಿಂದ ನೇಣು ಹಾಕಿಕೊಂಡಿರುವುದನ್ನು ನೋಡಿ ಜೋರಾಗಿ ಕಿರುಚುಕೊಂಡಿದ್ದಾಳೆ.
ತಕ್ಷಣ ಕೌಶಿಕಿಯನ್ನು ಸ್ಥಳೀಯರ ಸಹಾಯದಿಂದ ಒಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಕೌಶಿಕಿ ಕೊನೆಯುಸಿರೆಳೆದಿದ್ದಾಳೆ. ಸದ್ಯ ಮೀರ್​ಪೇಟ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ನನ್ನ ಆಸೆ ಪೂರೈಸು ಇಲ್ದಿದ್ರೆ… ಕರೆ ಮಾಡಿದ ವಿವಾಹಿತನ ಮಾತು ಕೇಳಿ ಅಪ್ರಾಪ್ತೆ ನರ್ಸ್​ ದುರಂತ ಸಾವು

ಪಾರ್ಟಿಯಲ್ಲಿ ಆಡಿದ ಆ ಒಂದು ಮಾತು, ಸಮಂತಾರ ನಿರ್ಧಾರವೇ ಡಿವೋರ್ಸ್​ಗೆ ಕಾರಣವಾಯ್ತಾ? ಇಬ್ಬರ ಅಹಂ ಕತೆಯಿದು..?!

ನನ್ನ ಹಾಸಿಗೆ ನಾನೇ ಮಾಡ್ಕೋಬೇಕು, ಮಧ್ಯಾಹ್ನದವರೆಗೂ ಅದರ ಮೇಲೆಯೇ ಬಿದ್ದಿರಬಾರದು ಅಂದ್ರು ಸಮಂತಾ

ಶಾರುಖ್‌ ಪತ್ನಿಗೂ ಡ್ರಗ್ಸ್‌ ನಂಟು? ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದ ಗೌರಿ ಖಾನ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
